ಬಾರ್ ಮತ್ತು ವೈನ್ ಶಾಪ್‌ಗಳಿಗೆ ೨. ೧೦ ಲಕ್ಷ ರೂ. ದಂಡ.

ಕೊಪ್ಪಳ
ಡಿ. ೧೫ (ಕ ವಾ) ತೂಕ ಮತ್ತು ಅಳತೆ ಕಾಯ್ದೆ ಉಲ್ಲಂಘನೆಗಾಗಿ ಗದಗ ಮತ್ತು
ಬೆಟಗೇರಿಯಲ್ಲಿನ ಬಾರ್ ಮತ್ತು ವೈನ್ ಶಾಪ್‌ಗಳಿಗೆ ಒಟ್ಟು ೨. ೧೦ ಲಕ್ಷ ರೂ. ದಂಡ
ವಿಧಿಸಲಾಗಿದೆ ಎಂದು ಗುಲಬರ್ಗಾ ಮತ್ತು ಬೆಳಗಾವಿ ವಿಭಾಗ ವ್ಯಾಪ್ತಿಯ ಕಾನೂನು ಮಾಪನ
ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರು ತಿಳಿಸಿದ್ದಾರೆ.
     ಗುಲಬರ್ಗಾ ಮತ್ತು
ಬೆಳಗಾವಿ ವಿಭಾಗದ ವ್ಯಾಪ್ತಿಯನ್ನು ಹೊಂದಿರುವ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಂಚಾರಿ
ದಳದಿಂದ ಗದಗ ಮತ್ತು ಬೆಟಗೇರಿಯಲ್ಲಿ ತೂಕ ಮತ್ತು ಅಳತೆ ಕಾಯ್ದೆ ಉಲ್ಲಂಘಿಸಿದ ಬಾರ್
ಮತ್ತು ವೈನ್‌ಶಾಪ್‌ಗಳ ವಿರುದ್ಧ ಹೂಡಿದ ಮೊಕದ್ದಮೆಗಳಲ್ಲಿ ಗದುಗಿನ ಪ್ರಥಮ ದರ್ಜೆ
ನ್ಯಾಯಿಕ ದಂಡಾಧಿಕಾರಿಗಳು ಒಟ್ಟು ೨. ೧೦ ಲಕ್ಷ ರೂ. ದಂಡ ವಿಧಿಸಿದ್ದಾರೆ.  ಬೆಟಗೇರಿಯ
ರೇಣುಕಾ ವೈನ್ಸ್- ರೂ. ೧೬೨೦೦೦, ದೇವಿ ಬಾರ್ & ರೆಸ್ಟೋರೆಂಟ್- ರೂ. ೨೪೦೦೦. 
ಗದುಗಿನ   ಶಿವಾನಿ ಇನ್ ಹೋಟೆಲ್‌ಗೆ ೨೪೦೦೦ ರೂ. ಗಳ ದಂಡ ವಿಧಿಸಲಾಗಿದೆ ಎಂದು
ಹುಬ್ಬಳ್ಳಿ ಸಂಚಾರಿ ದಳದ ಸಹಾಯಕ ನಿಯಂತ್ರಕ ಮಧುಕರ್ ಘೋಡಕೆ ತಿಳಿಸಿದ್ದಾರೆ.

Related posts

Leave a Comment