ಮಾಜಿ ದೇವದಾಸಿಯರಿಗೆ ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹಧನ ಅರ್ಜಿ ಆಹ್ವಾನ.

ಕೊಪ್ಪಳ
ಜು. ೨೭ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ದೇವದಾಸಿ
ಪುನರ್ವಸತಿ ಯೋಜನೆಯಡಿ ಜಿಲ್ಲೆಯ ಮಾಜಿ ದೇವದಾಸಿಯರಿಗೆ ಆದಾಯ ಉತ್ಪನ್ನಕರ ಚಟುವಟಿಕೆ
ಕೈಗೊಳ್ಳಲು ಪ್ರೋತ್ಸಾಹ ಧನ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಿದೆ.
       ೧೯೯೩-೯೪
ನೇ ಹಾಗೂ ೨೦೦೭-೦೮ ರ ಮರು ಸಮೀಕ್ಷೆಯಲ್ಲಿ ಸೇರ್ಪಡೆಯಾಗಿರುವ ಮಾಜಿ ದೇವದಾಸಿ
ಮಹಿಳೆಯರಿಗೆ  ಆರ್ಥಿಕ ಸ್ವಾವಲಂಬನೆಗಾಗಿ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು
ಪ್ರೋತ್ಸಾಹಧನ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿದಾರರು ಕರ್ನಾಟಕದ ಖಾಯಂ
ನಿವಾಸಿಯಾಗಿದ್ದು, ಮಾಜಿ ದೇವದಾಸಿ ಮಹಿಳೆಯರಾಗಿರಬೇಕು.  ಬ್ಯಾಂಕ್ ಖಾತೆ ಹೊಂದಿದ್ದು,
ಯಾವುದೇ ಆರ್ಥಿಕ ಸಂಸ್ಥೆ ಅಥವಾ ಬ್ಯಾಂಕ್‌ಗಳಲ್ಲಿ ಸುಸ್ತಿದಾರರಾಗಿರಬಾರದು.  ಯಾವುದೇ
ಕಾನೂನಿನ ವಿವಾದಗಳಿಗೆ/ವ್ಯಾಜ್ಯಗಳಿಗೆ ಒಳಪಟ್ಟಿರಬಾರದು.  ಈಗಾಗಲೆ ಈ ಸೌಲಭ್ಯ ಪಡೆದ
ಫಲಾನುಭವಿಗಳು ಪುನಃ ಅರ್ಜಿ ಸಲ್ಲಿಸುವಂತಿಲ್ಲ.  ಅರ್ಹ ಮಹಿಳೆಯರು ನಿಗದಿತ ಅರ್ಜಿ
ನಮೂನೆಯನ್ನು ಆಯಾ ತಾಲೂಕು ಯೋಜನಾ ಅನುಷ್ಠಾನಾಧಿಕಾರಿಗಳಿಂದ ಪಡೆದು, ಭರ್ತಿ ಮಾಡಿದ
ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ವಿಳಾಸ ದೃಢೀಕರಣ ಪತ್ರ, ಬ್ಯಾಂಕ್ ಖಾತೆ
ಪ್ರತಿಯನ್ನು ಲಗತ್ತಿಸಿ ಆಯಾ ತಾಲೂಕು ಅನುಷ್ಠಾನಾಧಿಕಾರಿಗಳ ಕಚೇರಿಗೆ ಆಗಸ್ಟ್ ೧೧ ರೊಳಗೆ
ಸಲ್ಲಿಸಬೇಕು.  ಹೆಚ್ಚಿನ ವಿವರಗಳಿಗೆ ತಾಲೂಕು ಅನುಷ್ಠಾನಾಧಿಕಾರಿಗಳು, ಕೊಪ್ಪಳ-
೯೫೩೮೬೨೮೩೫೯, ಗಂಗಾವತಿ- ೯೮೮೦೫೧೮೪೯೮, ಕುಷ್ಟಗಿ- ೯೬೮೬೧೪೮೯೩೩, ಯಲಬುರ್ಗಾ-
೯೬೮೬೦೭೨೨೯೬ ಇವರನ್ನು ಸಂಪರ್ಕಿಸುವಂತೆ ಯೋಜನಾಧಿಕಾರಿಗಳು
ತಿಳಿಸಿದ್ದಾರೆ.
Please follow and like us:
error