ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಶಿಸ್ತು ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳೆಸುತ್ತದೆ – ಎಸ್.ಡಿ.ಎಂ.ಸಿ ಸದಸ್ಯ ಶ್ರೀನಿವಾಸ ರಾವ್.

ಹೊಸಪೇಟೆ-18- ರಾಷ್ಟ್ರೀಯ ಸೇವಾ ಯೋಜನಾ ಘಟಕವು  ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಶಿಸ್ತು ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳೆಸುತ್ತದೆ ಎಂದು ರೋಟರಿ ಮಾಜಿ ಅಧ್ಯಕ್ಷ ಹಾಗೂ ಎಸ್.ಡಿ.ಎಂ.ಸಿ ಸದಸ್ಯ ಶ್ರೀನಿವಾಸ ರಾವ್ ತಿಳಿಸಿದರು.
    ಅವರು ನಗರದ ರಾಜ್ಯ ಸರಕಾರಿ ನೌಕರರ ಭವನದಲ್ಲಿಂದು ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಆಯುಷ್ ಇಲಾಖೆ ರೋಟರಿ ಮತ್ತು ಇನ್ನರ್‌ವೀಲ್  ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಕರೆ ನೀಡಿದರು.
  ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿ ಮುಂದಿನ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಎನ್.ಎಸ್.ಎಸ್. ಘಟಕ ಉತ್ತಮ ಕೊಡುಗೆ ನೀಡುತ್ತಿವೆ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಸಂಘಟನೆಗಳಲ್ಲಿ ಭಾಗವಹಿಸಿ ಭವಿಷ್ಯವನ್ನ ಉನ್ನತೀಕರಿಸಿಕೊಳ್ಳಿ ಎಂದು ಇನ್ನರ್ ವೀಲ್ ಅಧ್ಯಕ್ಷೆ ನಂದಿನಿ ಚಿಕ್ಕ್‌ಮಠ್ ಆಶಿಸಿದರು.
    ಎನ್.ಎಸ್.ಎಸ್. ಘಟಕದ ಮುಖ್ಯಸ್ಥ ಟಿ.ಮಂಜು ನಾಥ್ ಅಧ್ಯಕ್ಷತೆ ವಹಿಸಿದ್ದರು, ರೋಟರಿ ಕಾರ್ಯದರ್ಶಿ ಡಾ.ಮುನಿವಾಸುದೇವ ರೆಡ್ಡಿ, ಜಂಟಿ ಕಾರ್ಯದರ್ಶಿ ಕೆ.ಕೃಷ್ಣ ಮೂರ್ತಿ, ಇನ್ನರ್‌ವೀಲ್  ಕಾರ್ಯದರ್ಶಿ ರೇಖಾ ಪ್ರಕಾಶ್,  ಉಪನ್ಯಾಸಕ ಕೆ.ವಿಜಯ ಭಾಸ್ಕರ್ ಉಪಸ್ಥಿತರಿದ್ದರು.
  ಆಯುಷ್ ಇಲಾಖೆಯ ಡಾ.ಮುನಿವಾಸು ದೇವ ರೆಡ್ಡಿ ರೋಗಿಗಳನ್ನು ತಪಾಸಿಸಿ ಔಷಧಿ ವಿತರಿಸಿದರು.
    ವಿದ್ಯಾರ್ಥಿಗಳಾದ ಸಮೀರ ಸ್ವಾಗತಿಸಿದಳು, ನಿರೂಪಣೆ ಅಶ್ವಿನಿ,  ಪ್ರಾರ್ಥನೆ ಗಿರಿಜಾ ಮತ್ತು ಚೇತನರಿಂದ, ಎನ್.ಎಸ್.ಎಸ್. ಗೀತೆ ಹೀನಾ ಸಂಗಡಿಗರಿಂದ, ಮಮತ ವಂದಿಸಿದಳು.

Please follow and like us:
error