ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶಕ್ಕೆ ಆಯ್ಕೆ

ಕೊಪ್ಪಳ  : ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ದಿನಾಂಕ ೩೦-೧೧-೨೦೧೩ ರಿಂದ ೦೨-೧೨-೨೦೧೩ ರವರೆಗೆ ೨೦೧೩ ನೇ ಸಾಲಿನ  ರಾಜ್ಯಮಟ್ಟದ ರಾಷ್ಟೀಯ ಮಕ್ಕಳ ವಿಜ್ಞಾನ ಸಮಾವೇಶ ಜರುಗಿತು. ಈ ಸಮಾವೇಶದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿಯ ಸರಕಾರಿ ಪ್ರೌಢ ಶಾಲೆಯ ಕು.ಹೇಮಾವತಿ ಹಾಗೂ ಯಲಬುರ್ಗಾ ತಾಲ್ಲೂಕಿನ ಕುಕನೂರಿನ ವಿದ್ಯಾನಂದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಕು.ಸ್ವಾತಿ ಪಾಟೀಲ ಶಕ್ತಿ ಬಳಸಿ, ಉಳಿಸಿ, ಹಾಗೂ ಅನ್ವೇಶಿಸಿ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೂ  ರಾಷ್ಟ ಮಟ್ಟದ ಸಮಾವೇಶವು ದಿನಾಂಕ ೨೭-೧೨-೨೦೧೩ ರಂದು ಭೂಪಾಲ್‌ನಲ್ಲಿ ನೆಡಯಲಿದೆಯೆಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕರಾದ ಶಿಕ್ಷಕ  ಮರಿಶಾಂತ ಶೆಟ್ಟರ್ ತಿಳಿಸಿದ್ದಾರೆ.

 
 

Leave a Reply