ಕನಕಗಿರಿ ಉತ್ಸವ ಯಶಸ್ವಿ ಆಚರಣೆಗೆ ವಿವಿಧ ಸಮಿತಿಗಳ ರಚನೆ

ಕೊಪ್ಪಳ ಜ.೧೮  ಕನಕಗಿರಿ ಉತ್ಸವವನ್ನು ಬರುವ ಫೆ.೦೨ ಮತ್ತು ೦೩ ರಂದು ಕನಕಗಿರಿಯಲ್ಲಿ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಉತ್ಸವದ ಯಶಸ್ವಿ ನಿರ್ವಹಣೆಗೆ ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ ಸೇರಿದಂತೆ ಒಟ್ಟು ೧೭ ಸಮಿತಿಗಳನ್ನು ರಚಿಸಿ, ಉತ್ಸವ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.  ವಿಶೇಷವೆಂದರೆ, ಉಪಸಮಿತಿಗಳಲ್ಲಿ ವಿವಿಧ ಸಂಘಟನೆಗಳನ್ನೂ ಸಹ ತೊಡಗಿಸಿಕೊಳ್ಳಲಾಗಿದೆ.
  ಕನಕಗಿರಿ ಉತ್ಸವವನ್ನು ಯಶಸ್ವಿಯಾಗಿ ಆಚರಿಸಲು ಅನುಕೂಲವಾಗುವಂತೆ ಹಲವು ಉಪಸಮಿತಿಗಳನ್ನು ರಚಿಸಿದ್ದು ಸಮಿತಿಯ ಅಧ್ಯಕ್ಷರು, ಸದಸ್ಯರುಗಳ ವಿವರ ಇಂತಿದೆ.  
ಸ್ವಾಗತ ಸಮಿತಿ : ಅಧ್ಯಕ್ಷರು- ಸಹಾಯಕ ಆಯುಕ್ತರು, ಸದಸ್ಯರು- ಜಿ.ಪಂ. ಮುಖ್ಯ ಯೋಜನಾಧಿಕಾರಿಗಳು, ಭೂಮಾಪನಾ ಇಲಾಖೆ ಉಪನಿರ್ದೇಶಕರು, ಕೊಪ್ಪಳ ತಹಶೀಲ್ದಾರರು, ಮಾತೃಭೂಮಿ ಯುವಕ ಸಂಘ ಕನಕಗಿರಿ, ರಾಜೀವ್‌ಗಾಂಧಿ ಯುವಕ ಸಂಘ ಕನಕಗಿರಿ. ಸದಸ್ಯ ಕಾರ್ಯದರ್ಶಿ- ಗಂಗಾವತಿ ತಹಶೀಲ್ದಾರ್. ಗೌರವ ಸದಸ್ಯರು- ಕನಕಗಿರಿ ಗ್ರಾ.ಪಂ. ಅಧ್ಯಕ್ಷರು, ಕನಕಗಿರಿ ಕ್ಷೇತ್ರದ ಜಿ.ಪಂ. ಸದಸ್ಯರು, ಕನಕಗಿರಿ ತಾ.ಪಂ. ಸದಸ್ಯರು.
ಸಾಂಸ್ಕೃತಿಕ ಸಮಿತಿ : ಅಧ್ಯಕ್ಷರು- ಜಿ.ಪಂ. ಉಪಕಾರ್ಯದರ್ಶಿಗಳು, ಸದಸ್ಯರು- ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು, ಆರಕ್ಷಕ ಉಪ ಅಧೀಕ್ಷಕರು ಗಂಗಾವತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಖಜಾನಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು, ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು.  
ವೇದಿಕೆ ಸಮಿತಿ : ಅಧ್ಯಕ್ಷರು- ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು, ಸದಸ್ಯರು- ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೊಪ್ಪಳ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಡಿ.ಯು.ಡಿ.ಸಿ., ಕೊಪ್ಪಳ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂ.ರಾ.ಇಂ. ಗಂಗಾವತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಗಂಗಾವತಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪಂಪಾವನ, ಮುನಿರಾಬಾದ್, ಪೌರಾಯುಕ್ತರು, ನಗರಸಭೆ, ಗಂಗಾವತಿ, ಕೇಂದ್ರಸ್ಥಾನಿಕ ಸಹಾಯಕರು, ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಕೊಪ್ಪಳ,  ಕರ್ನಾಟಕ ರಕ್ಷಣಾ ವೇದಿಕೆ ಕನಕಗಿರಿ, ತಿರುಳ್ಗನ್ನಡ ಕ್ರಿಯಾ ಸಮಿತಿ ಕನಕಗಿರಿ.  ಸದಸ್ಯ ಕಾರ್ಯದರ್ಶಿ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕೊಪ್ಪಳ, ಗೌರವ ಸದಸ್ಯರು- ಉಪಾಧ್ಯಕ್ಷರು, ಗ್ರಾ.ಪಂ. ಕನಕಗಿರಿ.  
ಆಹಾರ ಸಮಿತಿ : ಅಧ್ಯಕ್ಷರು- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು, ಸದಸ್ಯರು- ತೋಟಗಾರಿಕೆ ಉಪನಿರ್ದೇಶಕರು, ಕೊಪ್ಪಳ, ಉಪನಿರ್ದೇಶಕರು, ಪಶುಸಂಗೋಪನೆ ಇಲಾಖೆ, ಕೊಪ್ಪಳ, ಪೌರಾಯುಕ್ತರು, ನಗರಸಭೆ, ಗಂಗಾವತಿ, ಅಬಕಾರಿ ನಿರೀಕ್ಷಕರು, ಗಂಗಾವತಿ, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕೊಪ್ಪಳ, ಕನ್ನಡ ಸೇನೆ ಕನಕಗಿರಿ, ಮಾದಿಗ ದಂಡೋರ ಕನಕಗಿರಿ.
ಕ್ರೀಡಾ ಸಮಿತಿ : ಅಧ್ಯಕ್ಷರು- ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರು  ಸದಸ್ಯರು- ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಕನಕಗಿರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ವೈ.ಸುದರ್ಶನರಾವ್ ದೈಹಿಕ, ಅಗ್ರಿ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷರು, ಗಂಗಾವತಿ., ಟೈಗರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು, ಗಂಗಾವತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕನಕಗಿರಿ, ಪಟ್ಟಣ ಸಹಕಾರ ಸಂಘ ಕನಕಗಿರಿ, ಸದಸ್ಯ ಕಾರ್ಯದರ್ಶಿ-ತಾಲೂಕು ಯುವಜನ ಸೇವೆ ಮತ್ತು ಕ್ರೀಡಾಧಿಕಾರಿಗಳು, ಗಂಗಾವತಿ, ಗೌರವ ಸದಸ್ಯರು- ಜಿಲ್ಲಾ ಪಂಚಾಯತ್ ಸದಸ್ಯರು, ಕನಕಗಿರಿ ಕ್ಷೇತ್ರ.
ವಸತಿ ಸಮಿತಿ : ಅಧ್ಯಕ್ಷರು- ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು. ಸದಸ್ಯರು- ಯೋಜನಾ ನಿರ್ದೇಶಕರು, ಡಿ.ಆರ್.ಡಿ.ಎ. ಜಿ.ಪಂ., ಕೊಪ್ಪಳ, ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ, ಕೊಪ್ಪಳ, ತಹಸಿಲ್ದಾರ್, ಕೊಪ್ಪಳ, ಪೌರಾಯುಕ್ತರು, ನಗರಸಭೆ ಕೊಪ್ಪಳ ಮತ್ತು ಗಂಗಾವತಿ.  ತಹಸಿಲ್ದಾರರು, ಗಂಗಾವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ., ಕನಕಗಿರಿ, ಜೈ ಕರ್ನಾಟಕ ಕನಕಗಿರಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕನಕಗಿರಿ.
ಸಾರಿಗೆ ಸಮಿತಿ : ಅಧ್ಯಕ್ಷರು- ಪ್ರಾದೇಶಿಕ ಸಾರಿಗೆ ಅಧಿಕಾರಿಗಳು. ಸದಸ್ಯರು-ವಿಭಾಗೀಯ ನಿಯಂತ್ರಣಾಧಿಕಾರಿಗಳು, ಈ.ಕ.ರ.ಸಾರಿಗೆ ಸಂಸ್ಥೆ, ಕೊಪ್ಪಳ, ತಹಸಿಲ್ದಾರ್, ಕೊಪ್ಪಳ, ಪೌರಾಯುಕ್ತರು, ನಗರಸಭೆ ಕೊಪ್ಪಳ ಮತ್ತು ಗಂಗಾವತಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಡಿ.ಯು.ಡಿ.ಸಿ., ಕೊಪ್ಪಳ, ಟ್ರ್ಯಾಕ್ಟರ್ ಡ್ರೈವರ್ ಸಂಘ ಕನಕಗಿರಿ, ಹಮಾಲರ ಸಂಘ (ಗಂಜ) ಕನಕಗಿರಿ.
ಮೆರವಣಿಗೆ ಸಮಿತಿ : ಅಧ್ಯಕ್ಷರು- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು, ಉಪಾಧ್ಯಕ್ಷರು- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಸದಸ್ಯರು- ಆರಕ್ಷಕ ವೃತ್ತ ನಿರೀಕ್ಷಕರು, ಗಂಗಾವತಿ ಗ್ರಾಮೀಣ., ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಗಂಗಾವತಿ. ಹಮಾಲರ ಸಂಘ(ಬಜಾರ) ಕನಕಗಿರಿ, ಮೇಶನರ್ ಸಂಘ ಕನಕಗಿರಿ.  ಗೌರವ ಸದಸ್ಯರು- ಕನಕಗಿರಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾ.ಪಂ.ಸದಸ್ಯರುಗಳು, ತಾ.ಪಂ. ಸದಸ್ಯರು, , ಸದಸ್ಯ ಕಾರ್ಯದರ್ಶಿ- ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ., ಕನಕಗಿರಿ.
ಆರೋಗ್ಯ ನೈರ್ಮಲ್ಯ ಸಮಿತಿ : ಅಧ್ಯಕ್ಷರು- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಸದಸ್ಯರು- ವೈದ್ಯಾಧಿಕಾರಿಗಳು, ಪ್ರಾ.ಆ.ಕೇಂದ್ರ, ಕನಕಗಿರಿ, ಗಂಗಾವತಿ, ಆಟೋ ಚಾಲಕರ ಸಂಘ ಕನಕಗಿರಿ, ವಾಲ್ಮೀಕಿ ಯುವಕ ಸಂಘ ಕನಕಗಿರಿ.ಸದಸ್ಯ ಕಾರ್ಯದರ್ಶಿ- ತಾಲೂಕು ವೈದ್ಯಾಧಿಕಾರಿಗಳು.
ಭದ್ರತಾ ಸಮಿತಿ : ಅಧ್ಯಕ್ಷರು- ಜಿಲ್ಲಾ ಆರಕ್ಷಕ ಅಧೀಕ್ಷಕರು, ಕೊಪ್ಪಳ, ಸದಸ್ಯರು- ಆರಕ್ಷಕ ಉಪ ಅಧೀಕ್ಷಕರು, ಕೊಪ್ಪಳ, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, ಕೊಪ್ಪಳ, ಕಮಾಂಡೆಂಟ್, ಗೃಹರಕ್ಷಕ ದಳ, ಕೊಪ್ಪಳ, ಶ್ರೀ ಕನಕಾಚಲಪತಿ ರೈತ ಕ್ಷೇಮಾಭಿವೃದ್ದಿ ಸಂಘ ಕನಕಗಿರಿ, ದಲಾಲಿ ವ್ಯಾಪಾರಿಗಳ ಸಂಘ ಕನಕಗಿರಿ, ಸದಸ್ಯ ಕಾರ್ಯದರ್ಶಿ- ಆರಕ್ಷಕ ಉಪ ಅಧೀಕ್ಷಕರು, ಗಂಗಾವತಿ.
ಮಾಧ್ಯಮ ಸಮಿತಿ : ಅಧ್ಯಕ್ಷರು- ಜಿಲ್ಲಾ ವಾರ್ತಾಧಿಕಾರಿಗಳು,  ಸದಸ್ಯರು- ಡಿ.ಐ.ಒ.ಎನ್.ಐ.ಸಿ. ಅಧಿಕಾರಿಗಳು ಕೊಪ್ಪಳ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು,ಕೊಪ್ಪಳ, ಜಂಟಿಕೃಷಿ ನಿರ್ದೇಶಕರ ತಾಂತ್ರಿಕ ಸಹಾಯಕರು, ಪ್ರೋಗ್ರಾಮ್ ಮ್ಯಾನೇಜರ್, ಡಿ.ಹೆಚ್.ಓ., ಕಚೇರಿ, ಕೊಪ್ಪಳ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳು, ಜಿಲ್ಲಾ ಸಾಕ್ಷರತಾ ಸಮಿತಿ ಕೊಪ್ಪಳ, ಸುದ್ದಿ ಮಾಧ್ಯಮ ಸಂಘ ಕನಕಗಿರಿ, ಕಿರಾಣಿ ವರ್ತಕರ ಸಂಘ ಕನಕಗಿರಿ, ಹಿಟ್ಟಿನ ಗಿರಣಿ ಮಾಲೀಕರ ಸಂಘ ಕನಕಗಿರಿ.
ಮೂಲಭೂತ ಸೌಕರ್ಯಗಳ ಸಮಿತಿ : ಅಧ್ಯಕ್ಷರು- ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು, ಸದಸ್ಯರು- ಕಾರ್ಯನಿರ್ವಾಹಕ ಅಭಿಯಂತರರು, ಪಂ.ರಾ.ಇಂ., ವಿಭಾಗ, ಕೊಪ್ಪಳ, ಪೌರಾಯುಕ್ತರು, ನಗರಸಭೆ, ಗಂಗಾವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ., ಕನಕಗಿರಿ, ಉಪನಿರ್ದೇಶಕರು, ಕರ್ನಾಟಕ ಭೂಸೇನಾ ನಿಗಮ, ಕೊಪ್ಪಳ, ಹಿರಿಯ ಭೂ ವಿಜ್ಞಾನಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕೊಪ್ಪಳ, ಶ್ರೀ ಕನಕಾಚಲಪತಿ ಭಜನಾ ಮಂಡಳಿ ಕನಕಗಿರಿ, ಸದಸ್ಯ ಕಾರ್ಯದರ್ಶಿ-ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂ.ರಾ.ಇಂ. ಉಪವಿಭಾಗ, ಗಂಗಾವತಿ.  
ವಸ್ತು ಪ್ರದರ್ಶನ ಸಮಿತಿ : ಅಧ್ಯಕ್ಷರು- ಅರಣ್ಯ ಸಂರಕ್ಷಣಾಧಿಕಾರಿಗಳು, ಸದಸ್ಯರು- ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಕೊಪ್ಪಳ, ಸಹಾಯಕ ನಿರ್ದೇಶಕರು, ಜವಳಿ ಮತ್ತು ಕೈಮಗ್ಗ ಇಲಾಖೆ, ಕೊಪ್ಪಳ, ಸಹಾಯಕ ನಿರ್ದೇಶಕರು, ನಗರ ಯೋಜನಾ ಇಲಾಖೆ, ಕೊಪ್ಪಳ, ಜಿಲ್ಲಾ ಗ್ರಂಥಪಾಲಕರು, ಜಿಲ್ಲಾ ಗ್ರಂಥಾಲಯ, ಕೊಪ್ಪಳ, ಹೆಚ್ಚುವರಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಕೊಪ್ಪಳ, ಖಾದಿ ಮತ್ತು ಗ್ರಾಮೋದ್ಯೋಗ ಉಪನಿರ್ದೇಶಕರು, ಕೊಪ್ಪಳ, ರಾಷ್ಟ್ರೀಯ ಸ್ವಯಂ ಸೇವಾ ಸಂಘ ಕನಕಗಿರಿ, ಸದಸ್ಯ ಕಾರ್ಯದರ್ಶಿ- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪಂಪಾವನ, ಮುನಿರಾಬಾದ್.  
ಸಂಘಟನಾ ಸಮಿತಿ (ಒಟ್ಟಾರೆ ಉಸ್ತುವಾರಿಗಳು) : ಅಧ್ಯಕ್ಷರು- ಜಿಲ್ಲಾಧಿಕಾರಿಗಳು, ಸಹ ಅಧ್ಯಕ್ಷರು- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸದಸ್ಯರು- ಎಲ್ಲ ಸಮಿತಿಗಳ ಅಧ್ಯಕ್ಷರುಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು, ಸದಸ್ಯ ಕಾರ್ಯದರ್ಶಿ- ಅಪರ ಜಿಲ್ಲಾಧಿಕಾರಿಗಳು.
ಪ್ರವಾಸೋದ್ಯಮ ಸಮಿತಿ : ಅಧ್ಯಕ್ಷರು- ಪ್ರವಾಸೋದ್ಯಮ ಇಲಾಖೆ, ಹೊಸಪೇಟೆ, ಸಹಾಯಕ ನಿರ್ದೇಶಕರು.
ವಿದ್ಯುತ್ ಸರಬರಾಜು ಸಮಿತಿ : ಅಧ್ಯಕ್ಷರು- ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು, ಸದಸ್ಯರು- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜೆಸ್ಕಾಂ ಉಪವಿಭಾಗ, ಗಂಗಾವತಿ., ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ನಗರಸಭೆ, ಗಂಗಾವತಿ., ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ. ಕನಕಗಿರಿ. 
ಆಮಂತ್ರಣ ಪತ್ರಿಕೆ ಸಮಿತಿ : ಅಧ್ಯಕ್ಷರು- ಸಹಾಯಕ ಆಯುಕ್ತರು, ಕೊಪ್ಪಳ, ಸದಸ್ಯರು- ತಹಸಿಲ್ದಾರರು, ಗಂಗಾವತಿ, ಕೊಪ್ಪಳ, ಕುಷ್ಟಗಿ ಮತ್ತು ಯಲಬುರ್ಗಾ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ್, ಗಂಗಾವತಿ, ಕೊಪ್ಪಳ, ಕುಷ್ಟಗಿ ಮತ್ತು ಯಲಬುರ್ಗಾ.
  ಕನಕಗಿರಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲು ಸಂಬಂಧಪಟ್ಟ ಎಲ್ಲ ಉಪಸಮಿತಿಗಳ ಅಧ್ಯಕ್ಷರು, ಸದಸ್ಯರು, ಗೌರವ ಸದಸ್ಯರು, ಸದಸ್ಯ ಕಾರ್ಯದರ್ಶಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು.  ಅಲ್ಲದೆ ಅಧಿಕಾರಿಗಳು ತಮಗೆ ವಹಿಸಿರುವಂತಹ ಕಾರ್ಯಗಳನ್ನು ಚಾಚೂ ತಪ್ಪದೆ, ಸಮರ್ಪಕವಾಗಿ ನಿರ್ವಹಿಸಿ, ಉತ್ಸವದ ಯಶಸ್ವಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಕೋರಿದ್ದಾರೆ.
Please follow and like us:
error