ರಾಮ ಕೃಷ್ಣಯ್ಯ ರವರಿಗೆ ಸನ್ಮಾನ

ಕೊಪ್ಪಳ ನಗರದ  ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಮ ಕೃಷ್ಣಯ್ಯ ರವರು ನಿವೃತ್ತಿ ಹೊಂದಿದ ಪ್ರಯುಕ್ತ ಜಿಲ್ಲೆಯ ಯುವಕ ಸಂಘಗಳಿಂದ ಸನ್ಮಾನಿಸಲಾಯಿತು. ಶ್ರೀ ತಾಯಮ್ಮ ದೇವಿ ಭಜನಾ ಯುವಕ ಸಂಘ ಕಾತರಕಿ ವಂದೇಮಾತರಂ ಯುವ ಸಾಂಸ್ಕೃತಿಕ ಸೇವಾ ಸಂಘ ಕೊಪ್ಪಳ, ಶ್ರೀ ಗೌರಿ ಶಂಕರ ಯುವಕ ಸಂಘ ಭಾಗ್ಯನಗರ ಸರಸ್ವತಿ ಸಾಂಸ್ಕೃತಿಕ ಮಹಿಳಾ ಸಂಘ ಕುಷ್ಟಗಿ, ವಾಲ್ಮಿಕಿ  ಮಹರ್ಷಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಕಾತರಕಿ , ವಿಶ್ವಕರ್ಮ ಕ್ರೀಡಾ ಸಂಘ ಕಾತರಕಿ ರಾಜೇಶ್ವರಿ ಯುವತಿ ಮಂಡಳ ಯರಗೇರಾ  ಸಂಘ- ಸಂಸ್ಥೆಗಳು ಸನ್ಮಾನಿಸಿದರು . ಈಸಂದರ್ಭದಲ್ಲಿ ರಾಜ್ಯ ಯುವ ಪ್ರಶಸ್ತಿ ವಿಜೇತ ಜಗದಯ್ಯ ಸಾಲಿಮಠ , ಜಿಲ್ಲಾ ಯುವ ಪ್ರಶಸ್ತಿ ವಿಜೇತರಾದ ರಾಕೇಶ ಕಾಂಬ್ಳೇಕರ್ , ಬಸಯ್ಯ ಅಬ್ಬಿಗೇರಿ ಮಠ , ಸುಭಾಸ್ ಕಲಾಲ್, ಲಲಿತಾ ಹಿರೇಮಠ, ರಾಜೇಶ್ವರಿ ಪಾಟಿಲ್, ಕಲಾವಿದ ವಿಜಯ ಹಣಗಿ, ಫಕಿರೇಶ ಕಮ್ಮಾರ, ಇಲಾಖೆಯ ಕೆ.ಎಮ್.ಪಾಟೀಲ್ ಇತರರು ಉಪಸ್ಥಿತರಿದ್ದರು

Leave a Reply