ಕನ್ನಡ ಸಾಹಿತ್ಯ ಪರಿಷತ್ತು :ವಿವಿಧ ದತ್ತಿನಿಧಿ ಪ್ರಶಸ್ತಿ : ಅರ್ಜಿ ಆಹ್ವಾನ


ಮಲ್ಲಿಕಾ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಅತ್ಯುತ್ತಮ ಲೇಖಕಿಯರ ಕೃತಿಗೆ ರೂ.೫೦೦/- ಬಹುಮಾನ ನೀಡಲಾಗುವುದು, ಹಿರಿಯ-ಕಿರಿಯ ಲೇಖಕಿಯರು ಎಂಬ ವ್ಯತ್ಯಾಸವಿಲ್ಲ. ಯಾರು ಬೇಕಾದರೂ ಭಾಗವಹಿಸಬಹುದು. ಸ್ವತಂತ್ರ ಅಥವಾ ಅನುವಾದಿತ ಕೃತಿಯಾದರೂ ಆಗಬಹುದು,
ಅಂತರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಮಹಿಳೆಯರ ಅತ್ಯುತ್ತಮ ಕೃತಿಗೆ ರೂ.೫೦೦/- ಬಹುಮಾನವನ್ನು ನೀಡಲಾಗುವುದು, ಸ್ವತಂತ್ರ ಕೃತಿಯಾಗಿರಬೇಕು, ಅನುವಾದ ಕೃತಿಗಳನ್ನಾಗಲೀ, ಪುನರ್ ಮುದ್ರಣಗೊಂಡ ಕೃತಿಗಳನ್ನಾಗಲೀ ಪರಿಗಣಿಸುವುದಿಲ್ಲ.
ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಲೇಖಕಿ ಒಬ್ಬರ ಮಹತ್ವದ ಕೃತಿಗೆ ರೂ.೫೦೦/- ಬಹುಮಾನ ನೀಡಲಾಗುವುದು.
ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಅತ್ಯುತ್ತಮ ಮಹಿಳಾ ಸಾಹಿತ್ಯದ (ಮಹಿಳೆಯರನ್ನು ಕುರಿತು ಅಥವಾ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರಚಿತವಾದ) ಕೃತಿಗೆ ರೂ.೫೦೦/- ಬಹುಮಾನ ನೀಡಲಾಗುವುದು.
ನೀಲಗಂಗಾ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಮಹಿಳೆಯರ ಪ್ರಬಂಧ, ಕವನ, ಕಾವ್ಯ ಮತ್ತು ಸಮಕಾಲಿನ ಮೌಲಿಕ ವಿಚಾರವುಳ್ಳ ಗ್ರಂಥಕ್ಕೆ ರೂ.೫೦೦/- ಬಹುಮಾನ ನೀಡಲಾಗುವುದು.
ಶಾರದಾ ಆರ್.ರಾವ್ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಉದಯೋನ್ಮುಖ ಮಹಿಳಾ ಬರಹಗಾರರ ಅತ್ಯುತ್ತಮ ಕೃತಿಗೆ ರೂ.೨೫೦/- ಬಹುಮಾನ ನೀಡಲಾಗುವುದು.
ದಿ|| ಗೌರಮ್ಮ ಹಾರ‍್ನಹಳ್ಳಿ ಕೆ.ಮಂಜಪ್ಪ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಲೇಖಕಿಯರಿಂದ ರಚಿತವಾದ ಯಾವುದೇ ಪ್ರಕಾರದ ಕೃತಿಗೆ ರೂ.೧೦೦೦/- ಬಹುಮಾನ ನೀಡಲಾಗುವುದು.
ದಿ|| ಎಚ್.ಕರಿಯಣ್ಣ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಲೇಖಕಿಯರಿಂದ ರಚಿತವಾಗಿರುವ ಮಕ್ಕಳ ಪುಸ್ತಕಕ್ಕೆ ರೂ.೫೦೦/- ಬಹುಮಾನ ನೀಡಲಾಗುವುದು. ಈ ಎಲ್ಲಾ ದತ್ತಿ ಸ್ಪರ್ಧೆಗೆ ಮಹಿಳೆಯರು ಬರೆದ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು.
ಡಾ|| ಎಚ್.ನರಸಿಂಹಯ್ಯ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ಸಂಬಂಧಿಸಿದ ಶ್ರೇಷ್ಠ ಕೃತಿಗೆ ರೂ.೫೦೦/- ಬಹುಮಾನ ನೀಡಲಾಗುವುದು.
ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಹರಿದಾಸ ಸಾಹಿತ್ಯ ಕುರಿತ ಕೃತಿಗೆ ರೂ.೨೫೦/- ಬಹುಮಾನ ನೀಡಲಾಗುವುದು.
ಜಿ.ಪಿ.ರಾಜರತ್ನಂ ಸಂಸ್ಮರಣ ದತ್ತಿ ಪ್ರಶಸ್ತಿ : (ಮಕ್ಕಳ ಪುಸ್ತಕ ಬಹುಮಾನ ಸ್ಪರ್ಧೆ-ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರಿಗೆ ಮಾತ್ರ ಅವಕಾಶ) ೨೦೧೩ ರಲ್ಲಿ ಪ್ರಕಟವಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರು ಬರೆದಿರುವ ಅತ್ಯುತ್ತಮ ಮಕ್ಕಳ ಪುಸ್ತಕಕ್ಕೆ ರೂ.೨೫೦/- ಬಹುಮಾನ ನೀಡಲಾಗುವುದು. (ಪುಸ್ತಕ ೧೫ ವರ್ಷ ವಯಸ್ಸಿನ ಒಳಗಿರುವ ಮಕ್ಕಳು ಓದುವಂತಹ ಕೃತಿ ಯಾಗಿರಬೇಕು).
ದಿ|| ಕೆ.ವಿ.ರತ್ನಮ್ಮ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಉದಯೋನ್ಮುಖ ಬರಹಗಾರರ ಅತ್ಯುತ್ತಮ ಚೊಚ್ಚಲ ಪದ್ಯಕೃತಿ ಒಂದಕ್ಕೆ ರೂ.೫೦೦/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.
ರತ್ನಾಕರವರ್ಣಿ-ಮುದ್ದಣ್ಣ-ಅನಾಮಿಕ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಅತ್ಯುತ್ತಮ ಗದ್ಯಕೃತಿ ಒಂದಕ್ಕೆ ಹಾಗೂ ಅತ್ಯುತ್ತಮ ಪದ್ಯಕೃತಿ ಒಂದಕ್ಕೆ ತಲಾ ೫೦೦/-ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.
ಪಿ.ಶಾಂತಿಲಾಲ್ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಜೈನ ಸಾಹಿತ್ಯ ಕುರಿತ ಯಾವುದೇ ಪ್ರಕಾರದ ಕನ್ನಡ ಪುಸ್ತಕಕ್ಕೆ ರೂ.೫೦೦/- ಬಹುಮಾನ ನೀಡಲಾಗುವುದು.
ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾಗಿರುವ ಅತ್ಯುತ್ತಮವಾದ ಜಾನಪದ ಸಾಹಿತ್ಯ ಕೃತಿ ಒಂದಕ್ಕೆ ರೂ.೫೦೦/- ಬಹುಮಾನ ನೀಡಲಾಗುವುದು.
ಜಯಲಕ್ಷ್ಮಮ್ಮ ಬಿ.ಎಸ್.ಸಣ್ಣಯ್ಯ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಪ್ರಾಚೀನ ಸಂಪಾದಿತ ಕೃತಿಗೆ ರೂ.೧೦೦೦/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.
ಕುಂಬಾಸ್ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಕನ್ನಡ ಹಾಸ್ಯ ಸಾಹಿತ್ಯ ಕೃತಿಗೆ ರೂ.೫೦೦/- ಬಹುಮಾನ ನೀಡಲಾಗುವುದು. (ಹಾಸ್ಯ ಸಾಹಿತ್ಯದ ಬಗ್ಗೆ ಬರೆದಿರುವ ಪುಸ್ತಕ, ಲೇಖನ, ಚುಟುಕು ಇತ್ಯಾದಿಗಳ ಬಗ್ಗೆ ವಿವರವಾದ ಪರಿಚಯ ಬರೆದು ಕಳುಹಿಸುವುದು).
ಪ್ರೊ|| ಡಿ.ಸಿ.ಅನಂತಸ್ವಾಮಿ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಅತ್ಯುತ್ತಮ ಚೊಚ್ಚಲ ಕವನ ಸಂಕಲನಕ್ಕೆ ರೂ.೫೦೦/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.
ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ದೀನ ದಲಿತರ ಮತ್ತು ಶೋಷಿತ ವರ್ಗಗಳ ರಕ್ಷಣೆಗೆ ಶ್ರಮಿಸುವ ವ್ಯಕ್ತಿಗಳ ಬಗ್ಗೆ ಸಾಹಿತ್ಯ ಕೃತಿಗೆ ರೂ.೧೦೦೦/- ಬಹುಮಾನ ನೀಡಲಾಗುವುದು. ಉದಯೋನ್ಮುಖ ಬರಹಗಾರರು, ಬರಹಗಾರ್ತಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಸಿಸು ಸಂಗಮೇಶ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿಗೆ ರೂ.೫೦೦/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.
ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಉತ್ತಮ ಸಾಹಿತ್ಯ ಕೃತಿಗೆ ರೂ.೫೦೦/- ಬಹುಮಾನ ನೀಡಲಾಗುವುದು. (ರಾಯಚೂರು ಜಿಲ್ಲೆಯ ಬರಹಗಾರರಿಗೆ ಮಾತ್ರ ಸೀಮಿತ).
ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಸಣ್ಣಕಥಾ ಸಂಕಲನ ಕೃತಿಗೆ ರೂ.೫೦೦/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.
ಡಾ|| ಆರ್.ಜೆ.ಗಲಗಲಿ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಉತ್ತಮ ಕವನ ಸಂಕಲನ ಒಂದಕ್ಕೆ ರೂ.೧೦೦೦/- ಬಹುಮಾನ ನೀಡಲಾಗುವುದು ಬೆಳಗಾವಿ ಜಿಲ್ಲೆಯ ಬರಹಗಾರರಿಗೆ ಮಾತ್ರ ಅವಕಾಶ.
ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ.ಮದನಕೇಸರಿ ಜೈನ ದತ್ತಿ ಪ್ರಶಸ್ತಿ : ೨೦೧೩ ರಲ್ಲಿ ಪ್ರಕಟವಾದ ಯಾವುದೇ ಜೈನ ಸಾಹಿತ್ಯ ಧರ್ಮಕ್ಕೆ ಸಂಬಂಧಪಟ್ಟ ಕೃತಿಗೆ ಬಹುಮಾನ, ಬಹುಮಾನದ ಮೊತ್ತ ರೂ. ೭,೫೦೦/.
ವಿಜಾಪುರ ಜಿಲ್ಲಾ ಸಮೀರವಾಡಿಯಲ್ಲಿ ನಡೆದ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ದತ್ತಿ ಪ್ರಶಸ್ತಿ (ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಯ ಲೇಖಕ ಲೇಖಕಿಯರಿಗೆ ಮಾತ್ರ ಅವಕಾಶ) : ೨೦೧೩ ರಲ್ಲಿ ಪ್ರಕಟವಾದ ಸಣ್ಣಕತೆ, ಕಾದಂಬರಿ, ಕಾವ್ಯ, ನಾಟಕ, ಮಕ್ಕಳ ಸಾಹಿತ್ಯ ಹೀಗೆ ಐದು ಪ್ರಕಾರದ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಒಂದೊಂದು ಪ್ರಕಾರದ ಪುಸ್ತಕಕ್ಕೆ ತಲಾ ರೂ.೫೦೦/- ಬಹುಮಾನ ನೀಡಲಾಗುವುದು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬಾಗಲಕೋಟೆಯ ಜಿಲ್ಲಾಧ್ಯಕ್ಷರು ನಡೆಸುತ್ತಾರೆ.
ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ :  ೨೦೧೩ ರಲ್ಲಿ ಪ್ರಕಟವಾದ ಅತ್ಯುತ್ತಮ ಕಾದಂಬರಿ ಕೃತಿಗೆ ರೂ.೫,೦೦೦/- ಬಹುಮಾನ ನೀಡಲಾಗುವುದು, ೨೦೧೩ ರಲ್ಲಿ ಪ್ರಕಟವಾದ ಸಣ್ಣಕಥಾ ಸಂಕಲನಗಳನ್ನು ಸ್ಪರ್ಧೆಗೆ ಕಳುಹಿಸಬಹುದು ರೂ.೩,೦೦೦/- ಬಹುಮಾನ ನೀಡಲಾಗುವುದು, ೨೦೧೩ ರಲ್ಲಿ ಪ್ರಕಟವಾದ ಮಕ್ಕಳ ಸಾಹಿತ್ಯ ಕೃತಿಗೆ ರೂ.೨,೦೦೦/- ಬಹುಮಾನ ನೀಡಲಾಗುವುದು, ೨೦೧೩ ರಲ್ಲಿ ಪ್ರಕಟವಾದ ಅನುವಾದಿತ ಕೃತಿಗಳು, ವೈಚಾರಿಕ ಲೇಖನಗಳು ಕೃತಿಗೆ ರೂ.೨೦೦೦/- ಬಹುಮಾನ ನೀಡಲಾಗುವುದು,

: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ೨೦೧೨ ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

Please follow and like us:

Related posts

Leave a Comment