ಕನ್ನಡ ಜಾನಪದ ಪರಿಷತ್ ಜಿಲ್ಲಾ ಮಟ್ಟದ ಸಭೆ

ಕೊಪ್ಪಳ, ಮಾ. ೩೧. ಕೊಪ್ಪಳ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಮಟ್ಟದ ಸಭೆಯನ್ನು ರವಿವಾರ ನಗರದ ಪ್ರವಾಸಿ ಮಂದಿರ (ಐಬಿ) ಯಲ್ಲಿ ಕರೆಯಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಜಿಲ್ಲಾ ಘಟಕದ ರಚನೆ ಮಾಡಿ, ಜಿಲ್ಲೆಯ ಜಾನಪದ ಕಲೆಗಳ ದಾಖಲೀಕರಣ, ಕ್ಷೇತ್ರಕಾರ್ಯ, ತರಬೇತಿ, ಸ್ಪರ್ಧೆಗಳ ಮೂಲಕ ಜಾನಪದ ಕಲೆಗಳ ಸಂರಕ್ಷಣೆ ಮಾಡುವ ಕಾರ್ಯವನ್ನು ಕಜಾಪ ಮಾಡಲಿದೆ. ಜಿಲ್ಲೆ, ತಾಲೂಕ, ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಘಟಕಗಳನ್ನು ರಚಿಸಿ ಸಂಘಟನೆ ಮಾಡಬೇಕಿದ್ದು ಆಸಕ್ತರು ರವಿವಾರ ದಿನಾಂಕ ೩-೪-೨೦೧೬ ರಂದು ಬೆಳಿಗ್ಗೆ ೧೧ ಗಂಟೆಗೆ ಆಗಮಿಸಿ ಸಲಹೆ ಸೂಚನೆ ನೀಡುವದರ ಜೊತೆಗೆ ಸಂಘಟನೆಯ ಜವಾಬ್ದಾರಿ ಪಡೆದುಕೊಳ್ಳುವಂತೆ ಮಂಜುನಾಥ ಜಿ. ಗೊಂಡಬಾಳ (ಮೊ ೯೪೪೮೩೦೦೦೭೦) ರನ್ನು ತಿಳಿಸಿದ್ದಾರೆ. 

Related posts

Leave a Comment