You are here
Home > Koppal News > ಕೊಪ್ಪಳ : ೧೮ ಅಭ್ಯರ್ಥಿಗಳಿಂದ ೨೫ ನಾಮಪತ್ರ ಸಲ್ಲಿಕೆ

ಕೊಪ್ಪಳ : ೧೮ ಅಭ್ಯರ್ಥಿಗಳಿಂದ ೨೫ ನಾಮಪತ್ರ ಸಲ್ಲಿಕೆ

 ವಿಧಾನಸಭಾ ಚುನಾವಣೆಗಾಗಿ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳವಾರದಂದು ಒಟ್ಟು ೧೮ ಅಭ್ಯರ್ಥಿಗಳಿಂದ ೨೫ ನಾಮಪತ್ರ ಸಲ್ಲಿಕೆಯಾಗಿವೆ.
  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದು, ಶಂಕ್ರಯ್ಯ ಗವಿಸಿದ್ದಯ್ಯ ಗಂಧದಮಠ ಅವರು ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.
  ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳಿಂದ ಏಳು ನಾಮಪತ್ರಗಳು ಸಲ್ಲಿಕೆಯಾಗಿವೆ.  ಬಸವರಾಜ ನರಸಪ್ಪ ಬಿಲ್ಕಾರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.  ಅಬ್ದುಲ್ ನಯೀಮ್- ಪಕ್ಷೇತರ (೧), ಲಕ್ಷ್ಮಣ ತಳವಾರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ ಕೆ.ಜೆ.ಪಿ. ಪಕ್ಷದಿಂದ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.  ಬಸವರಾಜ ಮರಿಯಪ್ಪ ಬುನ್ನಟ್ಟಿ- ಸಿಪಿಐ(ಎಂಎಲ್) (೨) ಹಾಗೂ ಆನಂದಗೌಡ ದ್ಯಾಮನಗೌಡ ನಾಯಕ್- ಪಕ್ಷೇತರ (೧) ನಾಮಪತ್ರ ಸಲ್ಲಿಕೆಯಾಗಿದೆ.
  ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳಿಂದ ಐದು ನಾಮಪತ್ರ ಸಲ್ಲಿಕೆಯಾಗಿದೆ.  ಹುಲುಗಪ್ಪ- ಬಿ.ಎಸ್.ಪಿ,  ಭಾರಧ್ವಾಜ್- ಸಿ.ಪಿ.ಐ.(ಎಂ.ಎಲ್), ಬಸವರಾಜ ಪಾಟೀಲ್ ಅನ್ವರಿ- ಕೆ.ಜೆ.ಪಿ., ಯಮನೂರಪ್ಪ-ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.  ಸೋಮವಾರದಂದು ಜೆ.ಡಿ.ಎಸ್. ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಇಕ್ಬಾಲ್ ಅನ್ಸಾರಿ ಅವರು ಮಂಗಳವಾರದಂದು ಪುನಃ ಒಂದು ನಾಮಪತ್ರ ಸಲ್ಲಿಸಿದ್ದಾರೆ.
  ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳಿಂದ ಮೂರು ನಾಮಪತ್ರ ಸಲ್ಲಿಕೆಯಾಗಿವೆ.  ಶಿವಶಂಕರಯ್ಯ ಬೆಳಗಿರಿಮಠ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಸೋಮವಾರದಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಹಾಲಪ್ಪ ಆಚಾರ್ ಅವರು ಮಂಗಳವಾರದಂದು ಪುನಃ ಎರಡು ನಾಮಪತ್ರ ಸಲ್ಲಿಸಿದ್ದಾರೆ.
  ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳಿಂದ ಒಂಭತ್ತು ನಾಮಪತ್ರ ಸಲ್ಲಿಕೆಯಾಗಿವೆ.  ಮೋತಿಲಾಲ್ ಕೃಷ್ಣಪ್ಪ- ಜೆ.ಡಿ.ಯು (೨) ಪಕ್ಷದಿಂದ ಮತ್ತು ಪಕ್ಷೇತರ (೨) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.  ಎಂ. ಯೇಸಪ್ಪ- ಸಿ.ಪಿ.ಐ (ಎಂಎಲ್)(೧), ಸಣ್ಣ ಹುಲುಗಪ್ಪ ಪಾಮಪ್ಪ- ಸಿ.ಪಿ.ಐ.(ಎಂ) (೨), ಶ್ರೀಧರ ಶಂಕರಪ್ಪ- ಬಿ.ಎಸ್.ಪಿ (೧) ಹಾಗೂ ಪಾಲಾಕ್ಷಯ್ಯ ಹಿರೇಮಠ ಅವರು ಪಕ್ಷೇತರರಾಗಿ ಪುನಃ ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.

Leave a Reply

Top