fbpx

ನ.೧೭ ರಂದು ಕೊಪ್ಪಳ ತಾ.ಪಂ ಸಾಮಾನ್ಯ ಸಭೆ.

ಕೊಪ್ಪಳ, ನ.೦೬ (ಕ ವಾ)  ಕೊಪ್ಪಳ ತಾಲೂಕಾ ಪಂಚಾಯತ್‌ನ ಸಾಮಾನ್ಯ ಸಭೆ ನ.೧೭ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
    
ತಾಲೂಕಾ ಪಂಚಾಯತ್ ಅಧ್ಯಕ್ಷೆ ಬಾನು ಚಂದುಸಾಬ್ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಕೊಪ್ಪಳ
ತಾಲೂಕಾ ಮಟ್ಟದ ಎಲ್ಲ ಅನುಷ್ಠಾನಾಧಿಕಾರಿಗಳು ತಪ್ಪದೇ ಸಭೆಗೆ ಹಾಜರಾಗುವಂತೆ ಹಾಗೂ
ಅಕ್ಟೋಬರ್ ಅಂತ್ಯದವರೆಗಿನ ತಮ್ಮ ಇಲಾಖಾ ಪ್ರಗತಿ ವರದಿಯ ೪೦ ಪ್ರತಿಗಳನ್ನು ನ.೧೧
ರೊಳಗಾಗಿ ತಾಲೂಕಾ ಪಂಚಾಯತ್ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಕೊಪ್ಪಳ ತಾಲೂಕಾ ಪಂಚಾಯತ್
ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಉಪಕರಣಗಳ ದುರಸ್ತಿ ತರಬೇತಿ ಅರ್ಜಿ ಆಹ್ವಾನ.
ಕೊಪ್ಪಳ,
ನ.೦೬ (ಕ ವಾ)  ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ
ಆರ್‌ಸೆಟ್ ಸಂಸ್ಥೆ (ರಿ) ಇವರಿಂದ ೩೦ ದಿನಗಳ ಟಿ.ವಿ, ಡಿ.ವಿ.ಡಿ ಮತ್ತು ಇತರ
ಎಲೆಕ್ಟ್ರಾನಿಕ್ ಉಪಕರಣಗಳ ದುರಸ್ತಿ ತರಬೇತಿ ನೀಡಲಾಗುತ್ತಿದ್ದು, ಆಸಕ್ತ
ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಈ ತರಬೇತಿಯು ಊಟ ಮತ್ತು
ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಆಸಕ್ತ ೧೮ ರಿಂದ ೪೫ ವರ್ಷದೊಳಗಿನ ಅರ್ಹ
ನಿರುದ್ಯೋಗಿ ಯುವಜನತೆ ತರಬೇತಿಗಳಲ್ಲಿ ಭಾಗವಹಿಸಬಹುದಾಗಿದೆ. ೩೦ ದಿನಗಳ ಟಿ.ವಿ,
ಡಿ.ವಿ.ಡಿ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳ ದುರಸ್ತಿ ತರಬೇತಿ ಶಿಬಿರವು
ನವೆಂಬರ್.೧೬ ರಿಂದ ಆರಂಭಗೊಳ್ಳಲಿದ್ದು, ತರಬೇತಿ ಪಡೆಯಲಿಚ್ಛಿಸುವವರು ಕೆನರಾ ಬ್ಯಾಂಕ್
ದೇಶಪಾಂಡೆ ಆರ್‌ಸೆಟ್ ಸಂಸ್ಥೆ (ರಿ), ಉದ್ಯೋಗ ವಿದ್ಯಾನಗರ, ದಾಂಡೇಲಿ ರಸ್ತೆ, ಹಳಿಯಾಳ
(ಉತ್ತರಕನ್ನಡ) ಈ ವಿಳಾಸಕ್ಕೆ ನ.೧೪ ರೊಳಗಾಗಿ ಸಂಪರ್ಕಿಸಬಹುದಾಗಿದೆ. ಈ ಕುರಿತು
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : ೦೮೨೮೪-೨೨೦೮೦೭, ೯೪೮೩೪೮೫೪೮೯, ೯೪೮೨೧೮೮೭೮೦
ನ್ನು ಸಂಪರ್ಕಿಸುವಂತೆ ಸಂಸ್ಥೆ ತಿಳಿಸಿದೆ.
ಪ್ರವಾಸಿ ಟ್ಯಾಕ್ಸಿ ಯೋಜನೆ ಅಂತಿಮ ಆಯ್ಕೆ ಪಟ್ಟಿ ಪ್ರಕಟ.
ಕೊಪ್ಪಳ,
ನ.೦೬ (ಕ ವಾ) ಕೊಪ್ಪಳ ಜಿಲ್ಲಾ ಪ್ರವಾಸೋಧ್ಯಮ ಅಭಿವೃದ್ಧಿ ಸಮಿತಿ ಹಾಗೂ ಪ್ರವಾಸಿ
ಅಧಿಕಾರಿಗಳ ಕಾರ್ಯಾಲಯ ಕೊಪ್ಪಳ ಇವರ ವತಿಯಿಂದ ೨೦೧೩-೧೪ ಹಾಗೂ ೨೦೧೪-೧೫ ನೇ ಸಾಲಿನ
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಹಾಗೂ ೨೦೧೩-೧೪ನೇ ಸಾಲಿನ ಹಿಂದುಳಿದ ಹಾಗೂ
ಅಲ್ಪಸಂಖ್ಯಾತ ವರ್ಗಗಳ ಪ್ರವಾಸಿ ಟ್ಯಾಕ್ಸಿ ಯೋಜನೆಯ ಅಂತಿಮ ಆಯ್ಕೆ ಪಟ್ಟಿಯನ್ನು ನ.೦೪
ರಂದು ಜಿಲ್ಲಾಡಳಿತ ಭವನದಲ್ಲಿನ ಪ್ರವಾಸೋದ್ಯಮ ಕಚೇರಿಯಲ್ಲಿ ಪ್ರಕಟಿಸಲಾಗಿದೆ.
    
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಕೊಪ್ಪಳ ಜಿಲ್ಲೆಯ ಜನಸಂಖ್ಯೆಗೆ
ಅನುಗುಣವಾಗಿ, ತಾಲೂಕಾವಾರು ಗುರಿ ನಿಗದಿಪಡಿಸಿ, ವಯೋಮಿತಿಗನುಗುಣವಾಗಿ ಅಂದರೆ ೪೫ ರಿಂದ
೨೫ ಏರಿಕೆ ಕ್ರಮದಿಂದ ಇಳಿಕೆ ಕ್ರಮವಾಗಿ ಫಲಾನುಭವಿಗಳ  ಅಂತಿಮ ಆಯ್ಕೆಪಟ್ಟಿಯನ್ನು
ಪ್ರಕಟಿಸಲಾಗಿದೆ. ಈ ಅಂತಿಮ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಇದರಿಂದ ಬಾಧಿತರಾದಂತಹ
ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಆಕ್ಷೇಪಣೆ, ಸಲಹೆ, ಸೂಚನೆಗಳನ್ನು ಹಾಗೂ
ಅದನ್ನು ಸಮರ್ಥಿಸುವಂತಹ ಮೂಲ ದಾಖಲಾತಿಗಳೊಂದಿಗೆ ಅಂತಿಮ ಆಯ್ಕೆ ಪಟ್ಟಿ ಹೊರಡಿಸಿದ
ದಿನಾಂಕ ನ.೦೪ ರಿಂದ ನ.೨೦ ರೊಳಗಾಗಿ ಜಿಲ್ಲಾಧಿಕಾರಿಗಳು ಕೊಪ್ಪಳ ಹಾಗೂ ಪ್ರವಾಸಿ
ಅಧಿಕಾರಿಗಳ ಕಾರ್ಯಾಲಯ ಪ್ರವಾಸೋದ್ಯಮ ಇಲಾಖೆ, ಕೊಪ್ಪಳ ಇವರಿಗೆ ಸಲ್ಲಿಸಬಹುದಾಗಿದೆ.
ನಿಗದಿತ ಅವಧಿ ನಂತರ ಬಂದಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾ
ಪ್ರವಾಸೋಧ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಪ್ರಭಾರಿ ಜಿಲ್ಲಾಧಿಕಾರಿ ಡಾ||ಪ್ರವೀಣ
ಕುಮಾರ ಜಿ.ಎಲ್ ಅವರು ತಿಳಿಸಿದ್ದಾರೆ.
ನ.೦೮ ರಂದು ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ.
ಕೊಪ್ಪಳ,
ನ.೦೬ (ಕ ವಾ)  ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ವತಿಯಿಂದ
ಪ್ರಸಕ್ತ ಸಾಲಿನ ರಾಜ್ಯಮಟ್ಟದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ
(ಎನ್.ಟಿ.ಎಸ್.ಇ/ಎನ್.ಎಮ್.ಎಮ್.ಎಸ್) ಗಳು ನ.೦೮ ರಂದು ಬೆಳಿಗ್ಗೆ ಕೊಪ್ಪಳದ ೦೫ ಪರೀಕ್ಷಾ
ಕೇಂದ್ರಗಳಲ್ಲಿ ನಡೆಯಲಿವೆ.
     ಈಗಾಗಲೇ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಪ್ರವೇಶ
ಪತ್ರ ಪಡೆದ ಕೊಪ್ಪಳ ತಾಲೂಕಿನ ಅರ್ಹ ವಿದ್ಯಾರ್ಥಿಗಳು ಪ್ರವೇಶ ಪತ್ರದೊಂದಿಗೆ ಪರೀಕ್ಷೆಗೆ
ಹಾಜರಾಗುವಂತೆ  ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಉಚಿತ ಫ್ಯಾಷನ್ ಟೆಕ್ನಾಲಜಿ ತರಬೇತಿ ಆಸಕ್ತರಿಂದ ಅರ್ಜಿ ಆಹ್ವಾನ.
ಕೊಪ್ಪಳ,
ನ.೦೬ (ಕ ವಾ)  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯದ ಹಿಂದುಳಿದ
ವರ್ಗಗಳ ನಿರುದ್ಯೋಗಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ನ್ಯಾಷನಲ್
ಇನ್ಸ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯ ವಿವಿಧ ಕೋರ್ಸುಗಳಲ್ಲಿ ತರಬೇತಿ
ಭತ್ಯೆಯೊಂದಿಗೆ ಉಚಿತ ತರಬೇತಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ
ಆಹ್ವಾನಿಸಲಾಗಿದೆ.
     ಕೋರ್ಸುಗಳ ವಿವರ : ಗಾರ್ಮೆಂಟ್ ಮ್ಯಾನಿಫ್ಯಾಕ್ಚರಿಂಗ್
ಟೆಕ್ನಾಲಜಿ (ಡೆವಲಪಿಂಗ್ ಲೈನ್ ಸೂಪರ್‌ವೈಸರ್) ಹಾಗೂ ಅಪ್ಪರೆಲ್ ಕ್ವಾಲಿಟಿ ಕಂಟ್ರೋಲ್,
ಪ್ರೊಡಕ್ಟ್ ಅನಲೈಸಿಸ್ ಆಂಡ್ ಅಸ್ಯೂರೆನ್ಸ್ ತರಬೇತಿ ಕೋರ್ಸುಗಳಿಗೆ ತಲಾ ೬ ತಿಂಗಳ ಅವಧಿಯ
ತರಬೇತಿ ನೀಡಲಾಗುತ್ತದೆ. ಈ ಕೋರ್ಸುಗಳಲ್ಲಿ ತರಬೇತಿ ಪಡೆಯಲಿಚ್ಛಿಸುವವರು ೧೦+೦೨
ವಿದ್ಯಾರ್ಹತೆ ಹೊಂದಿರಬೇಕು ಹಾಗೂ ೧೮ ರಿಂದ ೩೫ ವರ್ಷದೊಳಗಿನ ವಯೋಮಿತಿ ಹೊಂದಿರಬೇಕು.
ಗಾರ್ಮೆಂಟ್ ಕನ್‌ಸ್ಟ್ರಕ್ಷನ್ (ಡೆವಲಪಿಂಗ್ ಸೆವಿಂಗ್ ಆಪರೇಟರ್ ಫಾರ್ ಗಾರ್ಮೆಂಟ್
ಮ್ಯಾನಿಫ್ಯಾಕ್ಚರಿಂಗ್ ಯುನಿಟ್ಸ್ ಆಂಡ್ ಬಾಟಿಕ್ಯೂ ಎಸ್ಟಾಬ್ಲಿಷ್‌ಮೆಂಟ್) ತರಬೇತಿ
ಕೋರ್ಸಿಗೂ ಸಹ ೬ ತಿಂಗಳ ಅವಧಿಯ ತರಬೇತಿ ನೀಡಲಾಗುತ್ತಿದ್ದು, ಈ ಕೋರ್ಸಿಗೆ ತರಬೇತಿ
ಪಡೆಯಲಿಚ್ಛಿಸುವವರು ೧೦ನೇ ತರಗತಿ ತೇರ್ಗಡೆ ಹೊಂದಿರಬೇಕು ಹಾಗೂ ೧೮ ರಿಂದ ೩೫
ವರ್ಷದೊಳಗಿನ ವಯೋಮಿತಿ ಹೊಂದಿರಬೇಕು.   
ಈ ತರಬೇತಿಗಳಿಗೆ ಹಿಂದುಳಿದ ವರ್ಗಗಳ
ಪ್ರವರ್ಗ-೦೧, ೨ಎ, ೩ಎ ಹಾಗೂ ೩ಬಿ ವರ್ಗಗಳಿಗೆ ಸೇರಿದ ನಿರುದ್ಯೋಗಿ ಮಹಿಳಾ ಮತ್ತು ಪುರುಷ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಪಡೆದು ಭರ್ತಿ ಮಾಡಿದ
ಅರ್ಜಿಯನ್ನು ನ.೨೦ ರೊಳಗಾಗಿ ಅದೇ ಕಛೇರಿಗೆ ಮರಳಿ ಸಲ್ಲಿಸಬಹುದಾಗಿದೆ.
Please follow and like us:
error

Leave a Reply

error: Content is protected !!