You are here
Home > Koppal News > ಚತುಷ್ಪಥ ಹೆದ್ದಾರಿ ಸಂಕಷ್ಟಕ್ಕೆ ದಾರಿ; ಜನರ ಅಳಲು

ಚತುಷ್ಪಥ ಹೆದ್ದಾರಿ ಸಂಕಷ್ಟಕ್ಕೆ ದಾರಿ; ಜನರ ಅಳಲು

ಕುಷ್ಟಗಿ: `ಎರಡ ಲೈನ ಎನ್‌ಎಚ್ ದಾಟೋದ್ರಾಗ ಎಷ್ಟೊ ಹೆಣ ಬಿದ್ದಾವ್ರಿ, ಇನ್ನ ನಾಲ್ಕ ಲೈನ್ ಆತಂದ್ರ ಮುಂದ ನಮ್ಗ ರಸ್ತೆ ಕ್ರಾಸ್ ಮಾಡೋದು ಭಾಳಾ ತ್ರಾಸೈತಿ ನಮ್‌ಗತಿ ನೆಟ್ಟಗಿಲ್ರಿ`!
ಪಟ್ಟಣದ ಮಧ್ಯೆ ಹಾದುಹೊಗಿರುವ ನಂ 13ನೇ ರಾಷ್ಟ್ರೀಯ ಹೆದ್ದಾರಿ ಚತು ಷ್ಪಥವಾಗಿ ಅಭಿವೃದ್ಧಿ ಗೊಳ್ಳು ತ್ತಿರು ವುದಕ್ಕೆ ನಾಗರಿಕರು, ರೈತರು ಹೇಳುವ ಮಾತಿದು. ನಾಲ್ಕು ಮಾರ್ಗ ಗಳಾದರೆ ವಾಹನಗಳು ಮತ್ತು ಅವುಗಳ ವೇಗದ ಭರಾಟೆಗೆ ಮಿತಿ ಮೀರುತ್ತದೆ, ಅದರಿಂದ ವಿವಿಧ ಕಾಲೊನಿಗಳ ಜನರು, ರೈತರು ತೀವ್ರ ತೊಂದರೆಗೊಳಗಾತ್ತಾರೆ ಎಂಬ ಸಾಮಾನ್ಯ ಕಲ್ಪನೆ ಇಲ್ಲದಂತೆ ಅಧಿಕಾರಿ ಗಳು ಮತ್ತು ಚುನಾಯಿತ ಪ್ರತಿನಿಧಿಗಳು ವರ್ತಿಸುತ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚತುಷ್ಪಥಕ್ಕೆ ಜನರ ಅಭ್ಯಂತರವಿಲ್ಲ, ಆದರೆ ಶಾಲಾ ಕಾಲೇಜಿಗೆ ಹೋಗಿ ಬರುವ ಮಕ್ಕಳು, ಸಣ್ಣಪುಟ್ಟ ಖರೀದಿ ಮತ್ತಿತರೆ ಕೆಲಸಕಾರ್ಯಗಳು, ವ್ಯವಹಾರಗಳಿಗೆ ಬರುವ ಮಹಿಳೆಯರು, ಕಚೇರಿ ಕೆಲಸಗಳಿಗೆಂದು ಬರುವ ಸಾರ್ವಜನಿಕರು ಸೇರಿದಂತೆ ಶೇ 25ರಷ್ಟು ನಿವಾಸಿಗಳು ಪಟ್ಟಣದ ಮಧ್ಯೆ ಹಾದುಹೋಗಿರುವ ಹೆದ್ದಾರಿಯನ್ನು ದಾಟುವಾಗ ಜೀವ ಕೈಯಲ್ಲಿ ಹಿಡಿದುಕೊಳ್ಳುವಂಥದ್ದು ಸದ್ಯದ ಸ್ಥಿತಿ. ಇನ್ನು ಚತುಷ್ಪಥವಾದರೆ ಪರಿಸ್ಥಿತಿ ಹೇಗಿರಬಹುದೆಂಬ ಆತಂಕ ಪಟ್ಟಣದ ಜನರನ್ನು ಕಾಡುತ್ತಿದೆ.
`ರಸ್ತೆ ಅಭಿವೃದ್ಧಿ ಹೇಗೆ ಅನವಾರ್ಯವೊ ಅದನ್ನು ಸುರಕ್ಷಿತವಾಗಿ ದಾಟುವ ನಮಗೆ ಅಗತ್ಯ ಸ್ಥಳದಲ್ಲಿ ಫೈಒವ್ಹರ್, ಅಂಡರ್‌ಬ್ರಿಡ್ಜ್ ಅಗತ್ಯ ಎಂಬ ಬೇಡಿಕೆಗೆ ಯಾರೂ ಸ್ಪಂದಿಸುತ್ತಿಲ್ಲ ಎಂಬ ಕೊರಗು ಜನರಲ್ಲಿ ಮನೆ ಮಾಡಿದೆ. ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದ್ದು ರಸ್ತೆ ದಾಟುವುದಕ್ಕೆ ಎಲ್ಲಿಯೂ ಸ್ಥಳ ಗುರುತಿಸದಿರುವುದು ಅಚ್ಚರಿ ಮೂಡಿಸಿದೆ.
ರಸ್ತೆ ಅಗಲೀಕರಣದ ವಿಷಯ ಪ್ರಸ್ತಾಪವಾದಾಗ ಸಂಸದರು, ಶಾಸಕರು, ಪುರಸಭೆಯವರು, ಜಿಲ್ಲಾ ಪಂಚಾಯತಿ ಹೀಗೆ ಯಾವ ಚುನಾಯಿತ ಪ್ರತಿನಿಧಿಗಳೂ ಜನ ಭವಿಷ್ಯದಲ್ಲಿ ಎದುರಿಸಬಹುದಾದ ಸಂಕಷ್ಟದ ಸ್ಥಿತಿಗೆ ಈಗಲೇ ಪರಿಹಾರ ಹುಡುಕುವ ಯತ್ನ ಮಾಡಿಲ್ಲ, ಈ ಸಮಸ್ಯೆ ಪುರಸಭೆಗೆ ಗಂಭೀರವಿಷಯವಾಗಿಲ್ಲ, ದನಿ ಎತ್ತಿದ ಕೆಲ ಪುರಪಿತೃಗಳ ಬಾಯಿ ಮುಚ್ಚಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.  
ಜಿಬ್ರಾಪಟ್ಟಿ: ಮೂಲ ಅಂದಾಜಿನ ಪ್ರಕಾರ ಸಿಂಧನೂರು ಕ್ರಾಸ್ ಬಳಿ ಮಾತ್ರ ಒಂದು ಬೃಹತ್ ವೃತ್ತ ನಿರ್ಮಾಣವಾಗಲಿದೆ, ಅಲ್ಲಿ ಪಾದಚಾರಿಗಳು ರಸ್ತೆ ದಾಟುವುದಕ್ಕೆ ಜಿಬ್ರಾ ಕ್ರಾಸ್ ಹಾಕಲಾಗುತ್ತದೆ. ಆದರೆ ರಸ್ತೆ ದಾಟುವುದಕ್ಕೆ ಜನರು ಒಂದು ಎರಡು ಕಿ.ಮೀ ದೂರದಿಂದ ಬಂದು ಈ ಜಿಬ್ರಾ ಕ್ರಾಸ್ ಮೂಲಕ ದಾಟಬೇಕು. 
ಚತುಷ್ಪಥದಲ್ಲಿ ವಾಹನಗಳ ದಟ್ಟಣೆ ಮತ್ತು ವೇಗವನ್ನು ಗಮನಿಸಿದರೆ ಹಗಲುಹೊತ್ತಿನಲ್ಲಿಯೇ ಇಲ್ಲಿ ರಸ್ತೆ ದಾಟಲು ಧೈರ್ಯ ಸಾಲುವುದಿಲ್ಲ ಎಂಬ ಕಳವಳ ನಿವೃತ್ತ ಪಿಎಸ್‌ಐ ಎ.ಜಿ.ಹಿರೇಮಠ, ಬಿಜೆಪಿ ಮುಖಂಡ ನಾಗರಾಜ ಮೇಲಿನಮನಿ, ಪುರಸಭೆ ಸದಸ್ಯ ವೀರೇಶ ಬಂಗಾರಶೆಟ್ಟರ್ ಇತರರದು.
ತಾರತಮ್ಯ: ಇಲ್ಲಿಯ ಜನಪ್ರತಿನಿಧಿಗಳು ಬಾಯಿ ಮುಚ್ಚಿಕೊಂಡಿದ್ದರಿಂದ ತಾಲ್ಲೂಕು ಕೇಂದ್ರದ ಜನ ಸಮಸ್ಯೆ ಎದುರಿಸುವಂತಾಗಿದೆ, ಅದರೆ ಇನ್ನೂ ಹೆದ್ದಾರಿ ದಾಟಿ ಬೆಳೆಯದ ಇಳಕಲ್ ಭಾಗದಲ್ಲಿ ಅಗತ್ಯಸ್ಥಳಗಳಲ್ಲಿ ಫ್ಲೈಒವ್ಹರ್, ಅಂಡರ್ ಬ್ರಿಡ್ಜ್‌ಗಳು ನಿರ್ಮಾಣವಾಗಿವೆ, ಅಲ್ಲಿಯ ಚುನಾಯಿತ ಪ್ರತಿನಿಧಿಗಳ ದೂರದೃಷ್ಟಿಯಿಂದಾಗಿ ಅದು ಸಾಧ್ಯವಾಗಿದೆ ಎಂದು ಜನರು ಇಲ್ಲಿಯ ಪ್ರತಿನಿಧಿಗಳ ವೈಫಲ್ಯಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಶಾಸಕರು ಏನಂತಾರೆ?: ಈ ಕುರಿತು ಶಾಸಕ ಅಮರೇಗೌಡ ಬಯ್ಯಾಪೂರ ಅವರನ್ನು `ಪ್ರಜಾವಾಣಿ` ಸಂಪರ್ಕಿಸಿದಾಗ, ಮೇಲ್ಸೇತುವೆ, ಕೆಳಸೇತುವೆ ಮಾಡುವುದಾಗಿ ಮೊದಲು ಹೇಳಿದ್ದರು ಆದರೆ ನಂತರ ಅದನ್ನು ಕೈಬಿಟ್ಟಿದ್ದು ತಮ್ಮ ಗಮನಕ್ಕೆ ಬಂದಿರಲಿಲ್ಲ. ಈ ಎರಡೂ ಸೇತುವೆಗಳು ಬೇಕೇ ಬೇಕು ಎಂದು ಹಟ ಹಿಡಿದಿದ್ದೇವೆ, ಮುಂದಿನವಾರ ಹೆದ್ದಾರಿ ಅಥಾರಿಟಿ ಆಫ್ ಇಂಡಿಯಾದ ತಾಂತ್ರಿಕ ಎಂಜಿನಿಯರ್ ಅವರು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ ಎಂದರು
ಪ್ರಜಾವಾಣಿ  

Leave a Reply

Top