ಉಮ್ರಾ ಪ್ರಯಾಣ ಬೆಳೆಸಿದ ಡಾ.ಮುಲ್ಲಾ ಕುಟುಂಬ ವರ್ಗ.

ಕೊಪ್ಪಳ,ಮಾ,೦೬ ಮುಸ್ಲಿಂ ಸಮಾಜದ ಪವಿತ್ರಸ್ಥಳವಾದ ಮೆಕ್ಕಾ ಮದೀನಾಗಳ ದರ್ಶನಕ್ಕಾಗಿ ಉಮ್ರಾ ಪ್ರಯಾಣವನ್ನು ಕೊಪ್ಪಳದ ಹಿರಿಯ ವೈದ್ಯ ನಿವೃತ್ತ ಡಿಹೆಚ್‌ಓ ಡಾ.ಟಿ.ಹೆಚ್.ರವರ ಕುಟುಂಬವರ್ಗವರು ಪ್ರಯಾಣವನ್ನು ಬೆಳಿಸಿದ್ದಾರೆ.
  ಈ ಉಮ್ರಾ ಪ್ರಯಾಣದಲ್ಲಿ ಡಾ.ಟಿ.ಹೆಚ್.ಮುಲ್ಲಾ ರವರೊಂದಿಗೆ ಅವರ ಧರ್ಮಪತ್ನಿ ಸೇರಿದಂತೆ ಮಗ ಸಹೇಲ್ ಮುಲ್ಲಾ ಮತ್ತು ಸೊಸೆ ಅಲ್ಲದೆ ಅವರ ಅಳಿಯ ಡಾ.ಶಫೀ ಉಲ್ಲಾ ಮುಲ್ಲಾ ಮತ್ತು ಅವರ ಶ್ರಿಮತಿ ಅಂದರೆ ಡಾ.ಟಿ.ಹೆಚ್.ಮುಲ್ಲಾಎವರ ಮಗಳು ಒಟ್ಟು ೬ಜನ ಅವರ ಕುಟುಂಬವರ್ಗದವರು ಕೊಪ್ಪಳದಿಂದ ಉಮ್ರಾ ಪ್ರಯಾಣ ಬೆಳೆಸಿದ್ದಾರೆ.
  ಅವರು ಕೊಪ್ಪಳದಿಂದ ವಿಜಯಪುರ ಮಾರ್ಗವಾಗಿ ಮುಂಬೈಗೆ ತೆರಳಿ ಅಲ್ಲಿಂದ ವಿಮಾನ ಮೂಲಕ ಸೌದಿ ಅರೇಬಿಯಾದ ಪವಿತ್ರ ಮೆಕ್ಕಾ ಮದೀನಾ ಸ್ಥಳಗಳ ದರ್ಶನಕ್ಕಾಗಿ ತೆರಳಿದ ಸಂದರ್ಭದಲ್ಲಿ ಕೊಪ್ಪಳದಲ್ಲಿ ಅವರ ಸಂಬಂಧಿಕರು, ಸ್ನೇಹಿತರ ಬಳಗದವರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು. 

Please follow and like us:
error