ಕಳಪೆ ಔಷಧಿ : ಸಾರ್ವಜನಿಕರಿಗೆ ಸೂಚನೆ

 : ಕೆಲವು ಕಂಪನಿಗಳು ತಯಾರಿಸಿರುವ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬುದಾಗಿ ಔಷಧ ನಿಯಂತ್ರಣ ಇಲಾಖೆಯ ಔಷಧಿ ವಿಶ್ಲೇಷಕರು ಘೋಷಿಸಿರುವುದರಿಂದ, ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ಇಂತಹ ಔಷಧಿಯನ್ನು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಹಾಗೂ ಔಷಧದ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ಹೆಸರಿನ ಯಾವುದೇ ಔಷಧಿಗಳನ್ನು ವಿತರಿಸಬಾರದು ಎಂದು ಕೊಪ್ಪಳದ ಔಷಧ ನಿಯಂತ್ರಣ ಇಲಾಖೆ ಸೂಚನೆ ನೀಡಿದೆ.
         ಡಿಸ್ಪಿ-ಎಸ್ (ಡೈಕ್ಲೋಫಿನ್ಯಾಕ್ ಪೋಟಾಷಿಯಂ ಮತ್ತು ಸೆರಾಟಿಯೋಪೆಪ್ಟಿಡೇಸ್ ಟ್ಯಾಬ್ಲೆಟ್ಸ್), ಎಂಟಿ೧೩೪೨೭೨, ಮೆ.ಮಾಸ್ಕೋಟ್ ಹೇಲ್ತ್ ಸೀರೀಸ್ ಪ್ರೈ.ಲಿ. ಹರಿದ್ವಾರ. ಪೇಬ್ಲೋ-ಡಿ (ಪ್ಯಾಂಟೋಪ್ರಜೋಲ್ ಹಾಗೂ ಡಾಮಪೆರಿಡೋನ್ ಟ್ಯಾಬ್ಲೆಟ್ಸ್), ಡಿ೩೦೯೩, ಮೆ.ಡಿ.ಎಮ್.ಫಾರ್ಮಾ, ಸೋಲನ್(ಹೆಚ್.ಪಿ). ರೋವೇಟ್ (ರಬೇಪ್ರಜೋಲ್ ಸೋಡಿಯಂ ಟ್ಯಾಬ್ಲೆಟ್ಸ್ ಐಪಿ), ಡಿ೩೮೯೩, ಮೆ.ಡಿ.ಎಮ್.ಫಾರ್ಮಾ, ಸೋಲನ್ (ಹೆಚ್.ಪಿ.). ಸಿಪ್ರೋಮ್-೫೦೦(ಸಿಪ್ರೋಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐ.ಪಿ.), ಎನ್‌ಡಿಟಿ-೨೨೦, ಮೆ. ಪಾರ್ಕಿನ್ ಲ್ಯಾಬೋರೇಟರೀಸ್, ರೂರ್ಕಿ. ಸಲ್ಛಾಡಿಮೈಡಿನ್ ಟ್ಯಾಬ್ಲೆಟ್ಸ್ ಬಿಪಿ ವೆಟ್ ೦.೫ ಗ್ರಾಂ, ಎಸ್‌ಡಿಎಮ್೦೪೪, ಮೆ.ಫ್ಲೌರಿಷ್ ಫಾರ್ಮಾ, ದಮನ್. ರಾಕ್ಸಿಸನ್ (ರಾಕ್ಸಿಥ್ರೋಮೈಸಿನ್ ಟ್ಯಾಬ್ಲೆಟ್ಸ್ ಐ.ಪಿ., ಎಸ್.ಟಿ.-೧೨೮೩೪, ಮೆ.ಸನ್‌ಲೈಫ್ ಸೈನ್ಸಸ್,  ರೂರ್ಕಿ. ಬಿಕೈನ್-ಎ ಇಂಜೆಕ್ಷನ್ (ಲೊಗ್ನೋಕೈನ್ ಹೈಡ್ರೋಕ್ಲೋರೈಡ್ ಮತ್ತು ಆಡ್ರಿನಲೈನ್ ಬೈಟಾರ್ಟರೇಟ್ ಇಂಜೆಕ್ಷನ್ ಐ.ಪಿ.), ಎಂವಿ೩ಕೆ೨೮, ಮೆ.ಮಾರ್ಟಿನ್ ಮತ್ತು ಬ್ರೌನ್ ಬಯೋ ಸೈನ್ಸ್‌ಸ್, ಸೋಲನ್. ಸಿಲಿಡಾನ್ (ಪ್ರೋಪಿಫೆನಜೋನ್, ಪ್ಯಾರಾಸಿಟಮೋಲ್ ಮತ್ತು ಕೆಫಿನ್ ಟ್ಯಾಬ್ಲೆಟ್ಸ್), ಬಿಟಿ-೧೩೧೧೫, ಮೆ.ಪ್ಯಾಂಥರ್ ಹೇಲ್ತ್ ಕೇರ್ ಪ್ರೈ.ಲಿ. ರೂರ್ಕಿ. ಫೆರ್ರೌಸ್ ಸಲ್ಫೇಟ್ ಮತ್ತು ಫೋಲಿಕ್ ಆಸಿಡ್ ಟ್ಯಾಬ್ಲೆಟ್ಸ್, ಐಎಫ್‌ಎಲ್-೧೩-೪೨೩, ಮೆ.ಹೆಚ್.ಎಲ್.ಎಲ್.ಲೈಫ್ ಕೇರ್ ಲಿ. ಕಣಗಲಾ. ಕಾರ್ಡೆಮ್-೩೦ ಟ್ಯಾಬ್ಲೆಟ್ಸ್ (ಡಿಲ್ಟಿಯಾಜೆಮ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್), ೦೩೪೦೨ಪಿ, ಮೆ.ಎಎಫ್‌ಡಿ ಲ್ಯಾಬ್ ಪ್ರೈ.ಲಿ., ಬೆಂಗಳೂರು. ರಿವಾಜ್ (ರಬೆಪ್ರಜೋಲ್ ಟ್ಯಾಬ್ಲೆಟ್ಸ್ ಐಪಿ), ಡಿ೩೯೦೦, ಮೆ.ಡಿ.ಎಮ್.ಫಾರ್ಮಾ, ಸೋಲನ್.
        ಈ ಔಷಧಿಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದೆಂದು ಈ ಮೂಲಕ ಎಚ್ಚರಿಸಲಾಗಿದೆ. ಹಾಗೂ ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ, ಅಥವಾ ವಿತರಣೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರು- ೦೮೫೩೯-೨೨೧೫೦೧ ಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ  

Leave a Reply