ಇರಕಲ್ಲಗಡ ಕ್ಷೇತ್ರ ಚುನಾವಣೆ : ಕಣದಲ್ಲಿ ೦೩ ಅಭ್ಯರ್ಥಿಗಳು

 ಜಿಲ್ಲಾ ಪಂಚಾಯತಿಯ ಇರಕಲ್ಲಗಡ ಕ್ಷೇತ್ರ ಉಪಚುನಾವಣೆ ಸಂಬಂಧ ಉಮೇದುವಾರಿಕೆಯನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದ ಫೆ. ೧೮ ರಂದು ಯಾವುದೇ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಂಡಿಲ್ಲ.  ಇದರಿಂದಾಗಿ ೦೩ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದುಕೊಂಡಂತಾಗಿದೆ.
  ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ ಇಂತಿದೆ.  ಜೆಡಿಎಸ್- ರೇಣುಕಮ್ಮ ಗಂಡ ನಿಂಗಪ್ಪ ಕುಷ್ಟಗಿ.  ಕಾಂಗ್ರೆಸ್-  ರೇಣುಕಾ ಗಂಡ ನಿಂಗಪ್ಪ ಹಾಗೂ ಬಿ.ಜೆ.ಪಿ- ಕಸ್ತೂರಮ್ಮ ಗಂಡ ಬಸನಗೌಡ ಅವರು ಸ್ಪರ್ಧಾ ಕಣದಲ್ಲಿದ್ದಾರೆ.   ಮತದಾನವು ಫೆ. ೨೬ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಡೆಯಲಿದೆ ಎಂದು ಜಿ.ಪಂ. ಇರಕಲ್ಲಗಡ ಕ್ಷೇತ್ರ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ
Please follow and like us:
error