ಅದ್ಯಕ್ಷರಾಗಿ ಮಹೇಶಪ್ಪ ಹಳ್ಳಿ, ಉಪಾದ್ಯಕ್ಷರಾಗಿ ದೇವೇಂದ್ರಗೌಡ ಆಯ್ಕೆ

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಚುನಾವಣೆ  
ಯಲಬುರ್ಗಾ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಚುನಾವಣೆ ನಡೆಯಿತು.  ಜಿಲ್ಲಾ ವಿಕ್ಷಕರಾದ ಬಿಎ ಕೇಸರಿಮಠ, ಅವರ ಸಮ್ಮುಖದಲ್ಲಿ ಶುಕ್ರವಾರ ಅದ್ಯಕ್ಷರಾಗಿ ಮಹೇಶಪ್ಪ ಹಳ್ಳಿ, ಉಪಾದ್ಯಕ್ಷರಾಗಿ ದೇವೇಂದ್ರಗೌಡ ಪೋಲಿಸಪಾಟೀಲ್ ಅರಿಕೇರಿ ಅವಿರೋಧವಾಗಿ ಆಯ್ಕೆಯಾದರು. 
            ಅದ್ಯಕ್ಷ ಮಹೇಶಪ್ಪ ಹಳ್ಳಿ  ಮಾತನಾಡಿ, ಶಾಸಕ ಬಸವರಾಜ ರಾಯರೆಡ್ಡಿಯವರ ಸಹಕಾರ ಹಾಗೂ ಬೆಂಬಲಿತ ಸದಸ್ಯರ ಸಹಕಾರದಿಂದ ಅಧ್ಯಕ್ಷ ಸ್ಥಾನ ದೊರೆತಿದ್ದು ಬ್ಯಾಂಕ್‌ನ ಸರ್ವೋತೊಮುಖ ಅಭಿವೃದ್ದಿಗೆ, ಹಾಗೂ ಖಾತೆಹೊಂದಿರುವ ಎಲ್ಲಾ ರೈತರಿಗೆ ಅವಶ್ಯಕತೆ ತಕ್ಕಂತೆ ಸರ್ಕಾರದ ಯೋಜನೆ ಅಡಿಯಲ್ಲಿ ಸಾಲಸೌಲಭ್ಯ ಕಲ್ಪಿಸಲಾಗುವದು. ರೈತರ ಇನ್ನಿತರ ಯೋಜನೆಗಳ ರೂಪಿಸಲು ನಿರ್ದೇಶಕರ ಸಮಕ್ಷಮ ಎಲ್ಲಾ ಸದಸ್ಯರ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವದು. ಈ ಹಿಂದೆ ಬ್ಯಾಂಕ್ ಸಂಪೂರ್ಣ ನಷ್ಟದಲ್ಲಿದ್ದು ಬ್ಯಾಂಕ್ ಅಭಿವೃದ್ದಿಪಡಿಸಲು ಪ್ರಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯವಶ್ಯಕ ಎಂದರು. 
          ಈ ಸಂದರ್ಬದಲ್ಲಿ ಜಿಪಂ ಸದಸ್ಯರಾದ ಅಶೋಕ ತೋಟದ, ಕಾಂಗ್ರೇಸ್ ಮುಖಂಡರಾದ ವೀರನಗೌಡ ಬಳೂಟಗಿ, ಮೌಲಾಹುಸೇನ ಬುಲ್ಡಿಯಾರ, ಕೆರಬಸಪ್ಪ ನಿಡಗುಂದಿ, ಕಳಕಪ್ಪ ಕಂಬಳಿ, ಕೆಪಿಸಿಸಿ ಸದಸ್ಯ ಬಸವರಾಜ ಉಳ್ಳಾಗಡ್ಡಿ, ಶರಣಪ್ಪ ಅರಿಕೇರಿ, ಮಲ್ಲೇಶಗೌಡ ಪಾಟೀಲ, ಬಸವರಾಜ ಕುಡಗುಂಟಿ,ವಸಂತ ಕುಲಕರ್ಣಿ  ಸೇರಿದಂತೆ ಮತ್ತಿತರರಿದ್ದರು.
Please follow and like us:
error