ಬಕ್ರಿದ್ ಹಬ್ಬ ಮುಸ್ಲಿಂ ಬಾಂಧವರಿಗೆ ಸಚಿವ ಶಿವರಾಜ್ ತಂಗಡಗಿಯವರ ಶುಭಾಷಯ.

ಕೊಪ್ಪಳ ಸೆ. ೨೪ (ಕ ವಾ) ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬದ ಸುಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ನಾಡಿನ ಎಲ್ಲ ಜನತೆಗೆ ವಿಶೇಷವಾಗಿ ಎಲ್ಲ ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದ್ದಾರೆ.
     ಎಲ್ಲವೂ ತನಗೇ ಬೇಕು ಎಂಬ ಮಾನವ ಸಹಜ ದೌರ್ಬಲ್ಯ ಹಾಗೂ ಸ್ವಾರ್ಥವನ್ನು ದೂರ ಮಾಡಲು ಪ್ರೇರಣೆ ನೀಡುವ ಬಕ್ರೀದ್ ಹಬ್ಬವು ಇಸ್ಲಾಂ ಧರ್ಮದ ವಿಶೇಷ ಆಚರಣೆಗಳಲ್ಲೊಂದಾಗಿದೆ.  ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವು ಭಾವೈಕ್ಯತೆಯ ಬೆಸೆಯಲು ಒಂದು ಸುಸಂದರ್ಭವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.

Leave a Reply