ಲಿಂಗ ಸಮಾನತೆ ಕುಟುಂಬದಿಂದಲೇ ಪ್ರಾರಂಭವಾಗಲಿ- ಎಸ್. ಮಹೇಶ್.

ಕೊಪ್ಪಳ
ಸೆ. ೨೮ (ಕ ವಾ): ಗಂಡು-ಹೆಣ್ಣು ಎಂಬ ಬೇಧ ಭಾವ ತೊಡೆದುಹಾಕುವ
ನಿಟ್ಟಿನಲ್ಲಿ ಲಿಂಗ ಸಮಾನತೆಯು ಕುಟುಂಬದಿಂದಲೇ ಪ್ರಾರಂಭವಾಗಬೇಕು ಎಂದು ಕುಷ್ಟಗಿ
ಸಿವಿಲ್ ನ್ಯಾಯಾಧೀಶ ಎಸ್. ಮಹೇಶ್ ಅವರು ಹೇಳಿದರು.
     ಕುಷ್ಟಗಿ ತಾಲ್ಲೂಕು
ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಕುಷ್ಟಗಿ, ಮಹಿಳಾ ಅಭಿವೃದ್ದಿ ನಿಗಮ,
ದೇವದಾಸಿ ಪುನರ್ವಸತಿ ಯೋಜನೆ ಹಾಗೂ ಗ್ರಾಮ ಪಂಚಾಯತಿ ಗುಮಗೇರಿ ಇವರುಗಳ  ಸಂಯುಕ್ತ
ಆಶ್ರಯದಲ್ಲಿ ದೇವದಾಸಿ ಮಹಿಳೆಯರಿಗಾಗಿ ಹಾಗೂ ಹಿರಿಯ ನಾಗರಿಕರಿಗಾಗಿ ಕುಷ್ಟಗಿ ತಾಲೂಕು
ಗುಮಗೇರಾದ ಬಾಬು ಜಗಜೀವನರಾಂ ಸಮುದಾನ ಭವನದಲ್ಲಿ ಏರ್ಪಡಿಸಲಾಗಿದ್ದ ಕಾನೂನು
ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
     ಮಹಿಳೆಯರ ಮೇಲೆ
ಶೋಷಣೆ ನಡೆಯುವುದು ಸಮಾಜದಲ್ಲಿ ಮಾತ್ರವಲ್ಲಿ, ಅದು ಪ್ರತಿಯೊಂದು ಮನೆಯಿಂದಲೇ
ಪ್ರಾರಂಭವಾಗುತ್ತಿದೆ. ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಂ
ದೇವದಾಸಿ ಪುನರ್ವಸತಿ ಯೋಜನೆಯ
ಯೋಜನಾಧಿಕಾರಿ ಸುಧಾ ಎಂ, ಚಿದ್ರಿ ಅವರು, ದೇವದಾಸಿ ಪುನರ್ವಸತಿ ಯೋಜನೆಯಡಿ ದೇವದಾಸಿ
ಮಹಿಳೆಯರಿಗೆ ನೀಡಲಾಗುವ ವಿವಿಧ ಸೌಲಭ್ಯಗಳ ಕುರಿತು ಮಾತನಾಡಿದರು.  ಕುಷ್ಟಗಿ ಪಿಎಸ್‌ಐ
ರಮೇಶ್ ಕಾರ್ಯಕ್ರಮ ಕುರಿತು ಮಾತನಾಡಿದರು.
ವಕೀಲರಾದ ಎನ್.ಪಿ. ಸುದ್ದಿ ಅವರು  ಮಹಿಳಾ
ಕಾನೂನು ಹಾಗೂ ದೇವದಾಸಿ ಸಮರ್ಪಣಾ ನಿಷೇದ ಕಾಯ್ದೆ ಕುರಿತು, ವಕೀಲರಾದ ಎಸ್.ಎಸ್.
ಪಾಟೀಲ್ ಅವರು ಹಿರಿಯ ನಾಗರಿಕರ ರಕ್ಷಣೆಗೆ ಸಂಬಂಧಿಸಿದ ಕಾನೂನು ಕುರಿತು ಉಪನ್ಯಾಸ
ನೀಡಿದರು. 

ದು
ಮಹಿಳೆಯರು ಪುರುಷರಿಗಿಂತ ತಾವು ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂದು ಸಾಬೀತು
ಮಾಡಿದ್ದಾರೆ.  ಲಿಂಗ ತಾರತಮ್ಯವನ್ನು ತೊಡೆದುಹಾಕಲು ಪ್ರತಿಯೊಂದು ಕುಟುಂಬದವರು ತಮ್ಮ
ತಮ್ಮ ಮನೆಗಳಲ್ಲಿ ಗಂಡು ಹೆಣ್ಣು ಎಂಬ ಬೇಧ ಭಾವ ಮಾಡದೇ ಮಹಿಳಯನ್ನು ಪುರುಷನಿಗೆ
ಸಮಾನವೆಂದು ಭಾವಿಸಬೇಕಿದೆ.   ಅಲ್ಲದೇ ಪ್ರತಿಯೊಬ್ಬರೂ ಸಹ ಹಿರಿಯ ನಾಗರಿಕರನ್ನು
ಕಡೇಗಣಿಸದೇ ಗೌರವದಿಂದ ಕಾಣಬೇಕು ಎಂದರು.

Please follow and like us:
error