ಕಪ್ಪು ಹಣ ವಾಪಸಾತಿ ,ಭ್ರಷ್ಟಾಚಾರ ನಿರ್ಮೂಲನೆಗೆ ಧರಣಿ ಸತ್ಯಾಗ್ರಹ

ಕೊಪ್ಪಳ. ಜೂ. ೩. ಕೊಪ್ಪಳ ನಗರದ ಅಶೋಕ ವೃತ್ತದ ಸಾಹಿತ್ಯ ಭವನದ ಮುಂದುಗಡೆ ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಟ್ರಸ್ಟ್ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಸೇರಿಸಿಕೊಂಡು ವಿದೇಶದಲ್ಲಿರುವ ಕಪ್ಪು ಹಣ ವಾಪಸಾತಿ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಧರಣಿ ಸತ್ಯಾಗ್ರಹವನ್ನು ನಡೆಸಿತು.

ಶ್ರೀ ರಾಮದೇವಬಾಬಾ ಮತ್ತು ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ದೇಶವ್ಯಾಪಿ ನಡೆಯುತ್ತಿರುವ ಹೋರಾಟಕ್ಕೆ ಇಲ್ಲಿನ ಸಮಿತಿ ಹೋರಾಟ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಾಹಿತ್ಯ ಪರಿಷತ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ದೇಶದಲ್ಲಿ ಭ್ರಷ್ಟಾಚಾರಕ್ಕೆ ಮಿತಿಯಿಲ್ಲದಂತೆ ಆಗುತ್ತಿದೆ, ನಮ್ಮ ಜನಪ್ರತಿನಿಧಿಗಳು ಸಂಪೂರ್ಣವಾಗಿ ಲಜ್ಜೆಗೆಟ್ಟಿದ್ದಾರೆ, ಅವರು ನಿಜವಾಗಲು ತಿನ್ನುತ್ತಿರುವದು ಏನು ಎಂದು ತಿಳಿಯದಾಗಿದೆ, ಜನರು ಈಗ ಎಚ್ಚೆತ್ತುಕೊಳ್ಳದಿದ್ದರೆ ದೇಶವನ್ನು ಮಾರುವದರಲ್ಲಿ ಸಂದೇಹವೇ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸ್ವದೇಶಿ ವಸ್ತುಗಳ ಬಳಕೆ, ವಿಷಯುಕ್ತ ಆಹಾರ ನಿಷೇಧ ಇಂದು ತುರ್ತಾಗಿ ಆಗಬೇಕಿರುವ ಸಂಗತಿ ಎಂದರು.
ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೆಇಬಿ, ಮಾತನಾಡಿ ದೇಶದ ಹಣ ಕೆಲವೇ ಜನರ ಸ್ವತ್ತಾಗಿರುವದು, ಅಭಿವೃದ್ಧಿಗೆ ಬಂದ ಹಣ ಕೇವಲ ಲಂಚಕ್ಕೆ ಹೋಗುತ್ತಿರುವದು ಅನ್ಯಾಯದ ಪರಮಾವಧಿ ಎಂದರು, ಗೋವಿಂದರಾಜು ಮಾತನಾಡಿ, ಬಾಬಾರವರು ೧೫ ವರ್ಷದಿಂದ ಯೋಗ ಸಾಧನೆ ಮಾಡಿ ಜನರ ಆರೋಗ್ಯ ಸುಧಾರಿಸುತ್ತಿದ್ದರು ಇಂದು ಕೆಲವು ವರ್ಷಗಳಿಂದ ದೇಶವನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ, ಯುವ ಸಮುದಾಯ ತಮ್ಮ ಭವಿಷ್ಯಕ್ಕಾಗಿ ದೇಶದ ಸೇವೆಗೆ ಬರಬೇಕು ಎಂದರು. 
ಮಲ್ಲಿಕಾರ್ಜುನ ನೂಲ್ವಿ ಗಂಗಾವತಿ, ವಿರೇಶ ಬಂಗಾರಶೆಟ್ರ ಕುಷ್ಟಗಿ ಇತರರು ಮಾತನಾಡಿದರು.
ಉಪಾಧ್ಯಕ್ಷ ಭೀಮಸೇನ ಮೇಘರಾಜ, ಪತಂಜಲಿ ಯೋಗ ಸಮಿತಿ ಯುವ ಘಟಕದ ಅಧ್ಯಕ್ಷ ಮಂಜುನಾಥ ಸಜ್ಜನ, ಅಶೋಕಸ್ವಾಮಿ ಹಿರೇಮಠ, ಮಲ್ಲಪ್ಪ ಬೇಲೂರ, ದಿಲೀಪ ಮೇಘರಾಜ, ಡಿಕುಸಾ ಮೇಘರಾಜ, ಅನ್ವರ ಗಂಗಾವತಿ, ರುದ್ರಪ್ಪ ಭಂಡಾರಿ, ಶಿವಮೂರ್ತಿ ಮೇಟಿ, ಶರಣಬಸಪ್ಪ ದಾನಕೈ, ಶಕ್ಷಾವಲಿ ಗಂಗಾವತಿ, ಯಮನೂರಸಾಬ ಗಂಗಾವತಿ, ನಾರಾಯಣಗೌಡ, ಶಿವರಾಮ ಗಂಗಾವತಿ, ಜಂಬಣ್ಣ ದಂಡಿನ್, ರಾಕೇಶ ಕಾಂಬ್ಳೇಕರ, ಎ. ಜಿ. ಹಿರೇಮಠ, ಶಿವಾಜಿ, ಬಸವರಾಜ ಇರಕಲಗಡಾ, ಜಗದೀಶ ಹಿರೇಮಠ ಅನೇಕರು ಇದ್ದರು.

Leave a Reply