ರಂಗಭೂಮಿಯ ಕಿತ್ತೂರ ಚೆನ್ನಮ್ಮ..ಸರೋಜಮ್ಮ ಧುತ್ತರಗಿ…

ಕರ್ನಾಟಕ ಇತಿಹಾಸದಲ್ಲಿ ವೀರನಾರಿ ಕಿತ್ತೂರ ಚೆನ್ನಮ್ಮ, ಒನಕೆ ಓಬವ್ವ ಇನ್ನಿತರರು ಇದ್ದರು ಎಂಬುವದನ್ನು ಇತಿಹಾಸಕರರ ಬರವಣಿಗೆಯ ಮೂಖಾಂತರ ಅವರ ಶೌರ್ಯವನ್ನು ವರ್ಣಿಸಿದರೆ ಅದನ್ನು ಅಕ್ಷರ ಕಲಿತ ಜನ ಮಾತ್ರ ಓದಬಹುದು, ಆದರೆ ಅನಕ್ಷರಸ್ಥರರಿಗೂ ಚೆನ್ನಮ್ಮನ ಶೌರ್ಯ ವೀರತನ ಅರ್ಥೈಸಲು ಸಾದ್ಯವಾಗಲು ಸಮರ್ಥ ಮಾದ್ಯಮವೆಂದರೆ ರಂಗಭೂಮಿ, ರಂಗಭೂಮಿಯಲ್ಲಿ ಚೆನ್ನಮ್ಮ ಪಾತ್ರಕ್ಕೆ ಜೀವ ತುಂಬಿ ಪ್ರತಿರೂಪವನ್ನ ಆಭಿನಯದ ಮುಖಾಂತರ ಅಬಿವ್ಯಕ್ತಿಗೊಳಿಸಿದ ವೀರನಾರಿ ( ರಂಗಭೂಮಿ) ಧೀಮಂತ ನಟಿ ಶ್ರೀಮತಿ ಸರೋಜಮ್ಮ ಧುತ್ತರಗಿ.ಎಂದರೆ ಅತಿಶಯೋಕ್ತಿಯಲ್ಲ.

     ಕೊಪ್ಪಳ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಐತಿಹಾಸಿಕ ಆನೇಗೊಂದಿ ಉತ್ಸವ ಹಾಗೂ ತೀರಾ ಇತ್ತಿಚಿಗೆ ಈಟೀವಿಯ ಸ್ನೇಹದ ಕಡಲು ಕಾರ್ಯಕ್ರಮದಲ್ಲಿ ಪಾಲ್ಗೋಂಡು ವೇದಿಕೆಯಲ್ಲಿ ಕಿತ್ತೂರ ಚೆನ್ನಮ್ಮ ನಾಟಕದ ಮಾತುಗಳನ್ನು ತಮ್ಮ ಕಂಚಿನ ಕಂಠದಿಂದ ಹೇಳಿದಾಗ ಸಭೀಕರು ಸೇರಿದಂತೆ ಎಲ್ಲರ ಎದ್ದು ನಿಂತ ಅಭಿನಂಧಿಸಿದರು. ಸ್ನೇಹದ ಕಡಲು ಕಾರ್ಯಕ್ರಮದ ನಿರೂಪಕರಾದ ಚಿತ್ರನಟ ಈ ಸಮಯದಲ್ಲಿ ಎದ್ದು ನಿಂತು ನಿಬ್ಬೆರಗಾಗಿ ಮುಖವಿಶ್ಮಿತರಾಗಿ ನಿಂತರು. ಅದು ೭೨ರ ವಯಸ್ಸಿನಲ್ಲಿಯೂ ಕಂಚಿ ಕಂಠ ಹೊಂದಿರುವ ಸರೋಜಮ್ಮ ರಂಗಭೂಮಿಯಲ್ಲಿಯ ಸಾಧನೆಗೆ ಸಾಕ್ಷಿಯಾಗಿತ್ತು.
    ಮಾನವರಲ್ಲಿ ಯಾವದಾದರು ಒಂದು ಕಲೆ ಇದೆ ಇರುತ್ತದೆ ಆದರೆ ಈ ಕಲೆಯನ್ನು ಅವರ ಶ್ರೆದ್ದೆ ನಿಷ್ಠೆ ಇದ್ದರೆ ಎಲ್ಲಾ ಸಾದ್ಯ. ಅದರಂತೆ ಸರೋಜಮ್ಮನವರು ಯಾವದೆ ಪಾತ್ರವಿರಲಿ ಆ ಪಾತ್ರಕ್ಕೆ ಜೀವ ತುಂಬಿ ನಾಟಕದಲ್ಲಿ ಸರೋಜಮ್ಮ ಆಗಿರದೆ ಆ ಪಾತ್ರವಾಗಿ ಅಭಿನಯಿಸುತ್ತಾರೆ.
    ಸರೋಜಮ್ಮ ಹುಟ್ಟಿದ್ದು ಇತಿಹಾಸ ಪ್ರಸಿದ್ದ ವೀರಮದಕರಿನಾಯಕ ಆಳಿದ ಕೋಟೆನಾಡು ಚಿತ್ರದುರ್ಗದಲ್ಲಿ. ೧೯೩೯ರಲ್ಲಿ.. ಅಪ್ಪಾಲೆಪ್ಪ ಹಾಗೂ ಅಕ್ಕಮ್ಮ ಮಗಳಾಗಿ ಜನಿಸಿದ ಇವರಿಗೆ ಇಬ್ಬರು ಸಹೋದರರು ಮತ್ತು ನಾಲ್ಕು ಜನ ಸಹೋದರರಿಯರಿದ್ದಾರೆ. ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ನೋಡಾ ಎಂಬಂತೆ ಬಾಲ್ಯದಲ್ಲಿಯೇ ವಿವಿದ ಶಾಲಾ ಸ್ಪರ್ಧೆಯಲ್ಲಿ ಬಹುತೇಕ ಪ್ರಥಮ ಬಹುಮಾನ ಪಡೆದುಕೊಂಡು ಎಲ್ಲಾ ವಿದ್ಯಾರ್ಥಿಗಳಿಕ್ಕಿಂತಲೂ ಮುಂದೆ ಇರುತ್ತಿದ್ದರು. ಶಾಲಾ ದಿನಗಳಲ್ಲಿ ಆಡುತ್ತಿದ್ದ ನಾಟಕದ ಗೀಳು ರಂಗಭೂಮಿಗೆ ಎಳೆದು ತಂದಿತು, ಎನ್ನುತ್ತಾರೆ ಸರೋಜಮ್ಮ.
     

೧೨ ನೇ ವಯಸ್ಸಿನಲ್ಲಿ ಬೆಳಗಾಂವ ಕಂಪನಿಯಲ್ಲಿ ಚಿತ್ರಾಂಗದ ನಾಟಕದಲ್ಲಿ ಕೃಷ್ಣನ ಪಾತ್ರದೊಂದಿಗೆ ರಂಗಭೂಮಿಗೆ

ಪಾದರ್ಪಣೆ ಮಾಡಿ ಕರ್ನಾಟಕದ ಪ್ರಖ್ಯಾತ ಕಂಪನಿಗಳಾದ ಸುಬ್ಬಯ್ಯ ನಾಯ್ಡು, ಹಲಗೇರಿ ಜಟ್ಟೆಪ್ಪ, ಚಿಂದೋಡಿ ವೀರಣ್ಣ, ಗೋಕಾಕ ಬಸಣ್ಣನವರ, ಮಾಸ್ಟರ ಹಿರಣ್ಣಯ್ಯ ಕಂಪನಿಗಳಲ್ಲದೆ ಇನ್ನಿತರ ಕಂಪನಿಗಳಲ್ಲಿ ಅಭಿನಯಿಸಿದ್ದಾರೆ. ರಕ್ತ ರಾತ್ರಿ, ಅಕ್ಷಯಾಂಬರ, ಕೃಷ್ಣಗಾರುಡಿಗ, ಹೇಮರಡ್ಡಿ ಮಲ್ಲಮ್ಮವ, ಹಳ್ಳಿ ಹುಡುಗಿ, ಹಸಿರು ಬಳೆ, ಸಿಂಧೂರ ಲಕ್ಷ್ಮಣ,ತಾಯಿ ಕರಳು ನಾಟಕಗಳಲ್ಲಿ, ಸತ್ಯಭಾಮ, ಉತ್ತರೆ, ಪಾರ್ವತಿ, ಸೀತೆ, ಮಲ್ಲಮ್ಮ, ನಾರದ, ಕೃಷ್ಣ, ಚೆನ್ನಮ್ಮವ, ನರಸವ್ವ, ಹಂಪವ್ವ, ಶೆರಿದಂತೆ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಂಗಭೂಮಿಯ ನಾಟಕಕಾರ ಪಿ ಬಿ ಧುತ್ತರಗಿಯವರ ಸಿದ್ದಲಿಂಗ ವಿಜಯ ನಾಟ್ಯ ಸಂಘದಲ್ಲಿ ಸೇರಿ ಧುತ್ತರಗಿಯವರ ಬಾಳ ಸಂಗಾತಿಯಾಗಿ ಸಿದ್ದಲಿಂಗ ವಿಜಯ ನಾಟ್ಯ ಸಂಘದ ಏಳ್ಗೆಗಾಗಿ ಹೆಗಲಿಗೆ ಹೆಗಲು ಕೊಟ್ಟು ಕಂಪನಿಯ ಶ್ರೇಯೋಭಿವೃದ್ದಿಗೆ ದುಡಿದರು. ಅನಿವಾರ್ಯವಾಗಿ ಕಂಪನಿ ನಿಂತಾಗ ತಟಸ್ಥ ಜೀವನ ನಡೆಸಿದ್ದು ಇದೆ.
      ಪಿ ಬಿ ಧುತ್ತರಗಿ ಹಾಗೂ ಸರೋಜಮ್ಮ ಅದರ್ಶದಂಪತಿಗಳಾಗಿ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತ ಬಂದಿದ್ದರು. ಧುತ್ತರಗಿಯವರ ಪ್ರತಿಯೊಂದು ನಾಟಕದ ಬರವಣೀಗೆಯಲ್ಲಿ ಇವರ ಸೂಚನೆ ಹಾಗೂ ಜಾರ್ಣಮೆ ಇದ್ದೆ ಇದೆ. ಇವರ ಸುಖ ದುಖಃಗಳನ್ನು ಸಮಾನವಾಗಿ ಹಂಚಿಕೊಂಡಿದ್ದರು ಎಂಬುವದಕ್ಕೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದ ಸಂದರ್ಭ, ಅನಾರೊಗ್ಯದಿಂದ ಬಳಲುತ್ತಿದ್ದ ಪತಿ ಧುತ್ತರಗಿಯವರ, ಇದೆ ದಿನ ಪ್ರಶಸ್ತಿ ವಿತರಣೆಗಾಗಿ ಬೆಂಗಳೂರಿಗೆ ಹೋಗಿದ್ದರು. ಇದೆ ಸಂದರ್ಭದಲ್ಲಿ ಧೂತ್ತರಗಿಯವರ ನಿಧನ ಎರಡು ಒಂದೆ ಸಮಯದಲ್ಲಿ ಪ್ರಶಸ್ತಿ ಖುಷಿ ಅನುಭವಿಸುವ ಮುನ್ನ ಸೂತಕದ ದುಖಃ ಅನುಭವಿಸಿದರು.
       ಸದ್ಯ ಪತಿ ಕಳೆದಕೊಂಡು ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ವಾಸವಾಗಿದ್ದಾರೆ. ಆಕಶವಾಣಿಯ ಕಲಾವಿದರಾಗಿ, ಅಮೇಚೂರ ನಾಟಕಗಳಿಗೆ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ನಿರ್ದೇಶನದಲ್ಲಿ ವಹಿಸುವ ಶ್ರೆದ್ದೆ ಹಾಗೂ ಒಬ್ಬ ಅಪ್ಪಟ ಕಲಾವಿದರಾಗಿ ಬೆಳೆಸುವಂತಹ ಮರ್ಗದರ್ಶನ ಮಾಡುತ್ತಾರೆ. ಈ ಇಳಿವಯಸ್ಸಿನಲ್ಲಿಯೂ ಆಗಾಗ ನಾಟಕಗಳನ್ನು ಮಡುತ್ತಾ ಮಾಡುಸುತ್ತಿದ್ದಾರೆ.
       ಮಗ ಬಸವರಾಜ ಪೇಂಟಿಂಗ್. ಮಗಳು ಶ್ರೀದೇವಿ ಇಗ ಸಂಗೀತ ಶಿಕ್ಷಕಿಯಾಗಿದ್ದರಿಂದ ಅವರೊಂದಿಗೆ ಕನಕಪೂರದಲ್ಲಿದ್ದಾರೆ. ಮಗಳ ಸಂಗಿತ ಸಾಧನೆ ಸರೋಜಮ್ಮ ತಾವು ಕಲಿತ ಸಂಗಿತ ವಿದ್ಯೆ ಪ್ರೇರಣೆ ಹಾಗೂ ಸಂಗಿತದ ಪರಿಸರ ನೀಡಿದ್ದಾರೆ.
     ೧೯೯೪ ರಲ್ಲಿ ನಾಟಕ ಆಕಾಡೆಮಿ ಪ್ರಶಸ್ಸತಿ, ೨೦೦೭ ರಲ್ಲಿ ರಾಜ್ಯೋತ್ಸವ, ನಾಡಿನ ಸಂಘ ಸಂಸ್ಥೆಗಳು, ಮಠ ಮಾನ್ಯಗಳು ಆತ್ಮೀಯವಾಗಿ ಪ್ರಾಶಸ್ತಿ ನೀಡಿ ಗೌರವಿಸಿವೆ. ಪ್ರತಿಷ್ಥಿತ ಗುಬ್ಬಿ ವೀರಣ್ಣ ಪ್ರಶಸ್ತಿಗೆ ನಿರೀಕ್ಷೆಯಲ್ಲಿದ್ದಾರೆ.
      ಧಾರವಾಡ ಆಕಶವಾಣಿ ಎ ಗ್ರೇಡ್ ಕಲಾವಿದರಾದ ಇವರು ಬಾನುಲಿಯಲ್ಲಿ ಇವರ ನಾಟಕಗಳು ಜನ ಮೆಚ್ಚಿಗೆ ಗಳಿಸಿವೆ. ಕರ್ನಾಟಕ ನಾಟಕ ಆಕಾಡೆಮಿಯು ಇವರ ರಂಗಗೀತೆಗಳ ಧ್ವನಿಸುರಳಿಯನ್ನು ಹೊರತಂದಿದೆ. ಇನ್ನು ಅನೇಕ ಕಡೆ ರಂಗಗೀತೆಗಳ ಕಾರ್ಯಕ್ರಮ ನೀಡುತ್ತಿದ್ದಾರೆ.
      ವೃತ್ತಿ ರಂಗಭೂಮಿ ಸಂಕಷ್ಟದಲ್ಲಿದ್ದಾಗಲೂ ರಂಗಭೂಮಿ ಉಳಿವಿಗಾಗಿ ಶ್ರಮಿಸುತ್ತಿರುವವರಲ್ಲಿ ಇವರು ಒಬ್ಬರು ಕೊಂಡಿಯಾಗಿದ್ದಾರೆ.
                                                              ಶರಣಪ್ಪ ಬಾಚಲಾಪೂರ
                                                                ಕೊಪ್ಪಳ
Please follow and like us:
error