ಯುವ ಶಾಸಕರ ಕಾರ್ಯಸಾಧನೆಗಳನ್ನು ಪ್ರಶ್ನಿಸುವವರಿಗೆ ಕ್ಷೇತ್ರದ ಮತದಾರರಿಂದ ಉತ್ತರ-ಕೆ.ಬಸವರಾಜ ಹಿಟ್ನಾಳ.

ಕೊಪ್ಪಳ- ೨೪, ನಗರದ ಸ್ಟಾರ್ ಚಿತ್ರಮಂದಿರದಲ್ಲಿ ನೂತನವಾಗಿ ಜಿ.ಪಂ.ಹಾಗೂ ತಾ.ಪಂ. ಸದಸ್ಯರುಗಳಾದ ಎಸ್.ಬಿ.ನಾಗರಳ್ಳಿ, ಗೌಸ್ ಮುನಿರಾಬಾದ್, ಚಾಂದಪಾಷಾ ಕಿಲ್ಲೇದಾರ, ಬಾಲಚಂದ್ರ ಇವರಗಳನ್ನು ಮುಸ್ಲಿಂ ಸಮಾಜದಿಂದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳರವರು ೩೦ ತಿಂಗಳ ಅವಧಿಯಲ್ಲಿ ಕೊಪ್ಪಳದ ಯುವ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡ ಸಾಧನೆಗಳನ್ನು ಮೆಚ್ಚಿಕೊಂಡಿರುವ ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷವನ್ನು ಹಾಗೂ ಶಾಸಕರ ಕೈಯನ್ನು ಬಲಪಡಿಸಿದ್ದಾರೆ. ಕಟ್ಟೆ ಮೇಲೆ ಕುಳಿತು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ಸಾಧನೆಗಳನ್ನು ಪ್ರಶ್ನಿಸುವವರಿಗೆ ಕ್ಷೇತ್ರದ ಜನತೆ ಸರಿಯಾದ ಉತ್ತರನೀಡಿದ್ದಾರೆ. ತಮ್ಮ ಸಾಧನೆಗಳನ್ನು ಬಿ.ಜೆ.ಪಿ.ನಾಯಕರು ಅವಲೋಕನ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಕೊಡುಗೆ ಹಾಗೂ ಕಾಂಗ್ರೆಸ್ ಶಾಸಕರ ಕೊಡುಗೆಗಳ ವ್ಯತ್ಯಾಸಗಳು ಏನೆಂದು ಉಹಿಸಲಿ ಎಂದು ಹೇಳಿದರು.
Please follow and like us:
error