ಮತ್ತೆ ಆಪರೇಶನ್ ಕಮಲ? : ಶಿವರಾಜ್ ತಂಗಡಗಿಗೆ ಸಚಿವ ಸ್ಥಾನ ?

 ಗೂಳಿಹಟ್ಟಿ-ಈಶ್ವರಪ್ಪ ಮಾತುಕತೆ
ಬೆಂಗಳೂರು, : ಬಳ್ಳಾರಿ ಉಪ ಚುನಾವಣಾ ಫಲಿತಾಂಶದ ನಂತರ ರಾಜಕೀಯ ಲೆಕ್ಕಾಚಾರಗಳು ಬದಲಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ಇದೀಗ ಮತ್ತೆ ಪಕ್ಷೇತರರ ಮನವೊಲಿಕೆಗೆ ಒತ್ತು ನೀಡಿದೆ. ಇದಕ್ಕೆ ಪೂರಕವೆನ್ನುವಂತೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದ ತಮ್ಮ ನಿವಾಸಕ್ಕೆ ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್‌ರನ್ನು ಕರೆಸಿಕೊಂಡು ಮಾತುಕತೆ ನಡೆಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸ ನೀಡಿದೆ.
ಸರಕಾರಕ್ಕೆ ಗಂಡಾಂತರ ಎದುರಾದರೆ ಸದ್ಯಕ್ಕೆ ಪಕ್ಷೇತರರ ನೆರವು ಪಡೆಯಲು ಬಿಜೆಪಿ ಉತ್ಸುಕವಾಗಿದೆ. ಇದಕ್ಕಾಗಿ ಅವರ ಮನವೊಲಿಸುವ ಪ್ರಕ್ರಿಯೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದ್ದಾರೆ. ಶ್ರೀರಾಮುಲು ಹಾಗೂ ಎಚ್.ಡಿ.ಕುಮಾರಸ್ವಾಮಿ ಪರಸ್ಪರ ಕೈಜೋಡಿಸಿರುವ ಹಿನ್ನೆಲೆಯಲ್ಲಿ, ಮತ್ತೆ ಸರಕಾರ ಅಲ್ಪಮತಕ್ಕೆ ಕುಸಿಯಬಹುದೆಂಬ ಭೀತಿ ಬಿಜೆಪಿಯಲ್ಲಿ ಆವರಿಸಿದೆ. ಡಿಸೆಂಬರ್ 4ರಂದು ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ, ಹೊಸ ಪಕ್ಷ ಕಟ್ಟಲು ಮುಂದಾಗಿರುವ ಶ್ರೀರಾಮುಲು ಜೊತೆ ಈಗಾಗಲೇ ಅಮಾನತುಗೊಂಡಿರುವ ಶಾಸಕರ ಜೊತೆ ಬಿಜೆಪಿಯ ಇನ್ನೂ ಹಲವು ಶಾಸಕರು ಹೋಗಬಹುದೆನ್ನುವ ಆತಂಕವಿದೆ.
ಈ ಹಿನ್ನೆಲೆಯಲ್ಲಿ ಪಕ್ಷೇತರ ಶಾಸಕರನ್ನು ಮತ್ತೆ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಬಿಜೆಪಿ ಮುಂದಾಗಿದ್ದು, ಇಂದು ಮೊದಲ ಹೆಜ್ಜೆಯಾಗಿ ಮಾಜಿ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಹಾಗೂ ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್‌ಗೆ ಮತ್ತೆ ಸಚಿವ ಸ್ಥಾನದ ಆಮಿಷ ವೊಡ್ಡಿ ಅವರ ಬೆಂಬಲ ಪಡೆದು, ನಂತರ ಅವರ ಮೂಲಕವೇ ಉಳಿದ ಪಕ್ಷೇತರ ಶಾಸಕರಾದ ಪಿ.ಎ. ನರೇಂದ್ರ ಸ್ವಾಮಿ, ವೆಂಕಟರಮಣಪ್ಪ, ಡಿ. ಸುಧಾಕರ್ ಹಾಗೂ ಶಿವರಾಜ ತಂಗಡಗಿ ಅವರ ಬೆಂಬಲವನ್ನೂ ಪಕ್ಷಕ್ಕೆ ಮರಳಿ ಪಡೆಯುವ ಪ್ರಯತ್ನ ಮಾಡಿದೆ. ಶಿವರಾಜ್ ತಂಗಡಗಿಗೆ  ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವನಾಗಿ ನೇಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Operation kamala – shivraj tangadagi, gulihatti shekar, d.sudhakar,venkataramanappa, narendraswamy
Please follow and like us:
error