ಗವಿಸಿದ್ದ ಎನ್.ಬಳ್ಳಾರಿಯವರ ಸಮಗ್ರ ಕಾವ್ಯ ಬಿಡುಗಡೆ

ಕೊಪ್ಪಳ : ದಿವಂಗತ ಗವಿಸಿದ್ದ ಎನ್.ಬಳ್ಳಾರಿಯವರ ಸಮಗ್ರ ಕಾವ್ಯ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 14ರಂದು ಸಂಜೆ 7ಗಂಟೆಗೆ ಫಿರ್ದೋಸ್ ನಗರದ ಜಚನಿ ಶತಾಭ್ದಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಾಹಿತಿ ಸತೀಶ ಕುಲಕರ್ಣಿ ಕೃತಿ ಬಿಡುಗಡೆ ಮಾಡಲಿದ್ದು , ಹಾವೇರಿಯ ಸ್ನಾತಕೊತ್ತರ ಕೇಂದ್ರದ ಡಾ.ನಿಂಗಪ್ಪ ಮುಂದೇನೂರು ಕಾವ್ಯದ ಕುರಿತು ಮಾತನಾಡಿದರು.ಹಾವೇರಿ ಸ್ನಾತಕೋತ್ತರ ಕೇಂದ್ರದ ಡಾ.ಟಿ.ಎಂ.ಭಾಸ್ಕರ ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಕವಿಗೋಷ್ಠಿ ಯಲ್ಲಿ ಹಲವಾರು ಕವಿಗಳು ಕವನ ವಾಚನ ಮಾಡಿದರು. ಸಮಾರಂಭವನ್ನು ಗವಿಸಿದ್ದ ಎನ್.ಬಳ್ಳಾರಿ ವೇದಿಕೆಯ ಎಚ್.ಎಸ್.ಪಾಟೀಲ್, ಅಲ್ಲಮಪ್ರಭು ಬೆಟ್ಟದೂರು ಮತ್ತು ಪ್ರಕಾಶ ಬಳ್ಳಾರಿ ನಡೆಸಿ ಕೊಟ್ಟರು.

Leave a Reply