ಕುಷ್ಟಗಿ: ಪಟ್ಟಣದ 12ನೇ ವಾರ್ಡ್ನಲ್ಲಿರುವ ಪ್ರಮುಖ ರಸ್ತೆಯ ಕಾಂಕ್ರೀಟ್ ಸೇತುವೆ ಕುಸಿದು ಹಾಳಾಗಿದ್ದು ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದಿದೆ.
ವರ್ಷದ ಹಿಂದಷ್ಟೇ ನಿರ್ಮಿಸಿರುವ ಈ ಕಾಂಕ್ರೀಟ್ ಸೇತುವೆ ಕಾಮಗಾರಿಯನ್ನು ನಿರ್ವಹಿಸಿದ ಗುತ್ತಿಗೆದಾರರು ಕಳಪೆ ಕೆಲಸ ನಡೆಸಿದ್ದರಿಂದ ಅದು ಕುಸಿದು ಬಿದ್ದಿದೆ. ತಿಂಗಳ ಹಿಂದೆ ರಸ್ತೆ ಮಧ್ಯೆ ಗುಂಡಿ ಬಿದ್ದರೂ ಪುರಸಭೆ ಗಮನಹರಿಸಿಲ್ಲ ಎಂದು ಸಾರ್ವಜನಿಕರು ದೂರಿದರು.

ಅಲ್ಲದೇ ಪುರಸಭೆ ಸದಸ್ಯರಿಗೆ ಇದರ ಬಗ್ಗೆ ಗಮನವಿಲ್ಲ, ಪ್ರಭಾರ ಅಧಿಕಾರ ವಹಿಸಿಕೊಂಡಿರುವ ತಹಶೀಲ್ದಾರರು ಈ ಮಾರ್ಗದಲ್ಲಿ ಸಂಚರಿಸುವುದಿಲ್ಲ. ಪುರಸಭೆ ಸಿಬ್ಬಂದಿ ಅದನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತಿಲ್ಲ ಎಂದು ಹೇಳಿದರು.
ಈ ಕುರಿತು ವಿವರಿಸಿದ ಸದರಿ ವಾರ್ಡಿನ ಸದಸ್ಯ ಅಮೀನುದ್ದೀನ ಮುಲ್ಲಾ, ಕುಸಿದುಬಿದ್ದಿರುವ ರಸ್ತೆಸೇತುವೆಯನ್ನು ದುರಸ್ತಿಗೊಳಿಸಲು ಎಂಜಿನಿಯರ್ರಿಗೆ ಸೂಚಿಸುವಂತೆ ತಹಶೀಲ್ದಾರರಿಗೆ ಪತ್ರ ಬರೆದಿದ್ದು ನಾಳೆಯೇ ಕೆಲಸ ಆರಂಭಗೊಳ್ಳಲಿದೆ ಎಂದರು.
ಒತ್ತಾಯ: ಸಾಕಷ್ಟು ಹಣ ಪಡೆದುಕೊಂಡರೂ ಕಳಪೆ ಕೆಲಸ ನಿರ್ವಹಿಸಿದ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸುವಂತೆ ಜನರು ಒತ್ತಾಯಿಸಿದ್ದಾರೆ.
Please follow and like us: