ರಸ್ತೆ ಸುರಕ್ಷಾ ಸಂಪ್ತಾಹ ದಿನಾಚರಣೆಯ ಅಂಗವಾಗಿ ಬೀದಿ ನಾಟಕ ಪ್ರದರ್ಶನ

  ೨೫ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಂಪ್ತಾಹ ದಿನಾಚರಣೆಯ ಅಂಗವಾಗಿ ಜಿ.ಎಮ್.ಆರ್. ವರಲಕ್ಷ್ಮೀ ಪೌಂಡೇಶನ್ ಹೊಸಳ್ಳಿ ಹಾಗೂ ಶ್ರೀ ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘ ಅಳವಂಡಿ ಸಹಯೋಗದಲ್ಲಿ ದಿನಾಂಕ ೧೧-೦೧-೨೦೧೪ ರಿಂದ ೧೩-೦೧-೨೦೧೪ ರ ವರೆಗೆ ೩ ದಿನಗಳ ವರೆಗೆ ಕುಷ್ಟಗಿ, ಬಾಹದ್ದೂರ ತಾಂಡಾ ಮತ್ತು ಹಿರೇವಂಕಲಕುಂಟಾ ಗ್ರಾಮಗಳಲ್ಲಿ ರಸ್ತೆ ಸುರಕ್ಷಾ ಕಾರ್ಯಕ್ರಮ ಕುರಿತು ಜನಜಾಗೃತಿ ಗೀಓತೆಗಳ ಮುಖಾಂತರ ಜನರಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು. ಲೈಸೆನ್ಸ ಇಲ್ಲದೆ ಗಾಡಿ ಓಡಿಸುವುದು, ಹೆಲ್ಮೆಟ್ಟ ಇಲ್ಲದೆ ಗಾಡಿ ಓಡಿಸುವುದು, ಮೂರುಜನ ಪ್ರಯಾಣಿಕರು ಒಂದೇ ವಾಹನದಲ್ಲಿ ಪ್ರಯಾಣಿಸುವುದು, ಮೊಬೈಲ್ ಬಳಕೆ ಮಾಡುತ್ತಾ ವಾಹನ ಚಲಾಯಿಸುವುದು, ರಸ್ತೆ ನಿಯಮಗಳನ್ನು ಉಲ್ಲಂಗಿಸುವುದು ಸರಿಯಾದ ಕ್ರಮ ಅಲ್ಲ, ಜನರು ಕಾನೂನಿನ ರೀತಿ ನೀತಿಗಳನ್ನು ಸರಿಯಾಗಿ ಪಾಲಿಸಿದರೆ ಅಪಾಯದಿಂದ ಪಾರಾಗಬಹುದು ಅದರಿಂದ ಉತ್ತಮ ಜೀವನ ನಡೆಸಬಹುದು. ಹಾಗೂ ಅಪಗಾತ ಅನಾಹುತಗಳಿಂದ ಪಾರಾಗಬಹುದು ಎಂಬುದರ ಬಗ್ಗೆ ಬೀದಿನಾಟಕ ಕಲಾವಿದರಾದ ಸಿದ್ದಲಿಂಗಯ್ಯ ಗೊರ್ಲೆಕೊಪ್ಪ ವೀರೇಶ ಹಾಲಗುಂಡಿ, ಹನಮಂತಪ್ಪ ಎಲಿಗಾರ, ಶೇಖಪ್ಪ ಸೆಟ್ಟರ, ಯಲ್ಲಪ್ಪ ಬನ್ನಿಕೊಪ್ಪ, ಗ್ಯಾನೇಶ ಬಡಿಗೇರ, ಈಶಯ, ನಿಂಗಮ್ಮ, ಮತ್ತು ಶಶಿಕಲಾ ಕೊಪ್ಪಳ, ಮತ್ತು ಜಿ.ಎಮ್.ಆರ್ ವರಕ್ಷ್ಮೀ ಫೌಂಡೇಶನ್ ಸಿಬ್ಬಂಧಿಗಳಾದ ವಿರೇಶ ಹಾಗೂ ಹನುಮೇಶ ಮತ್ತು ಪೊಲೀಸ್ ಸಿಬ್ಬಂಧಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Leave a Reply