ಅಭಿವೃದ್ಧಿಪರ ಕೆಲಸಗಳಿಗೆ,ಸಂಘಟನೆಗಳಿಗೆ ನನ್ನ ಸಹಾಯ,ಸಹಕಾರ – ಕೆ.ಎಂ.ಸಯ್ಯದ್


ಭಾಗ್ಯನಗರ : ಯಾವುದೋ ಋಣಾನುಭಂದ ನನ್ನನ್ನು ಇಲ್ಲಿಗೆ ಕರೆತಂದಿದೆ. ಮಾಮರವೆಲ್ಲೋ ಕೋಗಿಲೆ ಎಲ್ಲೋ ಎನ್ನುವಂತೆ ಭಾಗ್ಯನಗರದ ಕಂಪೌಂಡಿನ ಕಾಮಗಾರಿ ಕೆಲಸಕ್ಕೆ ಆರಂಭ ಕೊಡುವ ಅವಕಾಶ ನನಗೆ ದೊರೆತಿದೆ ಇದು ನನ್ನ ಭಾಗ್ಯ ಎಂದು ಸಯ್ಯದ್ ಪೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಕೆ.ಎಂ.ಸಯ್ಯದ್ ಹೇಳಿದರು. ಅವರು ಭಾಗ್ಯನಗರದ ಜಾಮಿಯಾ ಮಸ್ಜಿದ್ ಪಂಚ್ ಕಮಿಟಿ ವತಿಯಿಂದ ಖಬರಸ್ಥಾನ ಕಂಪೌಂಡ್ ನಿರ್ಮಾಣಕ್ಕಾಗಿ ಈದ್ಗಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಡಿಗಲ್ಲು ಸಮಾರಂಭ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಇಲ್ಲಿ ಭಾಗವಹಿಸಿ ಕಾರ್‍ಯಕ್ರಮ ಉದ್ಘಾಟನೆ ಮಾಡಿರುವುದು ನನಗೆ ಬಹಳ ಸಂತಸ ನೀಡಿದೆ. ನಮ್ಮಲ್ಲಿ ಸಮರ್ಪಕವಾಗಿ ಯೋಜನೆಗಳನ್ನು ತಯಾರಿಸಿ ವ್ಯವಸ್ಥಿತವಾಗಿ ಕೆಲಸ ಮಾಡುವ ಸಂಘಟನೆಗಳ ಕೊರತೆ ಇದೆ. ಅದನ್ನು ಹೋಗಲಾಡಿಸಲು ಎಲ್ಲ ಹಿರಿಕಿರಿಯರು ಒಂದಾಗಿ ಕೆಲಸ ಮಾಡಬೇಕು. ಭಾಗ್ಯನಗರದ ಜಾಮಿಯಾ ಮಸ್ಜಿದ್ ಪಂಚ್ ಕಮಿಟಿ ಒಳ್ಳೆಯ ಅಭಿವೃದ್ದಿ ಪರ ಕೆಲಸಗಳನ್ನು ಮಾಡುತ್ತಿದೆ. ನಿಮ್ಮೆಲ್ಲ ಕೆಲಸಗಳಿಗೆ ನಾನು ಯಾವತ್ತೂ ಜೊತೆಯಾಗಿರುತ್ತೇನೆ ಎಂದು ಹೇಳಿದರು.
ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ವಕ್ಫ ಕಮಿಟಿಯ ಆಡಳಿತಾಧಿಕಾರಿ ಪೀರಾ ಹುಸೇನ್ ಹೊಸಳ್ಳಿ ಮಾತನಾಡಿ ‘ಸಮಾಜದ ಜನರಿಗೆ ವಕ್ಫ
ಕಮಿಟಿಯಿಂದ ಸಾಧ್ಯವಾಗುವ ಎಲ್ಲಾ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿದ್ದು ಇದಕ್ಕೆ ತಮ್ಮೆಲ್ಲರ ಸಹಕಾರ ಬೇಕು, ಸೂಕ್ತವಾದ ಯೋಜನೆಗಳನ್ನು ರೂಪಿಸಿ ಕಳಿಸಿದರೆ ಅದನ್ನು ಕಾರ್‍ಯಗತ ಮಾಡಲು ಪ್ರಯತ್ನಿಸುತ್ತೇನೆ ಎಂದರು.
ಸೈಯದ್ ಹಜ್ಜು ಖಾದ್ರಿ, ಎಂ.ಡಿ.ಹುಸೇನ ಮಾತನಾಡಿದರು. ಅಧ್ಯಕ್ಷೀಯ ಭಾಷಣ ಮಾಡಿದ ಜಾಮಿಯಾ ಮಸ್ಜಿದ್ ಪಂಚ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ ಬಿಸರಳ್ಳಿ ಸಮಾಜದ ಅಭಿವೃದ್ದಿಗಾಗಿ ನಿಸ್ವಾರ್ಥದಿಂದ ಸೇವೆ ಮಾಡುತ್ತಿರುವ ಕೆ.ಎಂ.ಸಯ್ಯದ್ ರವರ ಸೇವೆ ಸ್ಮರಣಿಯಾದದ್ದು , ಖಬರಸ್ಥಾನದ ಕಂಪೌಂಡ್ ನಿರ್ಮಿಸುವದಕ್ಕೆ ಸಹಾಯ ನೀಡುತ್ತಿರುವ ಅವರ ಸೇವೆ ನಿರಂತರವಾಗಿರಲಿ ಅವರ ಎಲ್ಲಾ ಸೇವಾ ಕಾರ್‍ಯಗಳಿಗೆ ಭಾಗ್ಯನಗರದ ಮುಸ್ಲಿಂ ಸಮಾಜದ ಎಲ್ಲರ ಸಹಕಾರ ಇರುತ್ತದೆ ಎಂದರು. ಭಾಗ್ಯನಗರದ ಮುಸ್ಲಿಂ ಸಮಾಜಕ್ಕೆ ಈಗಿರುವ ಖಬರಸ್ಥಾನ ಬಹಳ ಚಿಕ್ಕದಾಗುತ್ತದೆ. ಕನಿಷ್ಠ ೪ ಎಕರೆ ಜಮೀನಿನ ಅವಶ್ಯಕತೆ ಇದ್ದು ಮುಂದಿನ ದಿನಗಳಲ್ಲಿ ಅದಕ್ಕಾಗಿ ಎಲ್ಲರೂ ಪ್ರಯತ್ನಿಸೋಣ ಎಂದು ಹೇಳಿದರು.
ವೇದಿಕೆಯ ಮೇಲೆ ರಾಜೇಸಾಬ ಹ್ಯಾಟಿ, ಕೆ.ಅನ್ಸಾರಿ, ಸಲಿಂಸಾಬ್ ಉಪಸ್ಥಿತರಿದ್ದರು. ಕಾರ್‍ಯಕ್ರಮವನ್ನು ಖಾಜಾಸಾಬ ಕಾಲಿಮಿರ್ಚಿ ನಡೆಸಿಕೊಟ್ಟರು. ಸಿರಾಜ್ ಬಿಸರಳ್ಳಿ ವಂದಿಸಿದರು. ಕಾರ್‍ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಹೊನ್ನೂರಸಾಬ ಬೈರಾಪೂರ, ಮಾಜಿ ಗ್ರಾ.ಪಂ.ಸದಸ್ಯ ಮಹೆಬೂಬಸಾಬ ಬಳಿಗಾರ, ಮಂಜೂಸಾಬ ಟಾಂಗಾ, ರಶಿದಸಾಬ ಆದೋನಿ, ಮೌಲಾಸಾಬ ಹಣಗಿ, , ಮಾಬುಸಾಬ ಮಾಲ್ದಾರ, ಖಾದರಸಾಬ, ದಾದಾಪೀರ,ಮುಸ್ತಪಾ, ಅನ್ವರಸಾಬ ಬಿಸರಳ್ಳಿ, ಕಬೀರಸಾಬ ಬೈರಾಪೂರ, ಮರ್ದಾನಸಾಬ ಹಿರೇಮಸೂತಿ, ಶರೀಪಸಾಬ ಟಾಂಗಾ, ಹುಸೇನಸಾಬ ನದಾಪ, ಬಾಬುಸಾಬ ಪಟೇಲ್, ಮರ್ದಾನಸಾಬ ದೊಡ್ಡಮನಿ ಸೇರಿದಂತೆ ಭಾಗ್ಯನಗರದ ಮುಸ್ಲಿಂ ಸಮಾಜದ ಭಾಂಧವರು ಉಪಸ್ಥಿತರಿದ್ದರು.
Please follow and like us:
error