ಯುಗಾದಿ ಸಂಭ್ರಮ ಕವಿಗೋಷ್ಠಿ – ಮತದಾನ ಜಾಗೃತಿ ಕಾರ್ಯಕ್ರಮ

 ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಹಾಗೂ ಬ್ಲ್ಯೂಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಆಶ್ರಯದಲ್ಲಿ ಯುಗಾದಿ ಸಂಭ್ರಮ ಕವಿಗೋಷ್ಠಿ, ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಸಂಗೀತ ಸಮಾರಂಬ ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ಭಾಗ್ಯನಗರದ ಕಿನ್ನಾಳ ರಸ್ತೆ ಎಫ್‌ಸಿಐ ಗೋದಾಮು ಹಿಂದುಗಡೆ ಇರುವ ಮಂಜುನಾಥ ಗೊಂಡಬಾಳರ ಮನೆಯ ಮುಂಭಾಗದಲ್ಲಿ ಸೋಮುವಾರ ೩೧ ರಂದು ಬೆಳಿಗ್ಗೆ ೧೦-೩೦ ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಗೊಂಡಬಾಳರ ದ್ವಿತಿಯ ಸುಪುತ್ರಿಯ ನಾಮಕರಣ ಸಂದರ್ಭದಲ್ಲಿ ಈ ವಿನೂತನ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗುವ ಸಲುವಾಗಿ ಸರಕಾರ ವಿಭಿನ್ನ ಪ್ರಯತ್ನ ಮಾಡುತ್ತಿದೆ, ಅದೇ ರೀತಿ ಇವರು ಸಹ ಕೌಟುಂಬಿಕ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವದು ವಿಶೇಷವಾಗಿದ್ದು ಜಿಲ್ಲಾಡಳಿತ ಸಹ ಮೆಚ್ಚುಗೆ ವ್ಯಕ್ತಪಡಿಸಿದೆ. ಯುಗಾದಿ ಸಂಭ್ರಮದಲ್ಲಿ ಪ್ರಥಮ ಬಾರಿಗೆ ಗುರುಶಿಷ್ಯರ ಕವಿಗೋಷ್ಠಿಯನ್ನು ಹಮ,ಮಿಕೊಂಡಿದ್ದು ಅದರಲ್ಲಿ ಗುರುಶಿಷ್ಯರಾದ ಎ. ಎಂ. ಮದರಿ – ಅಲ್ಲಾಗಿರಿರಾಜ ಕನಕಗಿರಿ,  ಹೆಚ್. ಎಸ್. ಪಾಟೀಲ – ಅರುಣಾ ನರೇಂದ್ರ, ಪ್ರೊ. ಅಲ್ಲಮಪ್ರಭು ಬೆಟ್ಟದೂರ – ಮಹೇಶ ಬಳ್ಳಾರಿ,  ವಿಠ್ಠಪ್ಪ ಗೋರಂಟ್ಲಿ – ವೀರಣ್ಣ ಹುರಕಡ್ಲಿ, ಮುನಿಯಪ್ಪ ಹುಬ್ಬಳ್ಳಿ – ಶ್ರೀಮತಿ ಅನ್ನಪೂರ್ಣಮ್ಮ ಮನ್ನಾಪೂರ,  ಡಾ|| ಕೆ. ಬಿ. ಬ್ಯಾಳಿ – ಅಲ್ಲಾವುದ್ದಿನ್ ಯಮ್ಮಿ, ಡಾ|| ಮಹಾಂತೇಶ ಮಲ್ಲನಗೌಡರ – ಶ್ರೀಮತಿ ಅನುಸೂಯಾ ಜಾಗಿರದಾರ, ನಿಜಲಿಂಗಪ್ಪ ಮೆಣಸಗಿ – ಪವನ ಗುಂಡೂರ  *  ಶ್ರೀಮತಿ ಶಾಂತಾದೇವಿ ಹಿರೇಮಠ -ಸಿರಾಜ್ ಬಿಸರಹಳ್ಳಿ, ವೀರಣ್ಣ ವಾಲಿ – ಕುಮಾರಿ ಬಸಮ್ಮ ಕೋರಿ,  ರವಿತೇಜ ಅಬ್ಬಿಗೇರಿ – ಮರುಳಸಿದ್ದಪ್ಪ ದೊಡ್ಡಮನಿ ರವರು ಕವನ ವಾಚನ ಮಾಡುವರು. 
ಕಾರ್ಯಕ್ರಮದ ಉದ್ಘಾಟನೆಯನ್ನು  ಡಾ|| ಕೆ. ಪನ್ನಂಗಧರ  ಪ್ರಾಂಶುಪಾಲರು, ಸರಕಾರಿ ಪ್ರಥಮದರ್ಜೆ ಕಾಲೇಜು, ಹೊಸಪೇಟೆರವರು ಮಾಡಲಿದ್ದು, ರಮೇಶ ಸುರ್ವೆ ಚಲನಚಿತ್ರ ನಿರ್ದೇಶಕರು, ಪತ್ರಕರ್ತರು, ಬೆಂಗಳೂರು ಅಧ್ಯಕ್ಷತೆವಹಿಸುವರು.
ಆಶಯ ನುಡಿಯನ್ನು ಡಾ|| ವಿ. ಬಿ. ರಡ್ಡೇರ ಪ್ರಾಂಶುಪಾಲರು, ಬಾ. ಸ. ಪ. ಪೂ. ಕಾಲೇಜು, ಕೊಪ್ಪಳ, ಪ್ರಾಸ್ತಾವಿಕ ನುಡಿಯನ್ನು ಮಂಜುನಾಥ ಜಿ. ಗೊಂಡಬಾಳ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು, ಅನಿಸಿಕೆಯನ್ನು  ಡಾ|| ಬಸವರಾಜ ಪೂಜಾರ ಪ್ರಾಧ್ಯಾಪಕರು, ಶ್ರೀ ಗವಿಸಿದ್ಧೇಶ್ವರ ಕಾಲೇಜು, ಕೊಪ್ಪಳ ಹೇಳುವರು.
ಮುಖ್ಯ ಅತಿಥಿಗಳಾಗಿ ಬಸವರಾಜ ಆಕಳವಾಡಿ ಜಿಲ್ಲಾಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು, ಕೊಪ್ಪಳ, ಡಿ. ಎಂ. ಬಡಿಗೇರ ಸಾಹಿತಿಗಳು ಭಾಗ್ಯನಗರ, ಡಾ|| ಎಸ್. ಬಾಲಾಜಿ ಸಂಘಟಕರು, ಬೆಂಗಳೂರು,   . ವಿ. ಪಾಟೀಲ ಗುಂಡೂರ ಸಾಹಿತಿಗಳು ಗಂಗಾವತಿ,  ಅಕ್ಬರ್ ಸಿ. ಕಾಲಿಮಿರ್ಚಿ ಭಾಗ್ಯನಗರ, ಡಾ|| ಸಿದ್ದಲಿಂಗಪ್ಪ ಕೊಟ್ನೆಕಲ್ ಪ್ರಾಧ್ಯಾಪಕರು,  ಗವಿಸಿದ್ಧೇಶ್ವರ ಕಾಲೇಜು, ಕೊಪ್ಪಳ, ಡಾ|| ಶರಣಬಸಪ್ಪ ಬಿಳಿಎಲೆ ಶ್ರೀ ಗವಿಸಿದ್ಧೇಶ್ವರ ಕಾಲೇಜು, ಕೊಪ್ಪಳ, ಸತೀಶ ಬಿಲ್ಲಾಡಿ ಹೊಸಪೇಟೆ, ಲೆ. ದಯಾನಂದ ಸಾಳುಂಕೆ ಶ್ರೀ ಗವಿಸಿದ್ಧೇಶ್ವರ ಕಾಲೇಜು, ಕೊಪ್ಪಳ. ಸೃಜನ್ ಹೊಸಪೇಟೆ, ಬಿ. ಎಸ್. ಪಾಟೀಲ ಅಧ್ಯಕ್ಷರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕೊಪ್ಪಳ, ಈಶ್ವರ ಹತ್ತಿ ಸಾಹಿತಿಗಳು, ಕಲಾವಿದರು ಕೊಪ್ಪಳ, ವೈಶಂಪಾಯನ ಕಲಾವಿದರು ಕೊಪ್ಪಳ ಆಗಮಿಸುವರು. ಸದಾಶಿವ ಪಾಟೀಲ ಖ್ಯಾತ ಕಲಾವಿದರು, ಕೊಪ್ಪಳ, ಹನುಮಂತಪ್ಪ ಅಂಡಗಿ ಕಲಾವಿದರು, ಕೊಪ್ಪಳ, ಅಶೋಕ ನೀಲಮ್ಮನವರ  ಆಕೆಷ್ಟ್ರಾ ಕಲಾವಿದರು, ಬೆಳಗಾವಿ, ಅನ್ನಪೂರ್ಣಮ್ಮ ಮನ್ನಾಪೂರ ಕುಷ್ಟಗಿ, ಅನುಸೂಯಾ ಜಾಗಿರದಾರ ಶಾಸ್ತ್ರೀ ಗಮಕ ಕಲಾವಿದರು, ಕೊಪ್ಪಳ, ಜಯಶ್ರಿ ಚೌಕಿಮಠ ಗಾಯಕರು, ಕೊಪ್ಪಳ, ಕುಮಾರ ವಿಜಯಕುಮಾರ ಗೊಂಡಬಾಳ ಕೆರೋಕೆ ಸಿಂಗರ್ ಕೊಪ್ಪಳ, ಶಮ್ಮು ಮುಸಲಾಪೂರ (ಶ್ಯಾಮ್) ಕೆರೋಕೆ ಸಿಂಗರ್, ಕುಮಾರಿ ಸಾಹಿತ್ಯ ಗೊಂಡಬಾಳರವರಿಂದ ಸಂಗೀತ ಕಾರ್ಯಕ್ರಮ ನಡೆಯುತ್ತದೆ ಎಂದು   ತಿಳಿಸಿದ್ದಾರೆ. 

Leave a Reply