ಮುದ್ದಾಬಳ್ಳಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ ಆಚರಣೆ

ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.
ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಹತ್ತಿಕಟಗಿಯವರು ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಚನ್ನಬಸನಗೌಡ ಅಲಿಪೂರ, ಕೆ.ಆರ್. ಹನುಮಂತಪ್ಪ, ರಾಮಣ್ಣ.ವಿ, ಮಲ್ಲಪ್ಪ ಕುಕನೂರ, ನಾಗರತ್ನ ಕಾರಟಗಿ, ಮತ್ತಿತರರು ಉಪಸ್ಥಿತರಿದ್ದರು. ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಪ್ರಯುಕ್ತ ಪರಿಶಿಷ್ಟಜಾತಿ/ಪರಿಶಿಷ್ಠ ಪಂಗಡದ ವಿಧ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಹತ್ತಿಕಟಗಿ ನೋಟಬುಕ್‌ಗಳನ್ನು ವಿತರಿಸಿದರು.

ಶಿಕ್ಷಕಿ ಕವಿತಾ ಕಟ್ಟಮನಿ ಸ್ವಾಗತಿಸಿದರು, ರೇಖಾ ಕುಲಕರ್ಣಿ ನಿರೂಪಿಸಿದರು. ಕೊನೆಯಲ್ಲಿ ಶೋಭಾ ಜಿ. ವಂದಿಸಿದರು.

Leave a Reply