ಕಾರ್ಪೊರೇಟ್ ಕಂಪನಿಗಳು ಸಾಮಾಜಿಕ ಜವಾಬ್ದಾರಿಯನ್ನ ಅರಿತುಕೊಳ್ಳಲಿ- ಗವಿಶ್ರೀಗಳು

ನಮ್ಮ  ಜಿಲ್ಲೆಯಲ್ಲಿ ಹತ್ತಾರು ಕಂಪನಿಗಳು ಕೆಲಸ ಮಾಡುತ್ತಿವೆ. ಇಲ್ಲಿಯ ಜಲ,ನೆಲ, ಜನರನ್ನು ಬಳಸುತ್ತಿವೆ. ಅವುಗಳು ತಮ್ಮ ಅಭಿವೃದ್ದಿಯ ಜೊತೆಗೆ ಸಾಮಾಜಿಕ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಲಿ. ಇಲ್ಲಿಯ ಕಂಪನಿಗಳು ಸ್ಥಳೀಯರಿಗೆ ಕೆಲಸ ನೀಡಿದಲ್ಲಿ ಗುಳೆ ಹೋಗುವ ಸಮಸ್ಯೆಯೇ ಇರುವುದಿಲ್ಲ.  ಕಂಪನಿಗಳು ಕೇವಲ ಲಾಭಕ್ಕಲ್ಲ ಸಮಾಜಕ್ಕೂ ತಮ್ಮ ಕೊಡುಗೆ ನೀಡಲಿ ಎಂದು ಗವಿಮಠದ ಶ್ರೀಗಳು ಹೇಳಿದರು ಅವರು ಇಂದು ಇಂಡಿಯಾ ಎಜುಕೇಟ್ ಟ್ರಸ್ಟ್  ಎಕ್ಸ್ ಇಂಡಿಯಾ ಕಂಪನಿ ಕೊಡಮಾಡಿದ ೩ನೇತ್ರ ಕಣ್ಣಿನ ತಪಾಸಣಾ ಉಪಕರಣದ ಉದ್ಘಾಟನೆ  ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು.
             ಲಯನ್ಸ್ ಕ್ಲಬ್ ನಮ್ಮ ಕೊಪ್ಪಳದಂತ ಹಿಂದುಳಿದ ಜಿಲ್ಲೆಗೆ  ಮರಳುಗಾಡಿನ. ಓಯಾಸಿಸ್ ನಂತೆ ಕೆಲಸ ಮಾಡುತ್ತಿದೆ. ನಿರಂತರವಾಗಿ  ಸೇವಾ ಕಾರ್ಯಗಳು ಜರಗುಲಿ  ಎಂದು ಹೇಳಿದರು. ಇದಕ್ಕೂ ಮೊದಲು ಮಾತನಾಡಿದ ಎಕ್ಸ್ ಇಂಡಿಯಾ ಕಂಪನಿಯ ಅನುರಾಗ್ ರವರು ಉಪಕರಣದ ಕುರಿತು ಮಾತನಾಡಿದರು. ಸೋಮಶೇಖರ ಬಾವಿಯವರು ಸಂಸ್ಥೆಯ ಚಟುವಟಿಕೆಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಕ್ಸ್ ಇಂಡಿಯಾದ ಕ್ಸಿಯಾನ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ಅಭಯಕುಮಾರ ಮೇಹ್ತಾ, ಜವಾಹರ ಜೈನ್, ಡಾ.ಬಸವರಾಜ, ಡಾ. ಹಬೀಬ್, ರವೀಂದ್ರ ದೇಸಾಯಿ,ಶಾಂತಣ್ಣ ಮುದಗಲ್, ಬಸವರಾಜ ಬಳ್ಳೊಳ್ಳಿ,ಪ್ರಭು ಹೆಬ್ಬಾಳ,ಅರವಿಂದ ಅಗಡಿ , ಲಲಿತ್ ಜೈನ್ ಸೇರಿದಂತೆ ಕ್ಲಬ್ ನ  ಇತರ ಸದಸ್ಯರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ವಿವೇಕಾನಂದ ಶಾಲೆಯ ಮಕ್ಕಳು ಮಾಡಿದರೆ ವಿರೇಶ ಕೊಪ್ಪಳ ಮತ್ತು ಮಹೇಶ ಬಳ್ಳಾರಿ ಕಾರ್ಯಕ್ರಮ ನಡೆಸಿಕೊಟ್ಟರು. 

Related posts

Leave a Comment