You are here
Home > Koppal News > ವಿಶ್ವ ಜನಸಂಖ್ಯಾ ದಿನಾಚರಣೆ

ವಿಶ್ವ ಜನಸಂಖ್ಯಾ ದಿನಾಚರಣೆ

 ಕೊಪ್ಪಳ :  ಇತ್ತೀಚಿಗೆ  ಕೊಪ್ಪಳ ನಗರದ ಹಿಂದಿ ಬಿ.ಎಡ್. ಕಾಲೇಜಿನಿಂದ ನಗರದ ಆರೋಗ್ಯ ಕೇಂದ್ರದವರೆಗೆ  ಜಾಥಾ ನಡೆಸಲಾಯಿತು.

ಜಾಥಾದಲ್ಲಿ ಅನುಷ್ಠಾನ ಸಂಸ್ಥೆಯಾದ ಶ್ರೀ ಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಕೊಪ್ಪಳKUIDFC/ MKUSIP  ಯೋಜನೆಯ  ಹಾಗೂ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಹಾಗೂ ದಕ್ಷೀಣ ಭಾರತ ಹಿಂದಿ  ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯ ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಪದ್ದತಿ ಅಭಿವೃದ್ದಿ ಮತ್ತು ಸುಧಾರಣಾ ಯೋಜನೆ KHSDRP  ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನ ಸಂಖ್ಯಾ ದಿನಾಚರಣೆಯನ್ನು ಜಾಥಾ ಮುಖಾಂತರ ನಗರದ ಪ್ರಮುಖ ಬಿದಿಗಳಿಂದ ಹಾಯ್ದು ನಂತರ ನಗರದ ತಲೂಕ ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಪಂಚಾಯತಿ ಅಧ್ಯಕ್ಷರಾದ   ದೇವಪ್ಪ ಭಿಮಪ್ಪ ಮೇಕಾಳಿ, ಮುಖ್ಯ ಅತಿಥಿಗಳಾಗಿ ನಿವೃತ್ತ ವೈದ್ಯಾಧಿಕಾರಿಗಳಾದ ಡಾ. ಕುಲಕರ್ಣಿ, ತಾಲೂಕ ಆರೂಗ್ಯ ಇಲಾಖೆ ವೈದ್ಯಾಧಿಕಾರಿಗಳಾದ ಡಾ. ಎಸ್.ಬಿ. ದಾನರಡ್ಡಿ ಹಾಗೂ ವಿಜಯನಗರ ಪ್ರೌಢಶಾಲೆಯ ಮುಖ್ಯೋಪಾಧ್ಯನಿಯಾದ ಶ್ರೀಮತಿ ಶೀಲಾ,   ಬಸವರಾಜ ಸರದಾರ್ ವಲ್ಲಾಭಾಯಿ ಪಟೇಲ್ ಮಹಾವಿದ್ಯಾಲು ಸಹ ಶಿಕ್ಷಕಿಯರು,  ಗುರು ಶಿಕ್ಷಣ ಸಂಸ್ಥೆಯ ಯೋಜನಾಧಿಕಾರಿಗಳಾದ ವಜೀರ್‌ಸಾಬ ತಳಕಲ್, ಮತ್ತು ಯೋಜನಾ ಸಂಯೋಜಕರಾದ ಮೇಹರಾಜ ಮುನಿಯಾರ್, ಸಮುದಾಯ ಸಂಘಟಿಕರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Top