ಐತಿಹಾಸಿಕ ಸ್ಮಾರಕಗಳ ರಕ್ಷಣೆಗಾಗಿ ಪಾರಂಪರಿಕ ಕಾಲ್ನಡಿಗೆ

ಕೊಪ್ಪಳ : ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರಾ ಕೂಟದ ಆಶ್ರಯದಲ್ಲಿ ದಿನಾಂಕ ೧೪/೦೩/೨೦೧೫ರ ಶನಿವಾರದಂದು ಐತಿಹಾಸಿಕ ಸ್ಮಾರಕಗಳ ರಕ್ಷಣೆ ಹಾಗೂ ಅವುಗಳ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಪ್ರಯುಕ್ತ ನಗರದ ಪ್ರಮುಖ ಬೀದಿಗಳಲ್ಲಿ ಪಾರಂಪರಿಕ ಕಾಲ್ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ವಿದ್ಯಾರ್ಥಿಗಳು ಐತಿಹಾಸಿಕ ಸ್ಮಾರಕಗಳ ರಕ್ಷಣೆ ಕುರಿತಂತೆ ಘೋಷಣೆಗಳನ್ನು ಕೂಗುತ್ತಾ, ಸಾರ್ವಜನಿಕರಲ್ಲಿ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಅವುಗಳ ಮಹತ್ವದ ಹಾಗೂ ಮುಂದಿನ ಪೀಳಿಗೆಗೆ ಅವುಗಳನ್ನು ಕಾಯ್ದುಕೊಳ್ಳುವ ಕುರಿತು ಅರಿವು ಮೂಡಿಸಲು ಕರಪತ್ರಗಳನ್ನು ಹಂಚಲಾಯಿತು.
   ಪಾರಂಪರಿಕ ಕಾಲ್ನಡಿಗೆಯು ಕಾಲೇಜಿನಿಂದ ಪ್ರಾರಂಭಗೊಂಡು ಡಾ|| ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ಗಡಿಯಾರ ಕಂಭಕ್ಕೆ ಬಂದು ಮುಂದೆ ಜವಾಹರ ರಸ್ತೆ ಮುಖಾಂತರ ಅಶೋಕ ವೃತ್ತ ತಲುಪಿ, ಅಲ್ಲಿಂದ ಪುನ: ಕಾಲೇಜಿಗೆ ಮರಳಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್.ಬಿ ಶಾಂತಪ್ಪನವರ ಕಾಲ್ನಡಿಗೆಗೆ ಚಾಲನೆ ನೀಡಿದರು. ಪರಂಪರಾಕೂಟದ ಸಂಚಾಲಕಿಯಾದ ಶ್ರೀಮತಿ ಶುಭಾ ಇದರ ನೇತೃತ್ವವಹಿಸಿದ್ದರೆ, ಉಪನ್ಯಾಸಕರಾದ ಶ್ರೀ ತುಕಾರಾಮ ನಾಯಕ, ಶ್ರೀ ಜ್ಞಾನೇಶ್ವರ ಪತ್ತಾರ, ಮನೋಜ ಹಾಗೂ ವಿದ್ಯಾರ್ಥಿಗಳು ಪಾರಂಪರಿಕ ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು.
Please follow and like us:

Related posts

Leave a Comment