ಕಾಂಗ್ರೆಸ್,ಬಿಜೆಪಿ ಧೂಳಿಪಟ,ಜೆಡಿಎಸ್‌ಗೆ ಜಯ- ಕೆ.ಎಂ.ಸಯ್ಯದ್

ಕೊಪ್ಪಳ :  ಜಾತ್ಯತೀತ ತತ್ವಗಳನ್ನು ಹೊಂದಿರುವ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸುಭದ್ರ ಆಡಳಿತ ನೀಡಲಿದೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಈ ಉಪಚುನಾವಣೆ ದಿಕ್ಸೂಚಿಯಾಗಲಿದೆ, ಮತದಾರರ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ಯುವ ಮುಖಂಡ ಕೆ.ಎಂ.ಸಯ್ಯದ್ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ಸಂಪತ್ತು ಲೂಟಿಯಾಗಲು ಕಾಂಗ್ರೆಸ್ಸಿಗರೂ ಕಾರಣ. ಅಕ್ರಮ ಗಣಿಗಾರಿಕೆಗೆ ಅವರೇ ಮೂಲಪುರುಷರು. ಜೆಡಿಎಸ್ ವಿರುದ್ದ ಮಾತನಾಡುವದಕ್ಕೆ  ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನೈತಿಕ ಹಕ್ಕಿಲ್ಲ ಎಂದರು. ಕಾಂಗ್ರೆಸ್,ಬಿಜೆಪಿ ಧೂಳಿಪಟವಾಗುವುದು ಖಚಿತ,ಜೆಡಿಎಸ್‌ಗೆ ಜಯ ಖಚಿತ. ಜೆಡಿಎಸ್ ಗೆ ಮತ ನೀಡಿ ಹೆಚ್.ಡಿ.ಕುಮಾರಸ್ವಾಮಿಯವರ ಕೈ ಬಲಪಡಿಸಬೇಕೆಂದು ಕೆ.ಎಂ.ಸೈಯದ್  ಮತದಾರರಲ್ಲಿ ಮನವಿ ಮಾಡಿದರು.
ನಗರದ ೧೭ಮತ್ತು ೧೮ನೇ ವಾರ್ಡಿನಲ್ಲಿ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ಮಾಲಿಪಾಟೀಲ್ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಹಿರಿಯ ಜೆಡಿಎಸ್ ನಾಯಕ ಜಮೀರ್ ಅಹ್ಮದ್ ಮಾತನಾಡಿ ಕಾಂಗ್ರೆಸ್  ಮತ್ತು ಬಿಜೆಪಿ ಅಭ್ಯರ್ಥಿಗಳು ಸೋಲುವುದು ಖಚಿತ.  ಪ್ರದೀಪಗೌಡ ಮಾಲಿಪಾಟೀಲ್ ಗೆಲುವು  ಖಚಿತ ಎಂದರು. ಈ  ಸಂದರ್ಭದಲ್ಲಿ  ಜೆಡಿಎಸ್ ನಾಯಕರಾದ ಬಾಲರಾಜ್ ಕೊಳ್ಳೆಗಾಲದ ಮಾಜಿ ಶಾಸಕರು, ಇಮ್ರಾನ್,ಅರೀಫ್  ಸೇರಿದಂತೆ ಅನೇಕ ಕಾರ್ಯಕರ್ತರು, ಮುಖಂಡರು,ಮಹಿಳೆಯರು ಪ್ರಚಾರ ಕಾರ್‍ಯದಲ್ಲಿ ಪಾಲ್ಗೊಂಡಿದ್ದರು.
Please follow and like us:
error