fbpx

ಜಿ.ಪಿ. ಮಾರುಕಟ್ಟೆಯಲ್ಲಿ ನಗರಸಭೆಯ ೧೭ ವಾಣಿಜ್ಯ ಮಳಿಗೆಗಳನ್ನು ಕಟ್ಟಿಸಲು ಮನವಿ

ಕೊಪ್ಪಳ: ನಗರದ ಜೆ.ಪಿ ಮಾರುಕಟ್ಟೆಯಲ್ಲಿ ಇರುವ ೧೭ ನಗರಸಭೆ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಕಳೆದ ೩೮ ವರ್ಷಗಳಿಂದ ನಗರಸಭೆ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತ ಬಂದಿದ್ದು. ಇದರಲ್ಲಿ ೧೭ ಮಳಿಗೆಗಳು ತುಂಬಾ ಹಳೆಯದಾಗಿದ್ದು ದಿನಾಂಕ ೦೬-೦೪-೨೦೧೩ ರಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತೆರವುಗೊಳಿಸಿದ್ದಾರೆ. ಸದರಿ ಸ್ಥಳದಲ್ಲಿ ಒಂದು ವರ್ಷದೊಳಗೆ ಮುಂಚೆ ಇದ್ದ ಬಾಡಿಗೆದಾರರ ಹೆಸರಿಗೆ ಹೊಸ ಮಳಿಗೆ ನಿರ್ಮಿಸಿಕೊಡುವುದಾಗಿ ಪೌರಾಯುಕ್ತರು ಹಾಗೂ ಕಾರ್ಯಪಾಲಕರು ಮೌಖಿಕವಾಗಿ ತಿಳಿಸಿದ್ದರು. ಅದಾದ ನಂತರ ನಾವು ಮಳಿಗೆಗಳನನು ಖಾಲಿ ಮಾಡಿ ತೆರವುಗೊಳಿಸುವಕಾರ್ಯಕ್ಕೆ ಅನುವು ಮಾಡಿಕೊಟ್ಟಿದ್ದೇವೆ, 
ಆದರೆ ೨ವರ್ಷಗಳು ಗತಿಸಿದರು ಇಲ್ಲಿಯವರೆಗೂ ಮಳಿಗೆಗಳು ನಿರ್ಮಾಣ ಕಾರ್ಯ ಕೈಗೊಂಡಿರುವುದಿಲ್ಲ. ಇದರಿಂದ ನಮ್ಮ ವ್ಯಾಪರ ಕುಂಟಿತವಾಗಿ ಬೀದಿಪಾಲಾಗಿದ್ದೇವೆ. ಇದು ನ್ಯಾಯವೇ? ಸದ್ಯ ನಮಗೆ ವ್ಯಾಪಾರ ಮಾಡಲು ಪಬ್ಲಿಕ್ ಗ್ರೌಂಡನಲ್ಲಿ ಸ್ಥಳಾವಕಾಶ ಕೊಟ್ಟಿದ್ದು ಅದು ವ್ಯಾಪಾರಕ್ಕೆ ಸೂಕ್ತವಾದ ಸ್ಥಳವಾಗಿಲ್ಲ. ಇದರಿಂದಾಗಿ ನಮಗೆ ದಿನದಿಂದ ದಿನಕ್ಕೆ ವ್ಯಾಪಾರ ಕುಂಟಿತಗೊಂಡಿದೆ. ಇದರಿಂದಾಗಿ ಉಪಜೀವನ ನಡೆಸಲು ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡಿದ್ದೇವೆ. ಸಾಲ ತೀರಿಸಲಾಗದೇ ಊರು ಬಿಡುವ ಪರಸ್ಥಿತಿ ಎದುರಾಗಿದೆ. ಮತ್ತು ಈ ಮುಂಚೆ ಜೆ. ಪಿ. ಮಾರ್ಕೆಟ್ಟಿನಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಬ್ಯಾಂಕ್ ಲೋನ್, ಪೈನಾನ್ಸ್ ಲೋನ್ ಮಾಡಿಕೊಂಡಿದ್ದೇವೆ ಈಗ ಅವುಗಳನ್ನು ಭರಿಸಲು ಕೂಲಿ ಕೆಲಸ ಮತ್ತು ಗೊಂಡಿ ಕೆಲಸ ಮಾಡಿ ನೀಗಿಸುತ್ತಿದ್ದೇವೆ. 
ವಾಸ್ತವ ಸ್ಥಿತಿ ಈರಿತಿಯಿದ್ದು ನಗರಸಭೆಯವರು ಬೇಗನೇ ಎಚ್ಚೇತ್ತುಕೊಂಡು ಕಟ್ಟಡ ಕಾಮಗಾರಿಯನ್ನು ಬೇಗನೇ ಪ್ರಾರಂಭಿಸಬೇಕು. ಮತ್ತು ಸಣ್ಣ ಪುಟ್ಟ ವ್ಯಾಪಾರಗಳನ್ನು ಒಕ್ಕಲೆಬ್ಬಿಸಲಾಗಿದೆ. ಮಾರುಕಟ್ಟೆಯ ಅಭಿವೃದ್ಧಿಗೆ ಕನಸು ಹೊತ್ತಿರುವ ೧೭ ಮಳಿಗೆಗಳ ಬಾಡಿಗೆದಾರರಿಗೆ ಹೊಡೆತ ಬಿದ್ದಿರುತ್ತದೆ.  
ಮತ್ತು  ಜಿ.ಪಿ. ಮಾರುಕಟ್ಟೆಯಲ್ಲಿ ೧೭ ಮಳಿಗೆ ಆಡಿಗೆ ಜಕಾತಿ ಎಲ್ಲಾ ಸೇರಿ ತಿಂಗಳಿಗೆ ೫೦ರಿಂದ ೬೦ ಸಾವಿರ ರೂಪಾಯಿ ನಗರಸಭೆಗೆ ಜಮಾ ಆಗುತ್ತದೆ. ಈಗ ೨ ವರ್ಷಗಳಿಂದ ಜಮಾ ಆಗುತ್ತಿಲ್ಲ ಇದರ ಬಗ್ಗೆ ಗಮನಕೊಟ್ಟು ತಾವುಗಳು ಈ ವಿವರವನ್ನು ತಿಳಿದು ಕಟ್ಟಡ ಕಾಮಗಾರಿಯನ್ನು ಬೇಗನೇ ಪೆರಾರಂಬಿಸಬೇಕು ಇಲ್ಲವಾದರೆ ನಾವುಗಳು ಒಗ್ಗಟ್ಟಿನಿಂದ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿಲಾಗಿದೆ. 
ಈ ಸಂದರ್ಭದಲ್ಲಿ ವೀರಕನ್ನಡಿಗ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರ, ಬಾಬುಸಾಬ್ ಮನಿಯಾರ್, ಜಲಾಸಾಬ್ ಬೆಂಕಿ, ಅಹಮ್ಮದ ಸಾಬ್ ಮಕಾಂದಾರ್, ಸದಾರ ಟೇಲರ್, ಗಣೇಶ ಮುಂಡರಗಿ, ಮೈನುದ್ದೀನ್ ಟೇಲರ್, ನಜೀರ್ ಇನ್ನು ಹಲವರು ಉಪಸ್ಥಿತರಿದ್ದರು. 
Please follow and like us:
error

Leave a Reply

error: Content is protected !!