ದೇಶದ ಮುಂದಿನ ರಾಷ್ಟ್ರಪತಿ ಶಾಮ್ ಪಿತ್ರೋಡಾ ?

ದೇಶದ ಮುಂದಿನ ರಾಷ್ಟ್ರಪತಿಗಾಗಿ ವ್ಯಕ್ತಿಯ ಹುಡುಕಾಟ: ಶಾಮ್ ಪಿತ್ರೋಡಾ ಹೆಸರು ಮುಂಚೂಣಿಯಲ್ಲಿ 
ಅಹ್ಮದಾಬಾದ್:ದೇಶದ ಮುಂದಿನ ರಾಷ್ಟ್ರಪತಿಗಾಗಿ ಸೂಕ್ತ ವ್ಯಕ್ತಿಯ ಹುಡುಕಾಟ ಆರಂಭವಾಗಿದ್ದು, ಇದೀಗ ಗುಜರಾತ್ ಮೂಲದ ತಂತ್ರಜ್ಞ ಶಾಮ್ ಪಿತ್ರೋಡಾ ಹೆಸರು ರಾಷ್ಟ್ರಪತಿ ಅಭ್ಯರ್ಥಿಯ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ.
ಜುಲೈ ೧೬ ರಂದು ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ, ಪ್ರಧಾನಮಂತ್ರಿಗಳ ಸಲಹೆಗಾರ ಶಾಮ್ ಪಿತ್ರೋಡಾ ರಾಷ್ಟ್ರಪತಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ಹಳವಾಡ್ ತಲೂಕಿನ ಟಿಕಾರ್ ಗ್ರಾಮದವರಾದ ಶಾಮ್ ಪಿತ್ರೋಡಾ, ಎಂ.ಎಸ್.ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪದವಿ ಪಡೆದಿದ್ದಾರೆ. ಪಿತ್ರೋಡಾ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದಲ್ಲಿ ದೇಶದ ಅತ್ಯುನ್ನತ ಹುದ್ದೆಗೆ ಏರಿದ ಮೊದಲ ಗುಜರಾತಿ ಎನ್ನುವ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಒಡಿಶಾದಲ್ಲಿ ಹುಟ್ಟಿದ್ದು:
ಸ್ಯಾಮ್‌ ಪಿತ್ರೋಡಾ ಗುಜರಾತ್‌ನವರಾದರೂ ಹುಟ್ಟಿದ್ದು ಒಡಿಶಾದಲ್ಲಿ. ಆದ್ದರಿಂದ ಒರಿಯಾವನ್ನು ಚೆನ್ನಾಗಿ ಮಾತಾಡಬಲ್ಲರು. ಇತರ ಹಿಂದುಳಿದ ವರ್ಗದಲ್ಲಿ ಹುಟ್ಟಿದ್ದೂ ಕೂಡಾ ಅವರಿಗಿರುವ ಅರ್ಹತೆಗಳಲ್ಲೊಂದು. ಮೂಲ ಹೆಸರು ಸತ್ಯನಾರಾಯಣ್‌ ಗಂಗಾರಾಮ್‌ ಪಂಚಾಲ್‌.
ಸದ್ಯ ಪ್ರಧಾನ ಮಂತ್ರಿಗಳ ಮಾಹಿತಿ ಸೌಕರ್ಯ ಮತ್ತು ಸಂಶೋಧನಾ ಸಲಹೆಗಾರರಾಗಿದ್ದಾರೆ. ರಾಹುಲ್‌ಗಾಂಧಿ ಉತ್ತರಪ್ರದೇಶ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದಾಗ ಪಿತ್ರೋಡಾ ಅವರ ಜೊತೆಗಿದ್ದದ್ದು ಸಂಶಯ ಹೆಚ್ಚಲು ಕಾರಣವಾಗಿದೆ.
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ,ಲೋಕಸಭೆ ಸ್ಪೀಕರ್ ಮೀರಾಕುಮಾರ್,ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಹಾಗೂ ಕರಣ್ ಸಿಂಗ್ ಅವರ ಹೆಸರುಗಳು ರಾಷ್ಟ್ರಪತಿ ಸ್ಧಾನಕ್ಕೆ ಕೇಳಿಬರುತ್ತಿವೆ
Please follow and like us:
error