ಉದ್ಯೋಗ ಖಾತ್ರಿ ಯೋಜನೆ : ಶಾಲಾ ಕಂಪೌಂಡಗೆ ಭೂಮಿ ಪೂಜೆ

ಕೊಪ್ಪಳ :- ಭಾಗ್ಯನಗರದ ಕೆ.ಹೆಚ್.ಡಿ.ಸಿ ಕಾಲೋನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೦೫  ರಂದು ಗ್ರಾಮ ಪಂಚಾಯತ ಭಾಗ್ಯನಗರದಿಂದ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕಂಪೌಂಡ ನಿರ್ಮಿಸಲು ಭೂಮಿ ಪೂಜೆ ಮಾಡಲಾಯಿತು.
    ಗ್ರಾಮದ ಉದ್ಯಮಿ ಹಾಗೂ ದಾನಿಗಳಾದ  ಶ್ರೀನಿವಾಸಗುಪ್ತಾ ರವರು ಪೂಜೆಯನ್ನು ನೆರವೇರಿಸಿದರು. ಹಾಗೂ ಶಾಲೆಗೆ ಅವಶ್ಯವಾದ ಶಾಲೆಯ ಮುಂದಿನ ೨ ಪ್ಲಾಟಗಳನ್ನು ಅಂದರೆ ೩೦x೮೦ ಜಾಗವನ್ನು ಸುಮಾರು ೪ ಲಕ್ಷ ರೂಪಾಯಿ ಮೊತ್ತ ಕೊಟ್ಟು ಖರೀದಿಸಿ ಶಾಲೆಗೆ ದಾನವಾಗಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ರಮೇಶ ಹ್ಯಾಟಿ, ಮಂಜುನಾಥ ಹೊಸಪೇಟಿ, ಯಮನಪ್ಪ ತಂಬ್ರಳ್ಳಿ, ಚಂದ್ರು ಉಂಕಿ, ಸುರೇಶ ದರಗದಕಟ್ಟಿ ಶಾಲೆಯ ಮುಖ್ಯೋಪಾಧ್ಯಾಯ ವೀರೇಶ ಹುಲ್ಲೂರ, ಮುಖಂಡರಾದ ಬಾಲಚಂದ್ರಸಾ ಬಾವಿಕಟ್ಟಿ, ಅಮರೇಶ ಹಣಗಿ, ಮೌಲಾಸಾಬ ಹಣಗಿ, ಸಿದ್ಲಿಂಗಪ್ಪ ಪುರದ, ಗ್ರಾ.ಪಂ ಸಿಬ್ಬಂದಿ ಉಜ್ವಲ್, ಶಾಲೆಯ ಶಿಕ್ಷಕರು ಮಕ್ಕಳು ಹಾಜರಿದ್ದರು.

Leave a Reply