ಪರಿಶಿಷ್ಟ ರೈತರಿಗೆ ತೋಟಗಾರಿಕೆ ಇಲಾಖೆ ಸೌಲಭ್ಯಗಳ ಮಾಹಿತಿ ಕಾರ್ಯಗಾರ.

ಕೊಪ್ಪಳ ಜ. ೦೭ (ಕ ವಾ) ತೋಟಗಾರಿಕೆ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ರೈತರಿಗೆ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಒಂದು ದಿನದ ಕಾರ್ಯಗಾರವನ್ನು ನಗರದ ಪಾರ್ಥ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಯಿತು.
      ತೋಟಗಾರಿಕೆ ಅಪರ ನಿರ್ದೇಶಕ ಹಾಗೂ ಕೊಪ್ಪಳ ಜಿಲ್ಲಾ ನೋಡಲ್ ಅದಿsಕಾರಿ ಡಾ||ಪಿ.ಎಮ್. ಸೊಬರದ ರವರು ಜಿಲ್ಲೆಗೆ ಭೇಟಿ ನೀಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಪಾರ್ಥ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗಾಗಿಯೇ ಇಲಾಖೆಯಲ್ಲಿ ಅನೇಕ ಸೌಲಭ್ಯಗಳಿವೆ ಮತ್ತು ಹೆಚ್ಚಿನ ಅನುದಾನವಿದೆ ಉದಾಹರಣೆಗೆ ಹನಿ ನೀರಾವರಿ, ಯಾಂತ್ರಿಕರಣ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ನಿಖರ ಬೇಸಾಯ ಮುಂತಾದವುಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಬಿsವೃದ್ಧಿ ಹೊಂದಬೇಕೆಂದು ರೈತರಿಗೆ ಕರೆ ನೀಡಿದರು.
    ತೋಟಗಾರಿಕೆ ಉಪ ನಿರ್ದೇಶಕ ಶಶಿಕಾಂತ  ಕೋಟಿಮನಿ ಅವರು, ಇಲಾಖೆಯಲ್ಲಿ ಲಭ್ಯವಿರುವ ಹನಿ ನೀರಾವರಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ನಿಖರ ಬೇಸಾಯ, ಯಾಂತ್ರೀಕರಣ ಮತ್ತು ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಗಿಡನೆಡುವ ಕಾರ್ಯಕ್ರಮ ಮುಂತಾದ ಅನೇಕ ಯೋಜನೆಗಳ ಸಮಗ್ರ ಮಾಹಿತಿ ನೀಡಿದರು.  ಉದ್ಯೋಗಖಾತ್ರಿ ಯೋಜನೆಯಡಿ ಮಾನವ ದಿನಗಳನ್ನು ಸೃಜಿಸಿಕೊಂಡು,  ತೆಂಗು, ಮಾವು, ಸೀಬೆ ಮುಂತಾದ ತೋಟಗಾರಿಕೆ ಬಹುವಾರ್ಷಿಕ ಬೆಳೆಗಳನ್ನು ಬೆಳೆಯಬಹುದಾಗಿದೆ. ಆಯಾ ಬೆಳೆಗೆ ತಗಲುವ ಮಾನವ  ದಿನಗಳನ್ನು ಪರಿಗಣಿಸಿ ನೇರವಾಗಿ ರೈತರ ಉಳಿತಾಯ ಖಾತೆಗೆ ಹಣ ಸಂದಾಯ ಮಾಡಲಾಗುವುದು.  ರೈತರು ಸರಕಾರಿ ತೋಟಗಾರಿಕೆ ಸಸ್ಯಗಾರಗಳಲ್ಲಿ ಅಥವಾ ಇಲಾಖೆಯಿಂದ ಅನುಮೋದಿಸಿದ ಸಸ್ಯಗಾರಗಳಲ್ಲಿ ತಮಗೆ ಬೇಕಾದ ಸಸಿಗಳನ್ನು ಖರೀದಿಸಿ ಬಿಲ್ಲು, ಗುರುತಿನ ಚೀಟಿ ಮುಂತಾದ ಅಗತ್ಯ ದಾಖಲೆಗಳನ್ನು ನೀಡಿ ಯೋಜನೆಯ ಲಾಭವನ್ನು   ಪಡೆದುಕೊಳ್ಳಬಹುದಾಗಿದೆ. ಸೂಕ್ಷ್ಮ ಹನಿ ನೀರಾವರಿ ಯೋಜನೆ ಅಡಿ ಸಾಕಷ್ಟು ಹಣ (ವಂತಿಗೆ) ಲಭ್ಯವಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಸೂಕ್ಷ್ಮ ಹನಿ ನೀರಾವರಿಯನ್ನು ಅಳವಡಿಸಿಕೊಂಡು ನೀರಿನ ಮಿತವ್ಯಯ ಮಾಡಿ ತಮಗೆ ಬೇಕಾದ ತೋಟಗಾರಿಕೆ ಬೆಳೆಗಳನ್ನು ಬೆಳೆದುಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು.  ಹಸಿರು ಮನೆ ತಾಂತ್ರಿಕತೆ, ಖಾಸಗಿ ಅಥವಾ ಸಮುದಾಯ ಕೆರೆಗಳನ್ನು ನಿರ್ಮಿಸಿಕೊಳ್ಳಲು ಮತ್ತು ಸಸ್ಯಗಾರ ನಿರ್ಮಿಸಿಕೊಳ್ಳಲು ಅನೇಕ ಯೋಜನೆಗಳಿದ್ದು ರೈತರು ಇವುಗಳ ಲಾಭ ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.
 ತೋಟಗಾರಿಕೆ ಹಾರ್ಟಿ ಕ್ಲಿನಿಕ್‌ನ ವಾಮನಮೂರ್ತಿ ಸ್ವಾಗತಿಸಿದರು ಮತ್ತು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಜೀರ್ ಅಹ್ಮದ್ ಸೋಂಪೂರ ವಂದಿಸಿದರು.  ೨೦೦ ಕ್ಕೂ ಹೆಚ್ಚು ರೈತರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.

Please follow and like us:
error