fbpx

ಗುಲಬರ್ಗಾ ವಿಭಾಗದ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

  ರಾಯಚೂರಿನ ಸೈನ್ಸ್ ಎಜುಕೇಶನ್ ಟ್ರಸ್ಟ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ನೀಡಲು ಉದ್ದೇಶಿಸಿದ್ದು, ಅರ್ಹ ಶಿಕ್ಷಕರು ಅರ್ಜಿ ಸಲ್ಲಿಸಬಹುದಾಗಿದೆ.
  ಗುಲಬರ್ಗಾ ವಿಭಾಗದ ಪ್ರತಿ ಜಿಲ್ಲೆಗೆ ಒಬ್ಬರಂತೆ ೬ ಜಿಲ್ಲೆಗಳ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ ವಿಜ್ಞಾನ ಶಿಕ್ಷಕರನ್ನು ಫೆ.೨೮ ರಂದು ಸಾಯಂಕಾಲ ೩.೦೦ ಗಂಟೆಗೆ ವಿಜ್ಞಾನ ಬೆಟ್ಟದಲ್ಲಿರುವ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ರಾಯಚೂರಿನ ಸರ್.ಸಿ.ವಿ.ರಾಮನ್ ಸಭಾಂಗಣದಲ್ಲಿ ಸನ್ಮಾನಿಸಲಾಗುವುದು.  ಆಸಕ್ತಿಯುಳ್ಳ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನ ಶಿಕ್ಷಕರು, ಉಪನ್ಯಾಸಕರು ತಮ್ಮ ಹೆಸರು, ವಿದ್ಯಾಭ್ಯಾಸ, ಎರಡು ಪಾಸ್‌ಪೋರ್ಟ್ ಸೈಜ್ ಭಾವಚಿತ್ರ, ಮೊಬೈಲ್ ಸಂಖ್ಯೆ, ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳು, ಪ್ರಕಟಿಸಿದ ಪುಸ್ತಕಗಳು, ಪ್ರಮಾಣ ಪತ್ರಗಳು, ಸುದ್ದಿ ತುಣುಕುಗಳು, ಕಾರ್ಯಕ್ರಮದ ಫೋಟೋಗಳು ಇತ್ಯಾದಿ ವಿವರಗಳನ್ನು ತಮ್ಮ ಶಾಲೆ-ಕಾಲೇಜುಗಳ ಮುಖ್ಯಸ್ಥರಿಂದ ಧೃಢೀಕರಿಸಿ ಫೆ.೧೫ ರೊಳಗಾಗಿ ಪ್ರೊ. ಸಿ.ಡಿ. ಪಾಟೀಲ್, ಕಾರ್ಯದರ್ಶಿ, ಸೈನ್ಸ್ ಎಜುಕೇಶನ್ ಟ್ರಸ್ಟ, ರಾಷ್ಟ್ರಕವಿ ಕುವೆಂಪು ವನ, ವಿಜ್ಞಾನ ಬೆಟ್ಟ, ರಾಯಚೂರು ೫೮೪೧೦೩ ಮೊ.೯೪೪೮೪೨೭೫೮೫ ಇವರಿಗೆ ಸಲ್ಲಿಸಬಹುದಾಗಿದೆ  
Please follow and like us:
error

Leave a Reply

error: Content is protected !!