fbpx

ಶೈಕ್ಷಣಿಕ ಹಾಗೂ ಸಾಂಸ್ಕೃತಿ ಸಂಘದ ಅಧ್ಯಕ್ಷರಾಗಿ ಸಂಗಮೇಶ ಬಾದವಾಡಗಿ ಆಯ್ಕೆ

ಕೊಪ್ಪಳ : ಬೆಂಗಳೂರಿನ ರಾಜಾಜಿನಗರದ ವೀನಸ್ ಇಂಟರ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಹೈದ್ರಬಾದ ಕನಾಟಕ ನಿವಾಸಿಗಳ ಶೈಕ್ಷಣಿಕ ಸಾಂಸ್ಕೃತಿ ಸಂಘದ ಸರ್ವಸದಸ್ಯರ ಸಭೆಯಲ್ಲಿ ೨೦೧೪ – ೨೦೧೯ ರ ಸಾಲಿಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪುರದ  ಸಂಗಮೇಶ ಬಾದವಾಡಗಿಯವರು ಹೈದ್ರಾಬಾದ ಕರ್ನಾಟಕ ನಿವಾಸಿಗಳಾದ ಶೈಕ್ಷಣಿಕ ಹಾಗೂ ಸಾಂಸ್ಕೃತಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
ಉಪಾಧ್ಯಕ್ಷರಾಗಿ ವಿ.ಬಿ.ಪಾಟೀಲ (ಸಾಮಾನ್ಯ) ಡಾ. ಬಾಬುರಾವ್ ಹುಡಗೀಕರ (ಬೀದರ) ಎಸ್.ಎಂ. ಸಂಗಮೇಶ್ವರ (ಗುಲಬರ್ಗಾ) ಬಾಪುಗೌಡ ಪಾಟೀಲ (ಯಾದಗಿರಿ) ಕೆ.ಆರ್. ಕಂದಗಲ್ (ರಾಯಚೂರ) ಬಸಪ್ಪ ಗೋನಾಳ (ಕೊಪ್ಪಳ) ಪ್ರಧಾನ ಕಾರ್ಯದರ್ಶಿಗಳಾಗಿ ಶರಣಪ್ಪ ಕಡಾದಿ, ಜಂಟಿ ಕಾರ್ಯದರ್ಶಿಯಾಗಿ ಉದಯಕುಮಾರ ವಿ., ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಕಾಂತ ಬಂಡಾರೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಾಂತಲಾ ಆರ್. ನವಬಾದೆ, ಖಜಾಂಚಿಯಾಗಿ ಜಯಪ್ರಕಾಶ ಸಾಹು, ಸಂಚಾಲಕರಾಗಿ ಬಸವಲಿಂಗಪ್ಪ ಶಾವಂತಗೇರಿ, ಸಲಹೆಗಾರರಾಗಿ ಶಂಕರ ಸೀರಿ ರವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.  
ಸಂಘವು ಸಂವಿಧಾನದ ತಿದ್ದುಪಡಿ ೩೭೧ ನೇ ಜೆ ಇಂದ ಹೈ. ಕ. ಭಾಗಕ್ಕೆ ಆಗುವ ಪ್ರಯೋಜನ ಹಾಗೂ ಸರಕಾರದ ಆದೇಶ ಮತ್ತು ಅದರಿಂದ ದೊರೆತಿರುವ ಹಕ್ಕುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಉಚಿತವಾಗಿ ಹಂಚುವದು. ಈ ವಿಷಯ ಕುರಿತು ಜನಪ್ರತಿನಿಧಿಗಳೊಂದಿಗೆ ವಿಚಾರ ಸಂಕಿರಣ, ಸಂವಾದ ಏರ್ಪಡಿಸುವುದು. ಜನೇವರಿ ೨೦೧೫ ರ ಮಾಹೆಯಲ್ಲಿ ಬೃಹತ್ ಕಲ್ಯಾಣ ಕರ್ನಾಟಕ ಹಬ್ಬವನ್ನು ಆಯೋಜಿಸಿ ಈ ಭಾಗದ ಸಾಹಿತ್ಯ , ಸಂಸ್ಕೃತಿ, ಜಾನಪದ, ಕಲೆ, ಗ್ರಾಮೀಣ ಪರಂಪರೆ ಇತಿಹಾಸವನ್ನು ಬೆಂಗಳೂರಿನ ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸುವುದು. ಈ ಭಾಗದ ಐ.ಎ.ಎಸ್., ಐ.ಪಿ.ಎಸ್. ಅಭ್ಯರ್ಥಿಗಳಿಗೆ  ತರಬೇತಿ ನೀಡುವುದು. ಹೈ. ಕ. ಭಾಗದಿಂದ ಅಂದಾಜು ೮.೦೦ ಲಕ್ಷಕ್ಕೂ ಮಿಕ್ಕಿ ಕಾರ್ಮಿಕರು ಬೆಂಗಳೂರಿನಲ್ಲಿ ಕೂಲಿಗಾಗಿ ಹೋಗಿದ್ದು, ಅವರಿಗಾಗಿ ತಾತ್ಕಾಲಿಕ ಪುನರ್ವಸತಿ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸದ ಮುಂದುವರಿಕೆಗೆ ಏರ್ಪಾಟು ಮಾಡುವ ಯೋಜನೆ ಹೊಂದಿದೆ.  
ಈಗಾಗಲೇ ಗೃಹ ನಿರ್ಮಾಣ ಮಂಡಳಿಯ ಸಿ.ಎ. ಸೈಟಿಗೆ ಅರ್ಜಿ ಸಲ್ಲಿಸಿದ್ದು, ಅದಕ್ಕಾಗಿ ಪಡೆಯುವ ಪ್ರಯತ್ನ ಮುಂದುವರೆದಿದೆ. ಇದು ಕೈಗೂಡಿದಲ್ಲಿ ಕೂಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಈ ಸಂಸ್ಥೆಯು ವೇದಿಕೆ ಯಾಗಲಿದೆ. 
Please follow and like us:
error

Leave a Reply

error: Content is protected !!