ಅನ್ಮೋಲ್ ಸೇನಾ ನಾಯಕನಿಗೆ ’ವೀರ ಕನ್ನಡಿಗ ಟಿಪ್ಪು ಸುಲ್ತಾನ್’ ಪ್ರಶಸ್ತಿಯ ಗರಿ

ಪತ್ರಕರ್ತರು ಸ್ವಾಭಿಮಾನದಿಂದ ಬದುಕಬೇಕು: ಅನ್ಮೋಲ್ ಪತ್ರಿಕಾ ಸಮೂಹ ಪ್ರಧಾನ ಸಂಪಾದಕ ಎಂ.ಎ.ವಲಿಸಾಹೇಬ್
ಲಿಂಗಸಗೂರು: ಸಮಾಜ ಓರೆಕೋರಗಳನ್ನು ತಿದ್ದಿ, ಹಳ್ಳಿಯ ಸುದ್ದಿಯನ್ನು ದೆಹಲಿ ತಲುಪಿಸಿ, ದೆಹಲಿ ಸುದ್ದಿಯನ್ನು ಗಲ್ಲಿಗಲ್ಲಿಯ ಮನೆಗಳಿಗೆ ಮುಟ್ಟಿಸುವ ಪತ್ರಕರ್ತ ದೇಶದ ಪ್ರಧಾನ ಸೇವಕನಾಗಿದ್ದು ಸಮುದಾಯದಲ್ಲಿ ಅತ್ಯಂತ ಸ್ವಾಭಿಮಾನದಿಂದ ಬದುಕಬೇಕು ಎಂದು ಅನ್ಮೋಲ್ ಪತ್ರಿಕಾ ಸಮೂಹ ಪ್ರಧಾನ ಸಂಪಾದಕರು ಹಾಗೂ ಅನ್ಮೋಲ್ ಗ್ರೂಪ್ ಆಪ್ ಕಂಪನೀಸ್‌ನ ಚೇರ‍್ಮನ್‌ನ ಎಂ.ಎ.ವಲಿಸಾಹೇಬ್ (ಹಕೀಂಸಾಹೇಬ್) ತಿಳಿಸಿದರು.
ಅವರು, ಲಿಂಗಸಗೂರಿನ ಗುರುಭವನದಲ್ಲಿ ಅಹಿಂದ ರಾಷ್ಟ್ರೀಯ ಶಿಕ್ಷಣ ಹಾಗೂ ಗ್ರಾಮೀಣ ಮತ್ತು ನಗರಾಭಿವೃದ್ಧಿ ಟ್ರಸ್ಟ್‌ವತಿಯಿಂದ ವೈದ್ಯಕಿರಣ ಪತ್ರಿಕೆಯ ಏಳನೇ ವಾರ್ಷಿಕೋತ್ಸವದ ಅಂಗವಾಗಿ ಕೊಡಮಾಡಲ್ಪಡಲ್ಪಟ್ಟ ’ವೀರಕನ್ನಡಿಗ ಟಿಪ್ಪು ಸುಲ್ತಾನ್’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಸಮಾಜದ ಕಟ್ಟಕಡೆಯ ಸಮುದಾಯ ಎದುರಿಸುತ್ತಿರುವ ಬವಣೆಗಳನ್ನು, ಶೋಷಿತರ ಧ್ವನಿಯನ್ನು ಸರಕಾರದ ಕಿವಿಮುಟ್ಟಿಸಿ ಎಚ್ಚರಿಸುವ ಕೆಲಸಗಳನ್ನು ಪತ್ರಿಕೆಗಳು ಮಾಡಬೇಕಿದೆಯಲ್ಲದೆ, ಜನನಾಯಕರ ಯಾವುದೇ ಆಶೆ ಆಮೀಷಗಳಿಗೆ ಬಲಿಯಾಗದ ದಿಟ್ಟತನದಿಂದ ವರದಿ ಪ್ರಕಟಿಸುವ ಮುಖೇನ ಸ್ವಾಸ್ಥ್ಯ ಸಮಾಜಕ್ಕೆ ನಾಂದಿಹಾಡಬೇಕಾದ ಅನಿವಾರ‍್ಯತೆ ಎದುರಾಗಿದ್ದು, ಅಡೆತಡೆಗಳನ್ನು ಮೀರಿ ಬೆಳೆಯಬೇಕು, ಆಗಲೇ ಸಮಾಜಕ್ಕೆ ನಾವು ಮಾದರಿಯಾಗಬಲ್ಲೆವು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಧ್ಯಕ್ಷ ಕೆ.ಎಸ್.ಎಲ್ ಸ್ವಾಮಿ ಮಾತನಾಡಿ, ಪತ್ರಿಕಾ ಸೇವೆಯ ಜತೆಗೆ ಸಮಾಜ ಸೇವೆಯನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿರುವ ಅನ್ಮೋಲ್ ಗ್ರೂಪ್ ಆಫ್ ಕಂಪನೀಸ್‌ನ ಚೇರ‍್ಮನ್ ಎಂ.ಎ.ವಲಿಸಾಹೇಬರ ಕಾರ್ಯ ಅನುಕರಣೀಯ, ಪತ್ರಿಕೆ, ಚಾನಲ್ಲು ಸೇರಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಲ್ಲದೆ, ಉಚಿತ ವೈದ್ಯಕೀಯ ಸೇವೆ ಮತ್ತು ಸಮಾಜದ ನೊಂದ ಜನರಿಗೆ ಸಾಂತ್ವಾನ ಹೇಳುವ ಜೋತಿಷ್ಯ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಅಗತ್ಯವಿದೆ. ವಿಶ್ವದ ಮುಂಚೂಣಿ ರಾಷ್ಟ್ರಕ್ಕೆ ಭಾರತ ಸೇರಬೇಕಾದಲ್ಲಿ ಇಲ್ಲಿನ ಸಂಪನ್ಮೂಲಗಳ ಸದ್ಬಳಿಕೆ ಸೇರಿದಂತೆ ಸರಕಾರದಿಂದ ಬಿಡುಗಡೆಯಾಗುವ ಅನುದಾನ ಪೊಲಾಗದಂತೆ, ಕಳಪೆ ಕಾಮಗಾರಿಗಳಾಗದಂತೆ ಪತ್ರಿಕೆಗಳು ಕಾವಲು ಕೆಲಸ ಮಾಡಬೇಕು, ಅನೀತಿ ಅತ್ಯಾಚಾರ ಅನ್ಯಾಯಗಳು ನಡೆದಲ್ಲಿ ಧ್ವನಿಎತ್ತುವ ಮುಖೇನ ಪತ್ರಿಕೆಗಳು ತಮ್ಮ ನಿಭೀತಿಯನ್ನು ಬಿಂಬಿಸಬೇಕು. ದುರ್ಬಲರು, ಅಸಹಾಯಕರಿಗೆ ಆತ್ಮ ವಿಶ್ವಾಸ ತುಂಬಿ ಅವರಲ್ಲಿ ಸಬಲತೆ ತರಬೇಕು. ಜಾತಿಮತಪಂಥಗಳನ್ನು ಮೀರಿ ಮಾನವೀಯ ಮೌಲ್ಯಗಳೇ ಬರಹದ ಮುಖ್ಯ ಗುರಿಯಾಗಿ ಪತ್ರಕರ್ತರು ಕಾರ್ಯ ನಿರ್ವಹಿಸಬೇಕಿದೆ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಗುರುಮುರಘೇಂದ್ರ ಶಿವಯೋಗಿಗಳು, ಕಾಲಜ್ಞಾನಮಠದ ಶ್ರೀ ಬಸವರಾಜಯ್ಯಸ್ವಾಮಿಗಳು ವಹಿಸಿದ್ದರು, ವೇದಿಕೆಯಲ್ಲಿ ವಿಸಿಬಿ ಶಿಕ್ಷಣ ಸಂಸ್ಥೆಯ ಸಿ.ಶರಣಪ್ಪ, ಲಿಂಗಸಗೂರು ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ, ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಸಂಪಾದಕ ಜಲಾಲುದ್ದೀನ್ ಅಕ್ಬರ್, ಸಮಾಜ ಸೇವಕ ಹೆಚ್.ನಾಗರಾಜ್, ವೀರಭದ್ರಯ್ಯ ವಸ್ತ್ರದ್, ಪತ್ರಕರ್ತರಾದ ನಾಗೇಶ್ ಸೇರಿದಂತೆ ಇತರರಿದ್ದರು. 
Please follow and like us:
error

Related posts

Leave a Comment