ಸಿ.ಪಿ.ಎಸ್.ಶಾಲೆಗೆ ಶಾಸಕರು ಭೇಟಿ,ಕಟ್ಟಡ ಹಸ್ತಾಂತರ ಹಾಗೂ ದುರಸ್ಥಿಗೆ ಅಧಿಕಾರಿಗಳಿಗೆ ಸೂಚನೆ.

ಕೊಪ್ಪಳ-19- ನಗರದ ಸಿ.ಪಿ.ಎಸ್.ಶಾಲೆಗೆ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಇಂದು ಭೇಟಿ ನೀಡಿ,ಹಾಳಾಗಿರುವ ಕೊಠಡಿಗಳನ್ನು,ಛಾವಣಿಗಳನ್ನು ಹಾಗೂ ಶಾಲಾ ಕಟ್ಟಡದ ಹಸ್ತಾಂತರ ಆಗದಿರುವ ಕುರಿತು ಮಾಹಿತಿ ಪಡೆದರು.ನಂತರ ಶಾಲಾ ಕಟ್ಟಡವನ್ನು ಕಂದಾಯ ಇಲಾಖೆಯಿಂದ ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡುವಂತೆ ಹಾಗೂ ಹಾಳಾಗಿರುವ ಕೊಠಡಿಗಳನ್ನು,ಛಾವಣಿಯನ್ನು ಶೀಘ್ರವೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ನಗರ ಸಭೆಯ ಉಪಾಧ್ಯಕ್ಷರಾದ ಬಾಳಪ್ಪ ಬಾರಕೇರ,ಪ್ರಸನ್ನ ಗಡಾದ,ಗುರುರಾಜ ಹಲಗೇರಿ,ಶಿವಾನಂದ ಹೊದ್ಲೂರ,ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ ಹಾಜರಿದ್ದರು.

Leave a Reply