fbpx

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಚ್ಚತಾ ಅಭಿಯಾನ.

ಕೊಪ್ಪಳ -28-  ತಾಲೂಕಿನ ಭಾಗ್ಯನಗರ ಗ್ರಾಮದ ಕೀರ್ತಿಕಾಲೂನಿಯಲ್ಲಿ  ದಿ ೨೮. ರಂದು ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರವನ್ನು ಡಾ|| ಶ್ರೀನಿವಾಸ ಅನಸಿರವರು ಉದ್ಘಾಟನೆ ಮಾಡುವ ಮುಖಾಂತರ ಸ್ವಚ್ಚತಾ ಕಾರ್ಯಕ್ರಮಕ್ಕೆ ಛಾಲನೆ ನೀಡಿದರು. ಶಿಲ್ಪಾ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೇಲ್ವಿಚಾರಕರು ಪ್ರಸ್ತಾವಿಕವಾಗಿ ಮಾತನಾಡಿ ವೈಯಕ್ತಿಕ ಸ್ವಚ್ಚತೆಯ ಬಗ್ಗೆ ಶೌಚಾಲಯ ಬಳಕೆಗಳ ಬಗ್ಗೆ ಗಟಾರಗಳ ಸ್ವಚ್ಚತೆಯ ಬಗ್ಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಲಿಜು ಮಾಡುವುದರ ಬಗ್ಗೆ, ಪ್ಲಾಸ್ಟೀಕ್ ಬಳಕೆ, ಬಯಲು ಮಲ ವಿರ್ಸಜನೆ, ಮುಕ್ತ ಮನೆಗೊಂದು ಶೌಚಾಲಯ ಕಟ್ಟಿಕೊಳ್ಳುವ ಬಗ್ಗೆ ಇನ್ನೂ ಮುಂತಾದ ಕಲುಶೀತ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಾರ್ವಜನಿಕರಿಗೆ ತಿಳಿಸುವ ಮೂಲಕ ಜನರಿಗೆ ಮನವರಿಕೆ ಮಾಡಿದರು. ಈ ಸ್ವಚ್ಚತಾ ಕಾರ್ಯಕ್ರಮಕ್ಕೆ ಅಕ್ಬರಸಾಬ ಕಾಲಿ ಮಿರ್ಚಿ ಸಾಹಿತಿಗಳು, ಶಂಕ್ರಪ್ಪ ಕುರಟ್ಟಿ ಮಾಜಿ ಗ್ರಾ.ಪಂ ಸದಸ್ಯರು, ಏಕನಾಥಪ್ಪ ದೇವದುರ್ಗಾ ಮಾರ್ಕಂಡೇಶ್ವರ ದೇವಸ್ಥಾನದ ಅಧ್ಯಕ್ಷರು, ಶಿಲ್ಪಾ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೇಲ್ವಿಚಾರಕರು, ಶಾರದಾ ಬಡಿಗೇರ ಒಕ್ಕೂಟದ ಅಧ್ಯಕ್ಷರು, ಸೇವಾ ಪ್ರತಿನಿಧಿಗಳಾದ ಉಮಾ, ಸರೋಜ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!