You are here
Home > Koppal News > ವಿದೇಶದಲ್ಲಿನ ಭಾರತೀಯರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಕಾಳಜಿ ಇದೆ – ಕೇಂದ್ರ ಸ್ಪಷ್ಟನೆ

ವಿದೇಶದಲ್ಲಿನ ಭಾರತೀಯರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಕಾಳಜಿ ಇದೆ – ಕೇಂದ್ರ ಸ್ಪಷ್ಟನೆ

ವಿದೇಶಗಳಲ್ಲಿರುವ ಭಾರತೀಯರ ರಕ್ಷಣೆ ಹಾಗೂ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಕಾಳಜಿ ಇದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಪ್ರಿನೀತ್ ಕೌರ್ ಅವರು ಕೊಪ್ಪಳ ಸಂಸದ ಶಿವರಾಮಗೌಡ ಅವರ ಗಮನ ಸೆಳೆಯುವ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.
     ದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭೆ ಅಧಿವೇಶನದಲ್ಲಿ ಕೊಪ್ಪಳ ಸಂಸದ ಶಿವರಾಮಗೌಡ ಅವರು ಭಾರತೀಯ ಮೂಲಕ ದಂತವೈದ್ಯೆ ಸವಿತಾ ಹಾಲಪ್ಪನವರ್ ಅವರು ಐರ್‍ಲೆಂಡಿನಲ್ಲಿ ದುರಂತ ಸಾವಿನ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಪ್ರಿನೀತ್ ಕೌರ್ ಅವರು, ಐರ್‍ಲೆಂಡ್ ಹಾಗೂ ಭಾರತ ಸೇರಿದಂತೆ ಉಭಯ ದೇಶಗಳ ನಡುವೆ ಆರೋಗ್ಯ ರಕ್ಷಣೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಒಪ್ಪಂದಗಳು ನಡೆದಿಲ್ಲ.  ಆದಾಗ್ಯೂ ಸವಿತಾ ಹಾಲಪ್ಪನವರ್ ಅವರ ದುರಂತ ಸಾವಿನ ಬಗ್ಗೆ ಸಮರ್ಪಕ ತನಿಖೆ ನಡೆಸಿ, ಮಾಹಿತಿಯನ್ನು ಆಗಿಂದಾಗ್ಗೆ ಭಾರತ ಸರ್ಕಾರಕ್ಕೆ ಸಲ್ಲಿಸುವಂತೆ ಮನವಿ ಮಾಡಲಾಗಿದೆ.  ಅಲ್ಲದೆ ಮೃತರ ಕುಟುಂಬಕ್ಕೂ ಸರ್ಕಾರದಿಂದ ಸಹಕಾರ ನೀಡಲಾಗುತ್ತಿದೆ.  ವಿದೇಶಗಳಲ್ಲಿರುವ ಭಾರತೀಯರ ರಕ್ಷಣೆ ಹಾಗೂ ಸುರಕ್ಷತೆಗೆ ಭಾರತ ಸರ್ಕಾರ ಪ್ರಥಮಾದ್ಯತೆ ನೀಡುತ್ತದೆ ಎಂದು ಸಂಸದರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ದೇಶದಲ್ಲಿ ಶೇ. ೧೮. ೮ ರಷ್ಟು ಜನ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ : ಕೇಂದ್ರ ಸರ್ಕಾರದ ಉತ್ತರ
 ದೇಶದ ಜನಸಂಖ್ಯೆಯಲ್ಲಿ ಶೇ. ೧೮. ೮ ರಷ್ಟು ಜನ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಡಾ. ಶಶಿ ತರೂರ್ ಅವರು ಕೊಪ್ಪಳ ಸಂಸದ ಶಿವರಾಮಗೌಡ ಅವರ ಗಮನ ಸೆಳೆಯುವ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.
     ದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭೆ ಅಧಿವೇಶನದಲ್ಲಿ ಕೊಪ್ಪಳ ಸಂಸದ ಶಿವರಾಮಗೌಡ ಅವರು ದೇಶದ ಉನ್ನತ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹಾಗೂ ಇದಕ್ಕಾಗಿ ನೀಡಲಾಗುತ್ತಿರುವ ಅನುದಾನದ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಡಾ. ಶಶಿ ತರೂರ್ ಅವರು, ದೇಶದ ಉನ್ನತ ಶಿಕ್ಷಣ ಕ್ಷೇತ್ರದ ಮೂಲ ದಾಖಲು ಪ್ರಮಾಣದ ಬಗ್ಗೆ ದೇಶಾದ್ಯಂತ ಕೈಗೊಂಡಿರುವ ಸಮೀಕ್ಷಾ ವರದಿಯನುಸಾರ ೨೦೦೮-೦೯ ರಲ್ಲಿ ಶೇ. ೧೩. ೭ ರಷ್ಟಿದ್ದರೆ, ೨೦೦೯-೧೦ ರಲ್ಲಿ ಶೇ. ೧೫, ೨೦೧೦-೧೧ ರ ತಾತ್ಕಾಲಿಕ ವರದಿಯನ್ವಯ ೧೮ ರಿಂದ ೨೩ ವರ್ಷದೊಳಗಿನವರಲ್ಲಿ ಶೇ. ೧೮. ೮ ರಷ್ಟು ಮಾತ್ರ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿದ್ದಾರೆ.   ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ೨೦೦೯-೧೦ ರಲ್ಲಿ ೭೭೯೪. ೫೮ ಕೋಟಿ ರೂ., ೨೦೧೦-೧೧ ರಲ್ಲಿ ೯೩೫೬. ೭೭ ಕೋಟಿ, ೨೦೧೧-೧೨ ರಲ್ಲಿ ೧೨೬೧೧. ೯೮ ಕೋಟಿ ರೂ. ವೆಚ್ಚ ಮಾಡಿದೆ ಎಂದು ಸಂಸದರ ಪ್ರಶ್ನೆಗೆ ಉತ್ತರ ನೀಡಿದ್ದಾರೆ .

Leave a Reply

Top