೩೧-೦೮-೨೦೧೩ ರಂದು ಉಚಿತ ಹೃದಯ ರೋಗ ತಪಾಸಣೆ

ಕೊಪ್ಪಳ: ಎಸ್.ಡಿ.ಎಂ, ನಾರಾಯಣ ಹಾರ್ಟ ಸೆಂmರ್, ನಾರಾಯಣ ಹೆಲ್ತ್ ಘಟಕ ಬೆಂಗಳೂರು, ಹಾಗೂ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀಗವಿಸಿದ್ಧಶ್ವರ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ  ಬೆಳಿಗ್ಗೆ ೧೦ ರಿಂದ ಮದ್ಯಾಹ್ನ ೩ ರವರೆಗೆ ಉಚಿತ ಹೃದಯ ರೋಗ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ನುರಿತ ತಜ್ಞವೈದ್ಯರುಗಳು ತಪಾಸಣೆ ನಡೆಸಲಿದ್ದಾರೆ. ಬಿ.ಪಿ, ಇ.ಸಿ.ಜಿ, ಎಕೋ ಪರೀಕ್ಷೆಗಳನ್ನು ಉಚಿತ ಮಾಡಲಾಗುತ್ತದೆ.  ತಪಾಸಣೆ ನಂತರ ಬಿ.ಪಿ.ಎಲ್ ಕಾರ್ಡ, ಅಂತ್ಯೋದಯ, ತಾತ್ಕಾಲಿಕ ಪಡಿತರ ಚೀಟಿ ಹೊಂದಿರುವರು, ಯಶಸ್ವಿನಿ ಕಾರ್ಡ, ಆರೋಗ್ಯವಿಮೆ ಹಾಗೂ ೧ ರಿಂದ ೧೦ ನೇ ವರ್ಗದ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದ ಸುವರ್ಣ ಆರೋಗ್ಯ ಚೇತನದಲ್ಲಿ ಉಚಿತ ಶಸ್ತ್ರ ಚಿಕಿತ್ಸೆ  ಮಾಡಲಾಗುವದು.  ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಾಚಾರ್ಯ ಡಾ.ಬಿ.ಎಸ್.ಸವಡಿ ಹಾಗೂ ಡಾ.ಸುರೇಶಹಕ್ಕಂಡಿ  ತಿಳಿಸಿದ್ದಾರೆ.

Leave a Reply