೭೪ ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ.

ಕೊಪ್ಪಳ-11- ನಗರದ ಶ್ರೀಗವಿಮಠದಲ್ಲಿ ದಿನಾಂಕ ೧೨-೧೦-೨೦೧೫ ರಂದು ಅಮವಾಸ್ಯೆಯ ದಿನ ಸೋಮವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೭೪ ನೇ  ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಮುಖ್ಯ ಅತಿಥಿಗಳಾಗಿ ಕುಷ್ಟಗಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚರ್ಯ ಶರಣಬಸವರಾಜ ಡಾಣಿ ಉಪನ್ಯಾಸ ಮಾಡಲಿದ್ದಾರೆ.ಅಧ್ಯಕ್ಷತೆ ಕೊಪ್ಪಳದ ನ್ಯಾಯವಾದಿಗಳಾದ ಆಸೀಫ್ ಅಲಿ ವಹಿಸಿವರು.  ಹೊಸಪೇಟೆಯ ಕುಮಾರಿ ಎ.ಎಸ್. ಅಕ್ಷತಾ ಇವರಿಂದ ಸಂಗೀತ ಸೇವೆಯಿದೆ. ಕಾರ್ಯಕ್ರಮದ ಭಕ್ತಿ ಸೇವೆಯನ್ನು  ಶ್ರೀಮತಿ ಅನ್ನಪೂರ್ಣಮ್ಮ ಗಂಗಾಧರಯ್ಯ ಹಿರೇಮಠ ಸಾ.ಅಳವಂಡಿ ವಹಿಸಿದ್ದಾರೆ.
Please follow and like us:
error