ಅನಂತ ನಾಯ್ಕ ಎಸ್‌ಎಫ್‌ಐನ ನೂತನ ಅಧ್ಯಕ್ಷರಾಗಿ ಗುರುರಾಜ ದೇಸಾಯಿ ಉಪಾಧ್ಯಕ್ಷರಾಗಿ ಆಯ್ಕೆ

ಹಾವೇರಿ: ನಗರದಲ್ಲಿ ಶನಿವಾರ ಮುಕ್ತಾಯಗೊಂಡ ಭಾರತ ವಿದ್ಯಾರ್ಥಿ ಫೆಡರೇಷನ್‌ನ 12ನೇ ರಾಜ್ಯ ಸಮ್ಮೇಳನದಲ್ಲಿ 67 ಸದಸ್ಯರನ್ನೊಳಗೊಂಡ ಎಸ್‌ಎಫ್‌ಐ ರಾಜ್ಯ ಸಮಿತಿ ಸೇರಿದಂತೆ 21 ಮಂದಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅನಂತ ನಾಯ್ಕ (ಅಧ್ಯಕ್ಷ) ಹಳ್ಳಿ ಉಮೇಶ (ಕಾರ್ಯದರ್ಶಿ), ವಿನಯಕುಮಾರ ಎಂ.ಜಿ, ನಾರಾಯಣ ಕಾಳೆ, ಕೋಲಾರದ ಅಂಬರೀಷ್ ವಿ, ಕೊಪ್ಪಳದ ಗುರುರಾಜ ದೇಸಾಯಿ, ಮೈಸೂರಿನ ಗುರುರಾಜ ಸೂರ್ಯ, ಬಳ್ಳಾರಿಯ ಸುರೇಶ ಚೌಹಾಣ್ (ಉಪಾಧ್ಯಕ್ಷರು), ಹಾಸನದ ಪೃಥ್ವಿ ಎಂ.ಜಿ. ಬಳ್ಳಾರಿಯ ಸೌಮ್ಯ ಪಾಟೀಲ, ರಾಯಚೂರಿನ ರಂಗನಾಥ್,
ಹಾವೇರಿಯ ಬಸವರಾಜ ಪೂಜಾರ, ದಕ್ಷಿಣ ಕನ್ನಡದ ಜೀವನ್‌ರಾಜ್ ಕತ್ತಾರ, ಬೆಂಗಳೂರಿನ ಮುನಿರಾಜ್ ಜಂಟಿ ಕಾರ್ಯದರ್ಶಿಗಳಾಗಿ, ಮಂಡ್ಯದ ರಾಜೇಂದ್ರಸಿಂಗ್ ಬಾಬು, ಹಾವೇರಿಯ ರೇಣುಕಾ ಕಹಾರ್, ಯಾದಗಿರಿಯ ಪ್ರಕಾಶ ಅಲಹಾಳ್, ಕೊಪ್ಪಳದ ದುರ್ಗೇಶ ಡೆಗ್ಗಿ (ಕಾರ್ಯ ದರ್ಶಿ ಮಂಡಳಿ ಸದಸ್ಯರು), ರೇಖಾ ಎಂ, ಜ್ಯೋತಿ ಪುಟ್ಟರಡ್ಡೇರ್, ದಿವ್ಯ (ವಿದ್ಯಾರ್ಥಿನಿಯರ ಉಪ ಸಮಿತಿ ಸದಸ್ಯರು) ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಸಮಿತಿ ಕಾರ್ಯದರ್ಶಿ ಹಳ್ಳಿ ಉಮೇಶ ತಿಳಿಸಿದ್ದಾರೆ.

Leave a Reply