ಕಲಿಕೆ ಹಾಗೂ ಬೋಧನೆಯ ಸದೃಡತೆಗೆ ಸಮಾಲೋಚನಾ ಸಭೆಯ ಅವಶ್ಯವಿದೆ:ವಿಜಯಲಕ್ಷ್ಮೀ

ಕೊಪ್ಪಳ: ಕಲಿಕೆ ಮತ್ತು ಬೋಧನೆಗಳ ಸದೃಡತೆಗೆ ಸಮಾಲೋನಾ ಸಭೆಗಳ ಅವಶ್ಯವಿದೆ ಎಂದು ಕೊಪ್ಪಳ ಪೂರ್ವ ಕ್ಲಸ್ಟರಿನ ಸಿ.ಆರ್.ಪಿ.ಗಳಾದ ವಿಜಯಲಕ್ಷ್ಮೀ ಜಗಳೂರು ಹೇಳಿದರು.
 ನಗರದ ದೇವರಾಜ ಅರಸ್ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರರ್ ಮಟ್ಟದ ಶಿಕ್ಷಕರ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ,ಶಿಕ್ಷಕರು ಪ್ರತಿ ದಿನ ತಮ್ಮ ತರಗತಿ ಬೋಧನೆಯ ಸಮಯದಲ್ಲಿ ಪಾಠಗಳಿಗೆ ಸಂಬಂಧಿಸಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಇಂತಹ ಸಮಸ್ಯೆಗಳನ್ನು ಕೇವಲ ಒಬ್ಬ ಶಿಕ್ಷಕರಿಂದ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ.ಅದನ್ನು ಇಂತಹ ಶಿಕ್ಷಕರ ಸಮಾಲೋಚನೆಯ ಸಭೆಗಳನ್ನು ಹಮ್ಮಿಕೊಳ್ಳುವುದರಿಂದ ಬೋಧನಾ ಪ್ರಕ್ರೀಯೆಯಲ್ಲಿ ಬರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಯಲ್ಲಿ ಅನೇಕ ಬೇರೆ ಬೇರೆ ಶಿಕ್ಷಕರಲ್ಲಿ ಇರುವ ಅನೇಕ ವಿಚಾರ,ಮಾಹಿತಿ ಹಾಗೂ ಹೊಸ ಚಿಂತನೆಗಳನ್ನು ಎಲ್ಲಾ ಶಿಕ್ಷಕರ ಜೊತೆಯಲ್ಲಿ ಹಂಚಿಕೊಳ್ಳುವುದರಿಂದ ಶಿಕ್ಷಕರಿಗೆ ಮಾಹಿತಿಗಳ ವಿನಿಯೋಗವಾಗಿ ಕಲಿಕೆಯು ಸದೃಡವಾಗಿತ್ತದೆ ಎಂದು ಹೇಳಿದರು.
    ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತ,ಸರ್ಕಾರವು ಇಂದು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಅನೇಕ ರೀತಿಯ ಹೊಸ ಹೊಸ ಯೋಜನೆಗಳು ಜಾರಿಗೆ ತರುತ್ತಿರುವುದು ಸಂತೋಷದ ಸಂಗತಿಯಾಗಿದೆ.ಆದರೆ ಶಿಕ್ಷಕರಿಗೆ ಪಾಠ ಬೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದರೆ ಅವರ ಮೇಲೆ ಯಾವುದೇ ರೀತಿಯಲ್ಲಿ ಒತ್ತಡವನ್ನು ಹೇರಬಾರದು.ಸಂಪೂರ್ಣ ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು ಅಂದಾಗ ಮಾತ್ರ ನಾವು ನಾವೂ ಹಾಕಿಕೊಂಡಿರುವ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಲಕ್ಷ್ಮಪ್ಪ ಪಲ್ಲೇದ ಮಾತನಾಡಿ,ಸರ್ಕಾರವು ಜಾರಿಗೆ ತಂದ ಅನೇಕ ಯೋಜನೆಗಳು ಯಶಸ್ವಿಯಾಗಬೇಕಾದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯವಾಗುತ್ತದೆ.ಪ್ರತಿಯೊಬ್ಬ ಶಿಕ್ಷಕರು ತಮ್ಮ ವೃತ್ತಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಪ್ರಕಾಶ ಕೊರ್ತಿ ನಿರೂಪಿಸಿದರು.
Please follow and like us:
error