ಕೆ.ಆರ್.ಎಸ್. ಮುಖಂಡರ ಬಂಧನ : ಸಿ.ಪಿ.ಐ.ಎಂ.ಎಲ್. ಖಂಡನೆ :

ಸಿಂಧನೂರಿನ ಸರಕಾರಿ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣೇಬೈರೇಗೌಢ ಮನವಿ ಸಲ್ಲಿಸಲು ಹೋದ ಕರ್ನಾಟಕ ರೈತ ಸಂಘ ಮತ್ತು ಆರ್.ವೈ.ಎಫ್. ಮುಖಂಡರನ್ನು ಪೊಲೀಸರು ಬಂಧಿಸಿರುವುದು ಕಾಂಗ್ರೆಸ್ ಸರ್ಕಾರದ ಗೂಂಡಾಗಿರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಭಾರದ್ವಾಜ್  ತಿಳಿಸಿದ್ದಾರೆ. 
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಶಾಸಕರ ಗೂಂಡಾಗಿರಿ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಪೂರ್ತಿ ಹದಗೆಟ್ಟು ಹಳೇ ಕಾಂಗ್ರೆಸ್ ಸಂಸ್ಕೃತಿಯನ್ನು ಮುಂದುವರೆಸುತ್ತಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ ಉಷ್ಣಸ್ಥಾವರ ವಿರೋಧಿ ಹೋರಾಟಗಾರರ ಮೇಲೆ ಗೋಲಿಬಾರ್, ಅಮಾಯಕ ರೈತರನ್ನು ಪೊಲೀಸರು ಮನಸೋಇಚ್ಚೆ ಲಾಠಿಗಳಿಂದ ದಂಡಿಸುತ್ತಿರುವುದು ಸಾರ್ವಜನಿಕರಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಇರುವ ನಂಬಿಕೆ ಕಳೆದುಹೋಗಿದೆ. 
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರೈತರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕು. ತಡೆಯಲಾಗದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಅಹಿಂದ ಮುಖಂಡನಾಗಿ ಜನಪರ ಹೋರಾಟದಿಂದ ಜನರನ್ನು ಉಳಿಸಿಕೊಳ್ಳಬೇಕು ಎಂದು ಸಿ.ಪಿ.ಐ.ಎಂ.ಎಲ್. ಒತ್ತಾಯಿಸಿದೆ. 
Please follow and like us:

Related posts

Leave a Comment