fbpx

ಉದ್ಯೋಗದಲ್ಲಿ ಶೇ.೩ರಷ್ಟು ಅಂಗವಿಕಲರಿಗೆ ಮೀಸಲು ಸುಪ್ರಿಂ ಕ್ರಮಕ್ಕೆ ಸ್ವಾಗತ

ಕೊಪ್ಪಳ:ಸರ್ಕಾರದ ಇಲಾಖೆ,ಸಂಸ್ಥೆ ಹಾಗೂ ಸರಕಾರಿ ಸ್ವಾಮ್ಯದ ಕಂಪನಿಗಳ ಉದ್ಯೋಗಾವಕಾಶಗಳಲ್ಲಿ ದೈಹಿಕ ಅಸಮರ್ಥರಿಗೆ ಶೇ.೩ರಷ್ಟು ಮೀಸಲಾತಿ ಕಲ್ಪಿಸುವಂತೆ ಸುಪ್ರಿಂಕೋರ್ಟ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿರುವ ಕ್ರಮವನ್ನು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಸ್ವಾಗತಿಸಿದ್ದಾರೆ.
        ಈಗಾಗಲೇ ಈ ನಿಯಮ ಜಾರಿಯಲ್ಲಿದ್ದರೂ ಕೂಡಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರಿಯಾದ ರೀತಿಯಲ್ಲಿ ನಿಯಮವನ್ನು ಪಾಲಿಸದೆ ಅಂಗವಿಕಲರು ಅನೇಕ ಉದ್ಯೋಗಗಳಿಂದ ವಂಚಿತರಾಗಿದ್ದಾರೆ.ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರಿಯಾದ ರೀತಿಯಲ್ಲಿ ಅನುಷ್ಟಾನಕ್ಕೆ ತಂದು ಅಂಗವಿಕಲರಿಗೆ ಉದ್ಯೋಗ ನೀಡುವತ್ತಾ ಕಾರ್ಯನಿರ್ವಹಿಸಲಿ ಎಂದು ತಿಳಿಸಿದರು.
Please follow and like us:
error

Leave a Reply

error: Content is protected !!