ಪಂಚಮಸಾಲಿ ಶ್ರೀಗಳವರ ಜನ್ಮದಿನಾಚರಣೆ ಪ್ರಯುಕ್ತ ರೋಗಿಗಳಿಗೆ ಹಣ್ಣುಹಂಪಲ ವಿತರಣೆ.

ಸಮಾಜಕ್ಕೆ ಅದ್ಬುತ ಪ್ರತಿಬೆವುಳ್ಳ ಸ್ವಾಮಿಜಿ ಸಿಕ್ಕಿರುವದು ನಮ್ಮ ಪುಣ್ಯ – ಮುತ್ತೇನವರ್.
ಕೊಪ್ಪಳ ಡಿ.೨೨ ಅಖಿಲಭಾರತ ಲಿಂಗಾಯತ್ ಪಂಚಮಸಾಲಿ ಗುರುಪೀಠಕ್ಕೆ ಪ್ರಥಮ ಪೀಠಾಧಿಪತಿಯಾಗಿರುವ ಜಗ್ದುರು ಶ್ರೀಬಸವಜಯ ಮೃತುಂಜಯ ಮಹಾಸ್ವಾಮಿಗಳರವರ ೩೭ನೇ ಜನ್ಮದಿನದ ಪ್ರಯುಕ್ತ ಮಂಗಳವಾರ ಇಲ್ಲಿನ ಜಿಲ್ಲಾಸಾರ್ವಜನಿಕ ಆಸ್ಪತ್ರೆಯಲ್ಲಿ  ಅಖಿಲಭಾರತ ಲಿಂಗಾಯತ್ ಪಂಚಮಸಾಲಿ ಸಮಾಜದ ಯುವಘಟಕದ ವತಿಯಿಂದ ಜಿಲ್ಲಾ ಯುವಅಧ್ಯಕ್ಷರಾದ ಶೇಖರಪ್ಪ ಮುತ್ತೇನವರ ರವರ ನೇತೃತ್ವದಲ್ಲಿ ಸಮಾಜಬಾಂದವರು ಮತ್ತು ಯುವಕರ ಬಳಗ ಸೇರಿ ರೋಗಿಗಳಿಗೆ ಹಾಲು ಬ್ರೆಡ್ ಹಣ್ಣುಹಂಪಲ ವಿತರಣೆ ಮಾಡುವುದರ ಮೂಲಕ ಶ್ರೀಗಳವರ ಜನ್ಮದಿನಾಚರಣೆ ಆಚರಿಸಲಾಯಿತು.
ಪಂಚಮಸಾಲಿ ಸಮಾಜಕ್ಕೆ ಜಗ್ದುರು ಶ್ರೀಬಸವಜಯ ಮೃತುಂಜಯ ಮಹಾಸ್ವಾಮಿಗಳು ಅದ್ಬುತ ಪ್ರತಿಬೆವುಳ್ಳ ಪೂಜ್ಯರಾಗಿದ್ದು ಇವರು ನಮ್ಮ ಸಮಾಜಕ್ಕೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಇವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ನಮ್ಮ ಸಮಾಜ ಸಂಘಟಿತರಾಗಿ ಒಂದು ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದೆ. ಸಾಮಾಜಿಕ ಕಳಕಳಿ ರೈತಪರ ಕಾಳಜಿ ಉತ್ತರ ಕರ್ನಾಟಕ ಭಾಗದ ಜನರ ಮಹತ್ವದ ಬೇಡಿಕೆ ಕಳಸಾಬಂಡೂರಿ ಮಹಾದಾಯಿ ಯೋಜನೆ ಜಾರಿಗೆಗಾಗಿ ನೆಡೆಯುತ್ತಿರುವ ಹೋರಾಟದಲ್ಲಿ ಮುಂದಾಳತ್ವ ವಹಿಸಿ ಮುಂಚೂಣಿಯಲ್ಲಿರುವದು ಅಲ್ಲದೆ ಸಮಾಜ ಮತ್ತು ಶಿಕ್ಷಣದ ಬೆಳವಣಿಗೆಗಾಗಿ ರಾಜ್ಯ,ರಾಷ್ಟ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಲಿಂಗಾಯತ ಧರ್ಮ ಮತ್ತು ಬಸವತತ್ವ ಪ್ರಸಾರದಲ್ಲಿ ಹೆಸರುವಾಸಿಯಾಗಿರುವ ನಮ್ಮ ಶ್ರೀಗಳವರು ಇನ್ನುನೂರಾರುಕಾಲ ಬಾಳಲಿ ಇವರ
ಮಾರ್ಗದರ್ಶನ ಮತ್ತು ಕೃಪಾಶೀರ್ವಾದ ನಮ್ಮ ಸಮಾಜಕ್ಕೆ ಮತ್ತು ಸರ್ವರಿಗೆ ಸಿಗಲಿ ಎಂದು
ಅಖಿಲಭಾರತ ಲಿಂಗಾಯತ್ ಪಂಚಮಸಾಲಿ ಸಮಾಜದ ಯುವಘಟಕದ ಜಿಲ್ಲಾಧ್ಯಕ್ಷ ಶೇಖರಪ್ಪ ಮುತ್ತೆನವರ
ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಗೌರವ ಪೂರ್ವಕವಾಗಿ ಶುಭಹಾರೈಸಿದ್ದಾರೆ.
ಈ ಸಂಧರ್ಬದಲ್ಲಿ ಸಮಾಜದ ಹಿರಿಯರಾದ ವೀರಣ್ಣ ಚಾಕಲಬ್ಬಿ, ಸಂಗಮೇಶ ಬಾದವಾಡಗಿ, ರುದ್ರಪ್ಪ ಹಲಗೇರಿ, ವೀರೇಶ ಹಾಲಸಮುದ್ರ, ಮಹೇಶ ದಂಡಿನ, ಸಣ್ಣ ಬಸಪ್ಪ ಎಲ್.ಐ.ಸಿ, ಎಸ್.ಬಿ,ಮಾಲಿಪಾಟೀಲ, ಗುರುಲಿಂಗನಗೌಡ ಹಾಸಗಲ, ವಿಜಯ ಕರಡಿ, ಶರಣಗೌಡ ಪಾಟೀಲ, ಮಾರ್ಕಂಡೇಶ ಚಿತ್ತವಾಡಗಿ, ಅನಿಲ ಪಟ್ಟಣಶೆಟ್ಟಿ, ಗವಿಸಿದ್ಧಪ್ಪ ಡಂಬಳ, ಪ್ರಶಾಂತ ಮಂಗಳೂರ, ಚಂದ್ರಶೇಖರಗೌಡ ಪಾಟೀಲ, ಶಶಿಧರ ಶೇಷಗಿರಿ,ಶಿವು ಶಾಹಾಪೂರ, ಗವಿಸಿದ್ಧಪ್ಪ ಪಲ್ಲೇದ, ಅಂದಪ್ಪ ಆನಂದಹಳ್ಳಿ ಹಾಗೂ ಪಂಚಮಸಾಲಿ ಸಮಾಜ ಬಾಂದವರು ಪಾಲ್ಗೊಂಡಿದ್ದರು.

Please follow and like us:
error