ಪೌರತ್ವ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ

ಕೊಪ್ಪಳ : ಕೊಳೂರು ಗ್ರಾಮದಲ್ಲಿ ನಡೆದ ಆರ್.ಜಿ.ಆರ್.ಇ.ಎಮ್.ಟ್ರಸ್ಟ್ (ರಿ) ಕೊಪ್ಪಳ ರಾಜೀವಗಾಂಧಿ ರೂರಲ್ ಕಾಲೇಜ್ ಆಫ್ ಎಜ್ಯೂಕೇಷನ್ (ಬಿ.ಈಡಿ) ವತಿಯಿಂದ ನಡೆದ ಪೌರತ್ವ ತರಬೇತಿ ಶಿಬಿರದ ಉದ್ಘಾಟನೆಯನ್ನು ಮಾಡಿದ ಕೊಪ್ಪಳದ ಸಂಸದರಾದ ಸಂಗಣ್ಣ ಕರಡಿಯವರು ಇಂತಹ ಶಿಬಿರವನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ  ಗುಣಗಳು  ಬೆಳೆದು ಉತ್ತಮ ರಾಷ್ಟ್ರದ ಬೆಳವಣಿಗೆ ಕಾರಣರಾಗುತ್ತಾರೆ. ಅಲ್ಲದೇ ಸಹಭಾಗಿತ್ವದ ಗುಣಗಳನ್ನು ಬೆಳೆದು ಉತ್ತಮ ಸಂಸ್ಕಾರವಂತರಾಗುತ್ತಾರೆ. ಎಂಬ ಉದ್ಘಾಟನಾ ನುಡಿಗಳನ್ನು ನುಡಿದರು.  ಪ್ರಾಚಾರ್ಯರಾದ ವಿನೋದ ಹೂಲಿ ಯವರು ಪೌರತ್ವ ತರಬೇತಿ ಶಿಬಿರದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಆರ್.ಜಿ.ಆರ್.ಇ.ಎಮ್.ಟ್ರಸ್ಟ್‌ನ ಅಧ್ಯಕ್ಷರಾದ ಕರಿಯಣ್ಣ ಸಂಗಟಿ ಯವರು ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಉದ್ಘಾಟನಾ ಸಮಾರಂಭದ ನಂತರ ಮಾನ್ಯ ಸಂಸದರಾದ ಸಂಗಣ್ಣ ಕರಡಿ ಸಸಿ ನಡೆಸುವುದರ ಮೂಲಕ ವನಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ಈ ಕಾರ್ಯಕ್ರಮದಲ್ಲಿ ಕೂಳೂರು ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು, ಅಧ್ಯಕ್ಷರು, ಗ್ರಾಮದ ಗುರು ಹಿರಿಯರು ಯುವಕರು ಭಾಗವಹಿಸಿದ್ದರು. 
ಅಲ್ಲದೇ ರಾಜೀವಗಾಂದಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರರು, ಉಪನ್ಯಾಸಕರು, ಎಲ್ಲಾ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 
ಈ ಕಾರ್ಯಕ್ರಮದಲ್ಲಿ ಜಯಶ್ರೀ ಕರಡಿ ಪ್ರಾರ್ಥಿಸಿದರು ಕುಮಾರ ಪರಮೇಶ ಚಿಂತಾಮಣಿ ಸ್ವಾಗತಿಸದರು ಕು. ಚಂದ್ರಶೇಖರ ಹಡಪದ ಪುಷ್ಪಾರ್ಪಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಉಪನ್ಯಾಸಕರಾದ ಮಹೇಶ ಪೂಜಾರ ವಂಧಿಸಿದರು. ಕು.ಫಕೀರೇಶ ಲಕ್ಕುಂಡಿ ಕಾರ್ಯಕ್ರಮವನ್ನು ನಿರೂಪಿಸಿದರು. 

Related posts

Leave a Comment