You are here
Home > Koppal News > ವಚನಾನುಭವ

ವಚನಾನುಭವ

  ಬಸವನಗರದ ಶಿವಶರಣ ಹಡಪದ ಅಪ್ಪಣ್ಣ ಸಮುದಾಯ ಭವದನಲ್ಲಿ ನಾಳೆ ದಿ.೧೪ ಮಂಗಳವಾರ ಸಂಜೆ ೬ ಗಂಟೆಗೆ ಶಿವಶರಣ ಹಡಪದ ಅಪ್ಪಣ್ಣ ಯುವಕ ಸಂಘದ ವತಿಯಿಂದ ‘ವಚನಾನುಭವ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ.
ಪ್ರವಚನಕಾರ ಎಮ್.ಎಸ್. ನೀಲಕಂಠಪ್ಪ ನಿಜಸುಖಿ ಅಪ್ಪಣ್ಣನವರ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಡಿವಾಳ ಸಮಾಜ ಅಧ್ಯಕ್ಷ ಬಸವರಾಜ ಮಡಿವಾಳ ಮುಖ್ಯ ಆತಿಥ್ಯವಹಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಿತಾ ಸಾ-ಮಿಲ್ ಮಾಲಿಕ ಆನಂದ ಮಾರನಾಳ ವಹಿಸುವರು. ಪ್ರತಿ ಮಂಗಳವಾರ ಸಂಜೆ ೬ ಗಂಟೆಗೆ ವಚನಾನುಭವ ಕಾರ್ಯಕ್ರಮ ನಡೆಲಿದ್ದು ಅತಿಥಿ ಉಪನ್ಯಾಸಕರಿಂದ ೧೨ ನೇ ಶತಮಾನದ ಬಸವಾದಿ ಶರಣರ ಸ್ಮರಣೆ ಹಾಗೂ ಉಪನ್ಯಾಸ ಹಮ್ಮಿಕೊಳ್ಳಲಾಗಿದ್ದು ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶಿವಶರಣ ಹಡಪದ ಅಪ್ಪಣ್ಣ ಯುವಕ ಸಂಘ  ಕೋರಿದೆ.

Leave a Reply

Top